ಕೊಲಂಬೊ: ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಶ್ರೀಲಂಕಾ ತಂಡ 3ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿದೆ. ಆ ಮೂಲಕ ಭಾರತದ ವಿರುದ್ಧ ಲಂಕಾ 238 ರನ್‌ಗಳ ಹಿನ್ನಡೆ ಅನುಭವಿಸಿದೆ.
ಶ್ರೀಲಂಕಾ ಪರ ಲಹಿರು ಕುಮಾರ 8 ಮತ್ತು ಸೋನಲ್ ದಿನುಷಾ 85 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಎರಡನೇ ದಿನದಂದು ಲಂಕಾ ತಂಡ ಕೇವಲ 8 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನದಾಟದಲ್ಲಿ ಆರಂಭದಲ್ಲಿಯೇ ಸಮಿಲ್ ಮಿಶ್ರಾ 19 ರನ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ನಂತರ ಪಸಿಂದು ಸೂರ್ಯಬಂಡಾರ ಮತ್ತು ಕಮಿಂದು ಮೆಂಡಿಸ್ 4ನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವಾಡಿದರು. ಮೆಂಡಿಸ್ 32 ರನ್‌ಗೆ ಔಟಾದರು. ನಂತರ ಬಂದ ನಾಯಕ ಧನಂಜಯ ಡಿ ಸಿಲ್ವಾ ಕೇವಲ 8 ರನ್‌ಗೆ ಔಟಾಗಿ ನಿರಾಸೆ ಮೂಡಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಸಿಂದು 80 ರನ್ ಕಲೆಹಾಕಿದರು.
ಉತ್ತಮ ಫಾರ್ಮ್‌ನಲ್ಲಿರುವ ಸೋನಲ್ ದಿನಷಾ 85 ರನ್ ಗಳಿಸಿದ್ದು ಕ್ರೀಸ್‌ನಲ್ಲಿದ್ದಾರೆ. ಭಾರತದ ಪರ ಪ್ರಸಿದ್ಧ್ ಕೃಷ್ಣ ಮತ್ತು ಮಾನವ್ ಸುತಾರ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ತಲಾ ಮೂರು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.
