Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶದ ಮೊದಲ ಹೈಡ್ರೋಜನ್ ರೈಲು ಚಾಲನೆಗೆ ದಿನಗಣನೆ; ಏನಿದರ ವಿಶೇಷತೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೇಶದ ಮೊದಲ ಹೈಡ್ರೋಜನ್ ರೈಲು ಚಾಲನೆಗೆ ದಿನಗಣನೆ; ಏನಿದರ ವಿಶೇಷತೆ?

Latest

ದೇಶದ ಮೊದಲ ಹೈಡ್ರೋಜನ್ ರೈಲು ಚಾಲನೆಗೆ ದಿನಗಣನೆ; ಏನಿದರ ವಿಶೇಷತೆ?

Public TV
Last updated: January 3, 2026 3:45 pm
Public TV
Share
2 Min Read
hydrogen train
SHARE

ಚಂಡೀಗಢ: ದೇಶದ ಮೊದಲ ಹೈಡ್ರೋಜನ್ ರೈಲು (Hydrogen Train) ಜೀಂದ್‌ಗೆ ಆಗಮಿಸಿದ್ದು, ಇತಿಹಾಸದಲ್ಲಿ ಹೊಸ ಅಧ್ಯಾಯ ರಚಿಸುವತ್ತ ಸಿದ್ಧವಾಗಿದೆ. ಈ ರೈಲು ಜನವರಿ 20ರ ನಂತರ ಸೋನಿಪತ್ ಮಾರ್ಗದಲ್ಲಿ ಚಾಲನೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹೈಡ್ರೋಜನ್ ರೈಲು ಆರಂಭವಾದರೆ ಜೀಂದ್ ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ನಗರಗಳ ಸಾಲಿನಲ್ಲಿ ಸೇರ್ಪಡೆಯಾಗಲಿದೆ.

ಲಖನೌದ ಆರ್‌ಡಿಎಸ್‌ಓ (ಅನುಸಂಧಾನ ಮತ್ತು ಅಭಿವೃದ್ಧಿ ಸಂಸ್ಥೆ)ಯ ಎರಡು ತಂಡಗಳು ಜೀಂದ್‌ಗೆ ಆಗಮಿಸಿ, ರೈಲು ಮತ್ತು ಹೈಡ್ರೋಜನ್ ಘಟಕದ ಪರೀಕ್ಷೆ ನಡೆಸುತ್ತಿವೆ. ಪರೀಕ್ಷೆ ಪೂರ್ಣಗೊಂಡ ನಂತರ ರೈಲಿಗೆ ಹಸಿರು ನಿಶಾನೆ ನೀಡಲಾಗುವುದು. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌ – 14 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಸ್ವದೇಶಿ ತಂತ್ರಜ್ಞಾನದ ಮೇರುಕೃತಿ ಈ ರೈಲನ್ನು ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ರಾಡ್ ಗೇಜ್ ಮಾರ್ಗದಲ್ಲಿ ಚಲಿಸುವ ಇದು ವಿಶ್ವದ ಅತಿ ಉದ್ದದ (10 ಬೋಗಿಗಳು) ಮತ್ತು ಅತಿ ಶಕ್ತಿಶಾಲಿ (2400 ಕಿಲೋವಾಟ್) ಹೈಡ್ರೋಜನ್ ರೈಲಾಗಿದೆ. ಒಂದು ಬಾರಿಗೆ 2,500 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಈ ರೈಲು ಗರಿಷ್ಠ 140 ಕಿಮೀ ವೇಗದಲ್ಲಿ ಚಲಿಸಲಿದೆ. 360 ಕೆಜಿ ಹೈಡ್ರೋಜನ್‌ನಿಂದ 180 ಕಿಮೀ ದೂರ ಪ್ರಯಾಣಿಸಬಲ್ಲದು. ಇದರ ವೆಚ್ಚ ಸುಮಾರು 82 ಕೋಟಿ ರೂಪಾಯಿ. ಚೆನ್ನೈಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಬೋಗಿಗಳನ್ನು ತಯಾರಿಸಲಾಗಿದೆ.

ಜರ್ಮನಿ, ಜಪಾನ್, ದಕ್ಷಿಣ ಕೊರಿಯಾ, ಕೆನಡಾ, ಫ್ರಾನ್ಸ್, ಸ್ವೀಡನ್ ನಂತರ ಭಾರತ ಹೈಡ್ರೋಜನ್ ರೈಲು ಹೊಂದಿದ ಎಂಟನೇ ದೇಶವಾಗಲಿದೆ. ಪರಿಸರ ಸ್ನೇಹಿ ಮತ್ತು ಆಧುನಿಕ ಸೌಲಭ್ಯಗಳು ಈ ರೈಲು ಶೂನ್ಯ ಕಾರ್ಬನ್ ಡೈಆಕ್ಸೈಡ್ ಹೊರಸೂಸುತ್ತದೆ. ಕೇವಲ ನೀರು ಮತ್ತು ಆವಿಯನ್ನು ಮಾತ್ರ ಹೊರಹಾಕುತ್ತದೆ. ಮೆಟ್ರೋ ಶೈಲಿಯ ಬಾಗಿಲುಗಳು, ಶಬ್ದರಹಿತ ಚಲನೆ, ಎಸಿ, ಫ್ಯಾನ್, ಲೈಟ್ ಸೌಲಭ್ಯಗಳು, ಪ್ರತಿ ಬೋಗಿಯಲ್ಲಿ ಡಿಸ್‌ಪ್ಲೇ ಮೂಲಕ ಮುಂದಿನ ನಿಲ್ದಾಣ ಮಾಹಿತಿ – ಇವೆಲ್ಲವೂ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ.

ಡೀಸಲ್ ರೈಲುಗಳಿಗೆ ಹೋಲಿಸಿದರೆ ಇದು ಪರಿಸರಕ್ಕೆ ಸ್ನೇಹಿ ಮತ್ತು ಇಂಧನ ವೆಚ್ಚದಲ್ಲಿ ಉಳಿತಾಯ ಮಾಡಲಿದೆ. ಡೀಸಲ್ ರೈಲು 1 ಕಿಮೀಗೆ 4.5 ಲೀಟರ್ ಡೀಸಲ್ ಬಳಸುತ್ತದೆಯಾದರೆ, ಈ ರೈಲು 2 ಕೆಜಿ ಹೈಡ್ರೋಜನ್‌ನಲ್ಲಿ ಅದೇ ದೂರ ಕ್ರಮಿಸಲಿದೆ. ಜೀಂದ್‌ನ ಮೂರು ಮತ್ತು ದೆಹಲಿಯ ಇಬ್ಬರು ಲೋಕೋ ಪೈಲಟ್‌ಗಳಿಗೆ ಚೆನ್ನೈಯಲ್ಲಿ ತರಬೇತಿ ನೀಡಲಾಗಿದೆ. ನಂತರ ಜಲಂಧರ್‌ನಲ್ಲಿ ಹೆಚ್ಚಿನ ತರಬೇತಿ ನೀಡಲಾಗಿದೆ. ಇದನ್ನೂ ಓದಿ: ಹೊಸ ವರ್ಷದ ಮುನ್ನಾದಿನ ಅಮೆರಿಕದಲ್ಲಿ ಐಸಿಸ್‌ ಪ್ರೇರಿತ ದಾಳಿ ವಿಫಲ – ಅಪ್ರಾಪ್ತ ವಶಕ್ಕೆ

ಈ ಬಗ್ಗೆ ಮಾತನಾಡಿದ ರೈಲ್ವೆ ಅಧಿಕಾರಿ ಅಜಯ್ ಮೈಕಲ್, ರೈಲು ನಮ್ಮ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಟ್ರ್ಯಾಕ್‌ನಲ್ಲಿ ಟ್ರಯಲ್ ನಂತರ ಚಾಲನೆ ಆರಂಭವಾಗಲಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದರು. ಹೈಡ್ರೋಜನ್ ಘಟಕ ಮ್ಯಾನೇಜರ್ ಸಂಜಯ್ ಮಾತಮಾಡಿ, ನಮ್ಮ ತಯಾರಿ ಪೂರ್ಣವಾಗುತ್ತಿದೆ. ರೈಲ್ವೆಯಿಂದ ದಿನಾಂಕ ನಿಗದಿಯಾಗಬೇಕು. ಈ ಹೈಡ್ರೋಜನ್ ರೈಲು ಭಾರತದ ಸ್ವಚ್ಛ ಇಂಧನ ಕ್ರಾಂತಿಯಲ್ಲಿ ಮೈಲುಗಲ್ಲಾಗಲಿದೆ. ಪ್ರದೂಷಣರಹಿತ ಪ್ರಯಾಣದ ಹೊಸ ಯುಗಕ್ಕೆ ಜೀಂದ್ ಸಾಕ್ಷಿಯಾಗಲಿದೆ ಎಂದರು.

TAGGED:Hydrogen TrainindiaJind–Sonepat Routeಜೀಂದ್‌ಭಾರತಹೈಡ್ರೋಜನ್‌ ರೈಲು
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
20 minutes ago
Heavy rains in Bengaluru Bowring Hospital wall collapses 6 dead
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ ಅಮಾನತು

Public TV
By Public TV
31 minutes ago
Cabinet Meet
Bengaluru City

ಬಿಡದಿ ಟೌನ್‌ಶಿಪ್‌ಗೆ 18,000 ಕೋಟಿ; ಬೆಂಗಳೂರು-ಬೀದರ್ ಮಧ್ಯೆ ಮತ್ತೆ ವಿಮಾನ ಯಾನಕ್ಕೆ ಸಂಪುಟ ಒಪ್ಪಿಗೆ

Public TV
By Public TV
1 hour ago
India GDP
Latest

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ಅಪಾಯದಲ್ಲಿದೆ – ಕೇಂದ್ರ ಕಳವಳ

Public TV
By Public TV
2 hours ago
Nepal Airlines
Latest

ಜಮ್ಮು-ಕಾಶ್ಮೀರ, ಲಡಾಖ್‌ ಪಾಕ್‌ನ ಭಾಗ ಅಂತ ತೋರಿಸಿ ಯಡವಟ್ಟು – ನೇಪಾಳದ ಏರ್‌ಲೈನ್ಸ್‌ ಕ್ಷಮೆಯಾಚನೆ

Public TV
By Public TV
2 hours ago
Rajat Patidar Catch
Cricket

Catch Controversy | ಜೇಸನ್‌ ಹೋಲ್ಡರ್‌ ಕ್ಯಾಚ್‌ ವಿವಾದ – ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?