ವಾಷಿಂಗ್ಟನ್: ಕ್ಯಾಲಿಫೋರ್ನಿಯಾದ (California) ಬಿಗ್ ಪೈನ್ ಲೇಕ್ಸ್ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಏಕಾಂಗಿ ಪಾದಯಾತ್ರೆ ವೇಳೆ ಕಾಣೆಯಾಗಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಾಂತಾ ಬಾರ್ಬರಾ (UCSB) ಭಾರತೀಯ ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ.
ವಿಕ್ರಮ್ ಮುಬಾಯಿ ಮೃತ ದುರ್ದೈವಿ. ಈತ UCSB ಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ. ಆತನ ಮೃತದೇಹವನ್ನು ಇನ್ಯೊ ರಾಷ್ಟ್ರೀಯ ಅರಣ್ಯದಿಂದ ವಶಪಡಿಸಿಕೊಂಡಿದೆ. ಇದನ್ನೂ ಓದಿ: ಕೊಡಗು | ಹಾಡಹಗಲೇ ಕಾಫಿ ತೋಟದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ
ಡಾಕ್ಟರೇಟ್ ವಿದ್ಯಾರ್ಥಿ ಕೊನೆಯ ಬಾರಿಗೆ ಆಗಸ್ಟ್ 1 ರಂದು ರಾತ್ರಿ 8:30 ರ ಸುಮಾರಿಗೆ ತನ್ನ ಕುಟುಂಬವನ್ನು ಸಂಪರ್ಕಿಸಿದ್ದ. ನಿಗದಿತ ಸಮಯಕ್ಕೆ ತನ್ನ ಮನೆಗೆ ಹಿಂತಿರುಗದ ಕಾರಣ ಕುಟುಂಬದ ಸಂಪರ್ಕಕ್ಕೆ ಸಿಗಲಿಲ್ಲ. ವಿಕ್ರಮ್ ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಯಿತು. ಕ್ಯಾಲಿಫೋರ್ನಿಯಾ ಹೆದ್ದಾರಿ ಪೆಟ್ರೋಲ್‌ನಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆಗಸ್ಟ್ 3 ರ ಸಂಜೆ ಮೃತದೇಹ ಪತ್ತೆಯಾಗಿದೆ.
ವಿಕ್ರಮ್ ಹೇಗೆ ಮೃತಪಟ್ಟ ಎಂಬುದರ ಕುರಿತು ತನಿಖಾಧಿಕಾರಿಗಳು ವಿವರಗಳನ್ನು ಬಿಡುಗಡೆ ಮಾಡಿಲ್ಲ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಏರ್‌ಗನ್‌ನಿಂದ 45 ನಿಮಿಷ ಮನಸೋಇಚ್ಛೆ ಫೈರ್ ಮಾಡಿದ ಟೆಕ್ಕಿ!



