– ದಾಖಲೆಯ ಶತಕ ಸಿಡಿಸಿ ದಿಗ್ಗಜರ ಎಲೈಟ್ ಲಿಸ್ಟ್ ಸೇರಿದ ದಿನುಶಾ
ಕೊಲಂಬೊ: ಭಾರತ ಮತ್ತು ಶ್ರೀಲಂಕಾ (Sri Lanka) ನಡುವಿನ 2ನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯಗೊಂಡಿದ್ದು, 2 ಪಂದ್ಯಗಳ ಟೆಸ್ಟ್ ಸರಣಿಯನ್ನ ಭಾರತ (India) 1-0 ಅಂತರದಲ್ಲಿ ಗೆದ್ದುಕೊಂಡಿದೆ.
ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವು ಕೊನೆಯವರೆಗೂ ರೋಚಕತೆಯಿಂದ ಕೂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಫಾಲೋ ಆನ್‌ಗಿಳಿದ ಲಂಕಾ 5ನೇ ದಿನ ದಿಟ್ಟ ಹೋರಾಟ ನಡೆಸಿ, ಪಂದ್ಯವನ್ನು ಡ್ರಾನತ್ತ ತಿರುಗಿಸಿತು.
A HISTORIC CLUB – SONAL DINUSHA IS HERE TO STAY 💥 pic.twitter.com/ddNwZiHL0C
— Johns. (@CricCrazyJohns) August 27, 2026
16 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಲಂಕಾ
4ನೇ ದಿನದ ಅಂತ್ಯಕ್ಕೆ 229 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡ ಕೇವಲ 16 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಹೀಗಾಗಿ ಲಂಕಾ 100 ರನ್‌ಗಳಿಸುವುದೂ ಕಷ್ಟವೆಂದೇ ಭಾವಿಸಲಾಗಿತ್ತು. ಜೊತೆಗೆ ಭಾರತಕ್ಕೂ ಸುಲಭ ಗೆಲುವು ಸಿಗಲಿದೇ ಎಂದೇ ಭಾವಿಸಲಾಗಿತ್ತು. ಆದ್ರೆ ಸೋನಲ್ ದಿನುಶಾ (Sonal Dinusha) ಅವರ ದಾಖಲೆಯ ಶತಕ, ಲಹಿರು ಕುಮಾರ ಅವರ ತಾಳ್ಮೆಯ ಆಟ ಲಂಕಾ ತಂಡವನ್ನ ಸೋಲಿನ ದವಡೆಯಿಂದ ಪಾರುಮಾಡಿತು.
ಒಂದೆಡೆ ದಿನುಶಾ ದಾಖಲೆಯ ಶತಕ ಸಿಡಿಸಿ, ರನ್ ಪೇರಿಸುತ್ತಿದ್ದರೆ ಮತ್ತೊಂದು ಕಡೆ ಲಹಿರು ಕುಮಾರ ಕ್ರೀಸ್‌ನಲ್ಲಿ ನಿಂತು ಸಾಥ್ ನೀಡಿದರು. 8ನೇ ವಿಕೆಟ್‌ಗೆ ನುವಂತಾ – ದಿನುಶಾ ಜೋಡಿ 137 ಎಸೆತಗಳಲ್ಲಿ 57 ರನ್ ಗಳಿಸಿದ್ರೆ, 9ನೇ ವಿಕೆಟ್‌ಗೆ 112 ಎಸೆತಗಳಲ್ಲಿ ಕುಮರಾ – ದಿನುಶಾ ಜೋಡಿ 58 ರನ್ ಗಳಿಸಿತ್ತು. ಇದು ಪಂದ್ಯವನ್ನು ಡ್ರಾನತ್ತ ತಿರುಗಿಸುವಲ್ಲಿ ಯಶಸ್ವಿಯಾಯಿತು.
EMOTIONAL MOMENT AT COLOMBO 🥹
– Sonal Dinusha & family celebrating the third hundred of the series, The hero of Sri Lanka. pic.twitter.com/HkI5V9qyr8
— Johns. (@CricCrazyJohns) August 27, 2026
ದಿಗ್ಗಜರ ಎಲೈಟ್ ಲಿಸ್ಟ್ ಸೇರಿದ ದಿನುಶಾ
ಇನ್ನೂ ಗಾಲ್ಲೆಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರದ ವಿರುದ್ಧ ಶತಕ ಸಿಡಿಸಿದ್ದ ಸೋನಲ್ ದಿನುಶಾ 2ನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದರು. 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೂರು ಶತಕ ಸಿಡಿಸಿದ ಶ್ರೀಲಂಕಾ ಹಿರಿಯ ಕ್ರಿಕೆಟಿಗರ ಎಲೈಟ್ ಪಟ್ಟಿ ಸೇರಿಕೊಂಡರು.
1997ರಲ್ಲಿ ಅರವಿಂದ ಡಿ ಸಿಲ್ವಾ ಪಾಕಿಸ್ತಾನ ಮತ್ತು ಭಾರತದ ವಿರುದ್ಧ 2 ಪಂದ್ಯಗಳಲ್ಲಿ 3 ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆ ಬಳಿಕ ದಿಗ್ಗಜ ಕುಮಾರ್ ಸಂಗಕ್ಕಾರ ಬಾಂಗ್ಲಾ ವಿರುದ್ಧ 2013ರಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3 ಶತಕ ಸಿಡಿಸಿದ್ದರು. ಈ ಸಾಲಿಗೆ ಈಗ ಸೋಲನ್ ಸಿನುಶಾ ಸೇರಿಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಭಾರತ
ಮೊದಲ ಇನ್ನಿಂಗ್ಸ್ – 503/9ಕ್ಕೆ ಡಿಕ್ಲೇರ್
ಶ್ರೀಲಂಕಾ
ಮೊದಲ ಇನ್ನಿಂಗ್ಸ್ – 290/10
2ನೇ ಇನ್ನಿಂಗ್ಸ್ (ಫಾಲೋ ಆನ್) – 429/9
