CricketLatestLeading NewsMain PostSports

ಬಾಕ್ಸಿಂಗ್ ಡೇ ಟೆಸ್ಟ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Advertisements

ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 113 ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಐದನೇ ದಿನ ಆಫ್ರಿಕಾಗೆ ಗೆಲುವಿಗೆ 211 ರನ್‍ಗಳ ಗುರಿ ಇತ್ತು. ಟೀಂ ಇಂಡಿಯಾಗೆ 6 ವಿಕೆಟ್ ಅವಶ್ಯಕತೆ ಇತ್ತು. ಅಂತಿಮವಾಗಿ ಟೀಂ ಇಂಡಿಯಾ ಮೇಲುಗೈ ಸಾಧಿಸಿ 113 ರನ್‍ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಬೌಲರ್‌ಗಳ ಬಿಗಿ ದಾಳಿ:
4ನೇ ದಿನದಾಟದಲ್ಲಿ 94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 5ನೇ ದಿನ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಿತು. ಆದರೆ ಭಾರತೀಯ ಬೌಲರ್‌ಗಳು ಈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು. ದಕ್ಷಿಣ ಆಫ್ರಿಕಾ ಪರ ಡೀನ್ ಎಲ್ಗರ್ 77 ರನ್ (156 ಎಸೆತ, 12 ಬೌಂಡರಿ), ಕ್ವಿಂಟನ್ ಡಿ ಕಾಕ್ 21 ರನ್ (28 ಎಸೆತ, 2 ಬೌಂಡರಿ) ಮತ್ತು ತೆಂಬ ಬವುಮ ಅಜೇಯ 35 ರನ್ (80 ಎಸೆತ, 4 ಬೌಂಡರಿ) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ಗಳು ಕೂಡ ಆಫ್ರಿಕಾ ಗೆಲುವಿಗೆ ಹೋರಾಡಲಿಲ್ಲ. ಅಂತಿಮವಾಗಿ 68 ಓವರ್‌ಗಳಲ್ಲಿ ಆಫ್ರಿಕಾ 191 ರನ್ ಗಳಿಗೆ ಸರ್ವಪತನ ಕಂಡು ತವರಿನಲ್ಲಿ ಸೋಲುಂಡಿತು.

ಟೀಂ ಇಂಡಿಯಾ ಪರ ಬುಮ್ರಾ ಮತ್ತು ಶಮಿ ತಲಾ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಸಿರಾಜ್ ಮತ್ತು ಅಶ್ವಿನ್ 2 ವಿಕೆಟ್ ಪಡೆದರು.

Leave a Reply

Your email address will not be published.

Back to top button