– ಫಲವತ್ತತೆ ಕುಸಿದಿರುವುದು ಜನಸಂಖ್ಯಾ ಬದಲಾವಣೆಯ ಆರಂಭ ಮುನ್ಸೂಚನೆ
– ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವರದಿ ಪ್ರಕಟ
ನವದೆಹಲಿ: ಭಾರತದ ಜನಸಂಖ್ಯೆ (India’s population) 2025ರ ಅಂತ್ಯದ ವೇಳೆಗೆ 146 ಕೋಟಿಗೆ ತಲುಪಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆಯ ವರದಿ ತಿಳಿಸಿದೆ.
United Nations Population Fund (UNFPA) ತನ್ನ ವರದಿಯಲ್ಲಿ ಭಾರತದ ಪ್ರತಿ ಮಹಿಳೆಯ ಸಂತಾನೋತ್ಪತಿ ಸರಾಸರಿ ಫಲವತ್ತತೆ ದರ (Fertility Rate ) 2.1 ಇತ್ತು. ಆದರೆ ಈಗ ಇದು 1.9ಕ್ಕೆ ಕುಸಿದಿದೆ. ಫಲವತ್ತತೆ ಕುಸಿದಿರುವುದು ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಆರಂಭದ ಮುನ್ಸೂಚನೆ ಎಂದು ಹೇಳಿದೆ.
ತಲೆಮಾರಿನಿಂದ ತಲೆಮಾರಿಗೆ ದೇಶದ ಜನಸಂಖ್ಯಾ ಗಾತ್ರವನ್ನು ಕಾಪಾಡಲು ಅಗತ್ಯವಿರುವಷ್ಟು ಮಕ್ಕಳಿಗೆ ಜನ್ಮನೀಡುವ ಸಾಮರ್ಥ್ಯ ಭಾರತೀಯ ಮಹಿಳೆಯರಲ್ಲಿ ಕುಸಿಯುತ್ತಿದೆ ಎಂಬ ಆತಂಕವನ್ನು ವರದಿ ಹೊರಹಾಕಿದೆ. ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತಕ್ಕೆ ರಾಹುಲ್ ಗಾಂಧಿ ಅತೃಪ್ತಿ – ಕ್ರೆಡಿಟ್ ಲೆಕ್ಕಾಚಾರದಲ್ಲಿ ಅವಸರದ ತೀರ್ಮಾನ?
ವರದಿಯಲ್ಲಿ ಏನಿದೆ?
150 ಕೋಟಿ ಸನಿಹದಲ್ಲಿರುವ ಜನಸಂಖ್ಯೆ 170 ಕೋಟಿಗೆ ಏರಿ ನಂತರ 40 ವರ್ಷಗಳ ಬಳಿಕ ಇಳಿಮುಖವಾಗಲಿದೆ. ಜನನ ದರ ನಿಧಾನವಾಗುತ್ತಿದ್ದರೂ, ಭಾರತದ ಯುವ ಜನಸಂಖ್ಯೆಯು ಗಮನಾರ್ಹವಾಗಿ ಉಳಿದಿದೆ.
0-14ರ ವಯೋಮಾನದವರ ಸಂಖ್ಯೆ ಶೇ.24ರಷ್ಟಿದ್ದರೆ 10 ರಿಂದ 19ರ ವಯೋಮಾನದವರು ಶೇ.17ರಷ್ಟಿದ್ದಾರೆ. 15ರಿಂದ 64ರ ವಯೋಮಾನದ ದುಡಿಯುವ ವರ್ಗ ಶೇ.68ರಷ್ಟಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಜಾತಿ ಗಣತಿ ಸಮೀಕ್ಷೆ – ಪ್ರಬಲ ಸಮುದಾಯದ ಒತ್ತಡಕ್ಕೆ ಮಣಿದ ʼಕೈʼಕಮಾಂಡ್
2025ರಲ್ಲಿ ಭಾರತೀಯರ ಜೀವಿತಾವಧಿಯು ಸರಾಸರಿಯಾಗಿ ಪುರುಷರಲ್ಲಿ 71 ವರ್ಷ ಹಾಗೂ ಮಹಿಳೆಯರಲ್ಲಿ 74 ವರ್ಷಕ್ಕೆ ಏರಿಕೆಯಾಗಿದೆ. ವಯಸ್ಸಾದ ಜನಸಂಖ್ಯೆ (65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಪ್ರಸ್ತುತ ಏಳು ಪ್ರತಿಶತದಷ್ಟಿದ್ದು, ಜೀವಿತಾವಧಿ ಸುಧಾರಿಸಿದಂತೆ ಮುಂಬರುವ ದಶಕಗಳಲ್ಲಿ ಸರಾಸಿ ವರ್ಷ ಹೆಚ್ಚಾಗುವ ನಿರೀಕ್ಷೆಯಿದೆ.
1960 ರಲ್ಲಿ ಭಾರತದ ಜನಸಂಖ್ಯೆಯು ಸುಮಾರು 43.6 ಕೋಟಿ ಇದ್ದಾಗ ಸರಾಸರಿ ಮಹಿಳೆ ಸುಮಾರು ಆರು ಮಕ್ಕಳನ್ನು ಹೆರುತ್ತಿದ್ದರು. ಈಗ ಮಹಿಳೆ ಸರಾಸರಿಯಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.