ಕೋಲ್ಕತ್ತಾ: ಯೋಗವು (Yoga) ಕೇವಲ ದೈಹಿಕ ಕಸರತ್ತಲ್ಲ ಅಥವಾ ಇದು ಯಾವುದೇ ನಿರ್ದಿಷ್ಟ ವಯೋಮಾನದವರಿಗೆ ಸೀಮಿತವಾಗಿಲ್ಲ. ಇದು ಮಾನವ ಚೇತನದ ಅದ್ಭುತ ಅಭಿವ್ಯಕ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಕೋಲ್ಕತ್ತಾದ(Kolkata) ಐತಿಹಾಸಿಕ ‘ರೆಡ್ ರೋಡ್’ನಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ(International Yoga Day Celebrations) ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೂನ್ 21 ಭೂಮಿಯ ಮೇಲಿನ ಸುದೀರ್ಘ ದಿನವಾಗಿದೆ. ಆದರೆ ಈಗ ಯೋಗದ ಕಾರಣದಿಂದಾಗಿ ಇದು ವಿಶ್ವದ ಅತಿ ಹೆಚ್ಚು ಜನ ಭಾಗವಹಿಸುವ ಆಚರಣೆಯ ದಿನವಾಗಿ ಮಾರ್ಪಟ್ಟಿದೆ ಎಂದರು.
From physical wellness to inner peace, yoga enriches every aspect of life. Delighted to join this year’s celebrations in Kolkata. https://t.co/75UZECw8JR
— Narendra Modi (@narendramodi) June 21, 2026
ವಿಶ್ವವು ಇಂದು ಒಂದಕ್ಕೊಂದು ಬೆಸೆದುಕೊಂಡಿರುವಂತೆ ಕಾಣುತ್ತಿದೆ. ಇದುವೇ ಯೋಗದ ಶಕ್ತಿ. ಯೋಗವು ಪ್ರತಿಯೊಬ್ಬರನ್ನೂ ಜೋಡಿಸುತ್ತದೆ, ಎಲ್ಲರನ್ನೂ ಒಟ್ಟಿಗೆ ತರುತ್ತದೆ. ಈ ಶುಭ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾನು ಇಡೀ ಜಗತ್ತಿಗೆ ಹಾಗೂ ಇಡೀ ಮಾನವ ಕುಲಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಇಂದು ಯೋಗ ದಿನದಂದು, ವಿಶೇಷವಾಗಿ ಬಂಗಾಳದ ಜನತೆ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಇದು ಅತ್ಯಂತ ಅದ್ಭುತವಾದ ಉಪಕ್ರಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಈ ಬಾರಿಯ ಯೋಗ ದಿನಾಚರಣೆಯನ್ನು ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ (Yoga for Healthy Ageing)ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಯಸ್ಸಾದಂತೆ ದೈಹಿಕ ಫಿಟ್‌ನೆಸ್, ಮಾನಸಿಕ ಸಮತೋಲನ ಮತ್ತು ಸಕ್ರಿಯ ಜೀವನವನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರವನ್ನು ಈ ವರ್ಷದ ಥೀಮ್ ಎತ್ತಿ ತೋರಿಸುತ್ತದೆ.
