– ಚಿನ್ನ ಖರೀದಿಸಬೇಡಿ ಎಂದಿದ್ದ ಚಿದಂಬರಂ ನೆನಪಿಲ್ಲವೇ?
– ಮೋದಿ ಮಾಡಿದರೆ ಮಾತ್ರ ಅಪರಾಧವೇ?
ಬೆಂಗಳೂರು: ದೇಶದ ಹಿತದೃಷ್ಟಿಯಿಂದ ಚಿನ್ನ (Gold) ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೀಡಿರುವ ಕರೆಗೆ ಕಾಂಗ್ರೆಸ್ (Congress) ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಬಿಜೆಪಿ ನಾಯಕರು ಈಗ ತಿರುಗೇಟು ನೀಡಲು ಆರಂಭಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನೆನಪಿನ ಶಕ್ತಿ ನಿಗೂಢವಾಗಿ ಕೆಲಸ ಮಾಡುತ್ತದೆ ಎಂದು ಟೀಕಿಸಿದ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashok) ಈ ಹಿಂದೆ ಕಾಂಗ್ರೆಸ್ ಸರ್ಕಾರಗಳೂ ಸಹ ಇದೇ ರೀತಿಯ ನಿಲುವು ತಳೆದಿದ್ದವು ಎಂದು ಹೇಳಿ ಮೋದಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
Congress party’s memory works in mysterious ways!
When Smt. Indira Gandhi asked Indians to avoid buying gold in 1967, it was called “national discipline.”
When Shri P. Chidambaram repeatedly begged people in 2013 to “resist the temptation to buy gold,” it was called “economic… pic.twitter.com/pdxIt3qUjO
— R. Ashoka (@RAshokaBJP) May 12, 2026
ಪೋಸ್ಟ್‌ನಲ್ಲಿ ಏನಿದೆ?
1967 ರಲ್ಲಿ ಇಂದಿರಾ ಗಾಂಧಿಯವರು(Indira Gandhi) ಭಾರತೀಯರು ಚಿನ್ನ ಖರೀದಿಸುವುದನ್ನು ತಪ್ಪಿಸುವಂತೆ ಕೇಳಿದಾಗ ಅದನ್ನು “ರಾಷ್ಟ್ರೀಯ ಶಿಸ್ತು” ಎಂದು ಕರೆಯಲಾಯಿತು. 2013 ರಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಚಿನ್ನ ಖರೀದಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದಾಗ”ಆರ್ಥಿಕ ಜವಾಬ್ದಾರಿ” ಎಂದು ಕರೆಯಲಾಯಿತು. ಇದನ್ನೂ ಓದಿ: ಚಿನ್ನ, ಪೆಟ್ರೋಲ್ ಬಳಕೆಗೆ ಬ್ರೇಕ್ – ಮೋದಿ ಕರೆ ಹಿಂದಿದೆ 23 ಲಕ್ಷ ಕೋಟಿ ರೂ. ಉಳಿತಾಯದ ಗುರಿ!
ಈಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಮತ್ತು ರೂಪಾಯಿ ಮೌಲ್ಯವನ್ನು ಹೆಚ್ಚಿಸಲು ಇದೇ ರೀತಿಯ ಆರ್ಥಿಕ ಶಿಸ್ತಿಗೆ ಕರೆ ನೀಡಿದಾಗ, ಕಾಂಗ್ರೆಸ್ ನಾಯಕರು ಇದುವರೆಗೂ ಸಂಭವಿಸದ ಏನೋ ಒಂದು ವಿಚಿತ್ರ ನಡೆಯೆಂಬಂತೆ ವರ್ತಿಸುತ್ತಿದ್ದಾರೆ. ಇದನ್ನೂ ಓದಿ: ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ಆಕ್ರೋಶ

