ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸರ್ಕಾರ ತೆಗೆದುಕೊಂಡಿರುವ ಯೋಜಿತ ಕ್ರಮದ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ವೀಡಿಯೊಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಯುವಜನತೆಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ.
ಧನ್ಯವಾದಗಳು ಸ್ನೇಹಿತರೇ. ನಿನ್ನೆ ರಾತ್ರಿ ನಿಮ್ಮನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ನೀವು ವೀಡಿಯೊಗೆ ಪ್ರತಿಕ್ರಿಯಿಸಿದ ರೀತಿ, ಸಕಾರಾತ್ಮಕ ಸಲಹೆಗಳನ್ನು ಕಳುಹಿಸಿದ್ದೀರಿ. ಎಲ್ಲರಿಗೂ ಧನ್ಯವಾದಗಳು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಮೋದಿ ತಿಳಿಸಿದ್ದಾರೆ.
View this post on Instagram
ಮೊದಲ ವಿಡಿಯೋ ನೋಡಿದ ಲಕ್ಷಾಂತರ ಯುವಕರು ಪರೀಕ್ಷಾ ಪದ್ಧತಿಯನ್ನು ಸುಧಾರಿಸಲು ಸೋಶಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿರುವ ಸಲಹೆಗಳು ಮತ್ತು ಪ್ರಮುಖ ಐಡಿಯಾಗಳನ್ನು ಗಮನಿಸಿದ್ದೇನೆ. ಪೇಪರ್ ಸೋರಿಕೆ ದಂಧೆಯ ವಿರುದ್ಧ ಸರ್ಕಾರ ತೆಗೆದುಕೊಳ್ಳಲಿರುವ ಕಠಿಣ ಕ್ರಮಗಳಿಗೆ ದೇಶದ ಯುವ ಪೀಳಿಗೆ ತೋರಿರುವ ಬೆಂಬಲವೇ ತಮಗೆ ದೊಡ್ಡ ಶಕ್ತಿ. ತಡರಾತ್ರಿ ಹಂಚಿಕೊಂಡ ವಿಡಿಯೋ ಮೂಲಕ ದೇಶದ ಯುವ ಸಮುದಾಯದೊಂದಿಗೆ ನೇರವಾಗಿ ಕನೆಕ್ಟ್ ಆಗಲು ಸಾಧ್ಯವಾಗಿದ್ದು ತಮಗೆ ಹೆಮ್ಮೆ ತಂದಿದೆ. ಯುವಕರ ಅಭಿಪ್ರಾಯಗಳನ್ನು ಸರ್ಕಾರವು ಅತ್ಯಂತ ಗಂಭೀರವಾಗಿ ಪರಿಗಣಿಸಲಿದೆ. ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ಪಾರದರ್ಶಕವಾಗಿ ಮುಂದುವರಿಸಲು ಯುವಜನತೆಯ ಈ ನಿರಂತರ ಸಂವಾದ ಅಗತ್ಯ ಎಂದು ಮೋದಿ ಹೇಳಿದ್ದಾರೆ.

