Latest

2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

Published

on

Share this

ಲಂಡನ್: 2016ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಫೋನ್‍ಗಳ ಪಟ್ಟಿಯನ್ನು ಹಣಕಾಸು ಸೇವಾ ಸಂಸ್ಥೆ ಐಎಚ್‍ಎಸ್ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಆಪಲ್ ಕಂಪೆನಿಯ ವಿವಿಧ ಐಫೋನ್‍ಗಳು ಪಡೆದುಕೊಂಡಿದ್ದರೆ, ನಂತರ ಸ್ಥಾನವನ್ನು ಸ್ಯಾಮ್‍ಸಂಗ್ ಕಂಪೆನಿಯ ಫೋನ್‍ಗಳು ಪಡೆದುಕೊಂಡಿದೆ.

ಟಾಪ್ 10 ಪಟ್ಟಿಯಲ್ಲಿ ಚೀನಾದ ಒಪ್ಪೋ ಕಂಪೆನಿಯ ಒಂದು ಫೋನ್ ಇರುವುದು ವಿಶೇಷ. ಅದರೆ ಗೂಗಲ್ ನೆಕ್ಸಸ್ ಸರಣಿಯ ಯಾವೊಂದು ಫೋನ್ ಸ್ಥಾನ ಪಡೆದುಕೊಂಡಿಲ್ಲ.

ಹೀಗಾಗಿ ಇಲ್ಲಿ ಟಾಪ್ 10 ಫೋನ್‍ಗಳ ಪಟ್ಟಿ, ಗುಣವೈಶಿಷ್ಟ್ಯ ಮತ್ತು ಆ ಫೋನ್‍ಗಳು ಪ್ರಸ್ತುತ ಭಾರತದಲ್ಲಿ ಎಷ್ಟು ರೂ. ಮಾರಾಟವಾಗುತ್ತಿದೆ ಎನ್ನುವ ಅಂದಾಜು ಬೆಲೆಯನ್ನು ನೀಡಲಾಗಿದೆ.

1. ಆಪಲ್ ಐಫೋನ್ 6ಎಸ್

ಸೆಪ್ಟೆಂಬರ್ 2015ರಲ್ಲಿ ಬಿಡುಗಡೆಯಾದ ಈ ಫೋನಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ 38 ಸಾವಿರ ರೂ. ಬೆಲೆಯಿದೆ. 4.7 ಇಂಚಿನ ಸ್ಕ್ರೀನ್, ಎ9 ಪ್ರೊಸೆಸರ್, 2ಜಿಬಿ ರಾಮ್, 12 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ 5ಎಂಪಿ ಕ್ಯಾಮೆರಾವನ್ನು ಹೊಂದಿದೆ.

2.ಆಪಲ್ ಐಫೋನ್ 7:

ಭಾರತದಲ್ಲಿ 2016ರ ಅಕ್ಟೋಬರ್‍ನಲ್ಲಿ ಬಿಡುಗಡೆಯಾದ ಫೋನಿಗೆ 50 ಸಾವಿರ ರೂ. ಬೆಲೆಯಿದೆ. 4.7 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ ಕ್ವಾಡ್ ಕೋರ್ ಎ10 ಪ್ಯೂಶನ್ ಪ್ರೊಸೆಸರ್ ಹೊಂದಿದೆ. ಐಓಎಸ್ 10, ಎ10 ಪ್ರೊಸೆಸರ್, ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 7 ಎಂಪಿ ಕ್ಯಾಮೆರಾ, 4.7 ಇಂಚಿನ ಸ್ಕ್ರೀನ್ ಹೊಂದಿದೆ.

3. ಆಪಲ್ ಐಫೋನ್ 7 ಪ್ಲಸ್:

ಮೂರನೇ ಸ್ಥಾನದಲ್ಲಿ ಐಫೋನ್ 7 ಪ್ಲಸ್ ಇದ್ದು, 2016ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಪ್ರಸ್ತುತ ಈ ಫೋನಿಗೆ 60 ಸಾವಿರ ರೂ. ಬೆಲೆಯಿದೆ. ಎ10 ಫ್ಯೂಶನ್ ಪ್ರೊಸೆಸರ್ 2 ಜಿಬಿ ರಾಮ್, 5.5 ಇಂಚಿನ ಸ್ಕ್ರೀನ್, 12 ಎಂಪಿ ಹಿಂದುಗಡೆ, ಮುಂದುಗಡೆ 7 ಎಂಪಿ ಕ್ಯಾಮೆರಾವನ್ನು ಹೊಂದಿದೆ.

4. ಆಪಲ್ 6ಎಸ್ ಪ್ಲಸ್:

5.5 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ 2015ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಿತ್ತು. ಈ ಫೋನ್ ಈಗ 44 ಸಾವಿರ ರೂ.ನಲ್ಲಿ ಮಾರಾಟವಾಗುತ್ತಿದೆ. ಡ್ಯುಯಲ್ ಕೋರ್ ಎ9 ಪ್ರೊಸೆಸರ್, ಐಓಎಸ್ 9, ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

5. ಸ್ಯಾಮ್‍ಸಂಗ್ ಗೆಲಾಕ್ಸಿ ಎಸ್7 ಎಡ್ಜ್:


ಮಾರ್ಚ್ 2016ರಲ್ಲಿ ಬಿಡುಗಡೆಯಾದ ಈ ಫೋನಿಗೆ ಅಂದಾಜು 44 ಸಾವಿರ ರೂ. ಬೆಲೆಯಿದೆ. 5.5 ಇಂಚಿನ ಸ್ಕ್ರೀನ್, 3,600 ಎಂಎಎಚ್ ಬ್ಯಾಟರಿ, ಅಕ್ಟಾಕೋರ್ ಪ್ರೊಸೆಸರ್, 4 ಜಿಬಿ ರಾಮ್, 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮರಾ ಹೊಂದಿದೆ. ಆಂಡ್ರಾಯ್ಡ್ ಮಾರ್ಶ್ ಮೆಲೋ ಒಎಸ್‍ನಲ್ಲಿ ಬಿಡುಗಡೆಯಾಗಿದ್ದ ಈ ಫೋನಿಗೆ ನೂಗಟ್ ಅಪ್‍ಡೇಟ್ ಸಿಕ್ಕಿದೆ.

6. ಸ್ಯಾಮ್‍ಸಂಗ್  ಗೆಲಾಕ್ಸಿ ಜೆ3(2016)


2016ರ ಮಾರ್ಚ್ ನಲ್ಲಿ ಬಿಡುಗಡೆಯಾದ ಈ ಫೋನಿಗೆ ಮಾರುಕಟ್ಟೆಯಲ್ಲಿ 8,990 ರೂ. ಇದೆ. ಎಸ್ ಬೈಕ್ ಮೋಡ್‍ನಲ್ಲಿ ಬಿಡುಗಡೆಯಾದ ಈ ಫೋನ್ 5 ಇಂಚಿನ ಸ್ಕ್ರೀನ್, ಕ್ವಾಡ್ ಕೋರ್ ಪ್ರೊಸೆಸರ್, 1.5 ಜಿಬಿ ರಾಮ್, ಆಂಡ್ರಾಯ್ಡ್ ಲಾಲಿ ಪಪ್ ಓಎಸ್, ಹಿಂದುಗಡೆ 8 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

7.  ಒಪ್ಪೋ ಎ53:


ಆಪಲ್, ಸ್ಯಾಮ್‍ಸಂಗ್ ಹೊರತು ಪಡಿಸಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೂರನೇ ಫೋನ್ ಕಂಪೆನಿ ಒಪ್ಪೋ. ಈ ಡ್ಯುಯಲ್ ಸಿಮ್ ಫೋನಿಗೆ ಪ್ರಸ್ತುತ 19 ಸಾವಿರ ರೂ. ಬೆಲೆಯಿದೆ. ಆಂಡ್ರಾಯ್ಡ್ 5.1 ಲಾಲಿಪಾಪ್ ಓಎಸ್, 5.5 ಇಂಚಿನ ಸ್ಕ್ರೀನ್, ಅಕ್ಟಾಕೋರ್ ಪ್ರೊಸೆಸರ್, 2ಜಿಬಿ ರಾಮ್, ಮುಂದುಗಡೆ 5 ಎಂಪಿ, ಹಿಂದುಗಡೆ 13 ಕ್ಯಾಮೆರಾವನ್ನು ಹೊಂದಿದೆ. ಇದಕ್ಕೆ 3075 ಎಂಎಎಚ್ ಬ್ಯಾಟರಿಯನ್ನು ಒಪ್ಪೋ ನೀಡಿದೆ.

8. ಸ್ಯಾಮ್‍ಸಂಗ್ ಗೆಲಾಕ್ಸಿ ಜೆ5:


2016ರ ಮಾರ್ಚ್ ನಲ್ಲಿ ಬಿಡುಗಡೆಯಾದ ಈ ಡ್ಯುಯಲ್ ಸಿಮ್ ಫೋನಿಗೆ ಪ್ರಸ್ತುತ 10 ಸಾವಿರ ಬೆಲೆಯಿದೆ. 5.2 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್ ಮಾರ್ಶ್ ಮೆಲೋ ಒಎಸ್‍ನಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ವಾಡ್‍ಕೋರ್ ಪ್ರೊಸೆಸರ್, 2ಜಿಬಿ ರಾಮ್ ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, 3100 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

9.  ಸ್ಯಾಮ್‍ಸಂಗ್ ಗೆಲಾಕ್ಸಿ ಎಸ್7:


2016ರಲ್ಲಿ ಬಿಡುಗಡೆಯಾದ ಸಿಂಗಲ್ ಸಿಮ್ ಫೋನಿಗೆ ಈಗ ಅಂದಾಜು 40 ಸಾವಿರ ರೂ. ಬೆಲೆಯಿದೆ. 5.1 ಇಂಚಿನ ಸ್ಕ್ರೀನ್, ಮಾರ್ಶ್ ಮೆಲೋ ಒಎಸ್, ಅಕ್ಟಾಕೋರ್ ಪ್ರೊಸೆಸರ್, 4ಜಿಬಿ ರಾಮ್, ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, 3000 ಎಎಂಎಚ್ ಬ್ಯಾಟರಿಯನ್ನು ಒಳಗೊಂಡಿದೆ.

10. ಸ್ಯಾಮ್‍ಸಂಗ್ ಗೆಲಾಕ್ಸಿ ಜೆ7:


ಮಾರ್ಚ್ 2016ರಲ್ಲಿ ಬಿಡುಗಡೆಯಾದ ಈ ಡ್ಯುಯಲ್ ಸಿಮ್ ಫೋನಿಗೆ ಸದ್ಯ ಮಾರುಕಟ್ಟೆಯಲ್ಲಿ 15,999 ರೂ. ಇದೆ. 5.5 ಇಂಚಿನ ಸ್ಕ್ರೀನ್, ಆಂಡ್ರಾಯ್ಡ್ ಮಾರ್ಶ್ ಮೆಲೋ ಓಎಸ್, ಅಕ್ಟಾಕೋರ್ ಪ್ರೊಸೆಸರ್, 2 ಜಿಬಿ ರಾಮ್, ಹಿಂದುಗಡೆ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, 3300 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.

Click to comment

Leave a Reply

Your email address will not be published. Required fields are marked *

Advertisement
Advertisement