ಹೆಲ್ಮೆಟ್‌, ಗ್ಲೌಸ್‌ ಎಸೆದು ಕೊಹ್ಲಿ ಆಕ್ರೋಶ

1 Min Read

ಮುಂಬೈ: ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಔಟಾದ ನಂತರ ವಿರಾಟ್‌ ಕೊಹ್ಲಿ (Virat Kohli) ಹೆಲ್ಮೆಟ್‌ ಮತ್ತು ಗ್ಲೌಸ್‌ ಎಸೆದು ಸಿಟ್ಟು ಹೊರಹಾಕಿದ್ದಾರೆ.

ಕೊಹ್ಲಿ 50 ರನ್‌(38 ಎಸೆತ, 5 ಬೌಂಡರಿ, 1 ಸಿಕ್ಸ್‌) ಗಳಿಸಿದ ಬಳಿಕ ಪಾಂಡ್ಯ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋಗಿ ಲಾಂಗ್‌ ಆನ್‌ ಬಳಿ ಸೂರ್ಯಕುಮಾರ್‌ ಯಾದವ್‌ಗೆ ಕ್ಯಾಚ್‌ ನೀಡಿ ಔಟಾದರು.

ಓಟಾದ ಬೆನ್ನಲ್ಲೇ ಅಸಮಾಧಾನಗೊಂಡ ಕೊಹ್ಲಿ ಬೌಂಡರಿ ಗೆರೆ ದಾಟಿ ಡಗೌಟ್‌ ಪ್ರವೇಶಿಸುವ ಸಂದರ್ಭದಲ್ಲಿ ಹೆಲ್ಮೆಟ್‌ (Helmet) ಮತ್ತು ಗ್ಲೌಸ್‌(Gloves) ಎಸೆದಿದ್ದಾರೆ. ಇದನ್ನೂ ಓದಿ: IPL 2026 – ಚೆನ್ನೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಅಂಪೈರ್ ನಿರ್ಣಯ ಕಾರಣವಾಯ್ತಾ?

ಮೊದಲ ವಿಕೆಟಿಗೆ ಫಿಲ್‌ ಸಾಲ್ಟ್‌ ಮತ್ತು ಕೊಹ್ಲಿ 65 ಎಸೆತಗಳಲ್ಲಿ 120 ರನ್‌ ಹೊಡೆದಿದ್ದರು. ಈ ಜೊತೆಯಾಟದಲ್ಲಿ ಸಾಲ್ಟ್‌ 36 ಎಸೆತಗಳಲ್ಲಿ 78 ರನ್‌ ಚಚ್ಚಿದ್ದರೆ ಕೊಹ್ಲಿ 29 ಎಸೆತ ಎದುರುಸಿ 38 ರನ್‌ ಹೊಡೆದಿದ್ದರು. ಇದನ್ನೂ ಓದಿ: ಬಟ್ಲರ್‌ ಬೊಂಬಾಟ್‌ ಬ್ಯಾಟಿಂಗ್‌ – ಲಕ್ನೋಗೆ ಲಗಾಮು ಹಾಕಿದ ಗುಜರಾತ್‌ಗೆ 7 ವಿಕೆಟ್‌ಗಳ ಜಯ

ಎರಡನೇ ವಿಕೆಟಿಗೆ ಕೊಹ್ಲಿ ಮತ್ತು ನಾಯಕ ರಜತ್‌ ಪಟೀದರ್‌ 23 ಎಸೆತಗಳಲ್ಲಿ 65 ರನ್‌ ಜೊತೆಯಾಟವಾಡಿದ್ದರು. ಈ ಆಟದಲ್ಲಿ ಪಟೀದಾರ್‌ ಕೇವಲ 14 ಎಸೆತಗಳಲ್ಲಿ 47 ರನ್‌ ಹೊಡೆದಿದ್ದರೆ ಕೊಹ್ಲಿ 9 ಎಸೆತಗಳಲ್ಲಿ ಕೇವಲ 12 ರನ್‌ ಮಾತ್ರ ಬಾರಿಸಿದ್ದರು.

ಈ ಪಂದ್ಯದಲ್ಲಿ ಕೊಹ್ಲಿ ಕಡೆಯಿಂದ ಯಾವುದೇ ಸ್ಫೋಟಕ ಆಟ ಬಂದಿರಲಿಲ್ಲ. ಈ ಕಾರಣಕ್ಕೆ ಅಸಮಾಧಾನಗೊಂಡು ಕೊಹ್ಲಿ ಹೆಲ್ಮೆಟ್‌ ಮತ್ತು ಗ್ಲೌಸ್‌ ಎಸೆದಿರಬಹುದು ಎಂದು ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ.

Share This Article