DistrictsGadagKarnatakaLatestMain Post

ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗೂ ಇದೆ: ಉಮೇಶ್ ಕತ್ತಿ

ಗದಗ: ನಂಗೆ ಉತ್ತರ ಕರ್ನಾಟಕ ಅಲ್ಲ, ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ಇದೆ ಅಂತ ಅರಣ್ಯ ಖಾತೆ ಹಾಗೂ ಆಹಾರ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ನಗರದ ಬಿಂಕದಕಟ್ಟಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 9 ಬಾರಿ ಶಾಸಕನಾಗಿ ನಾನು ಆಯ್ಕೆ ಆಗಿದ್ದು, ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದೇನೆ. ಆದರೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ರಾಜೀನಾಮೆ ನೀಡಲೂ ಸಿದ್ಧನಾಗಿದ್ದೇನೆ. ನಮಗೆ ಬೇಕಾದ ಮಹಾದಾಯಿ, ಕೃಷ್ಣಾ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದರೆ ರಾಜೀನಾಮೆ ನೀಡಲು ರೆಡಿಯಾಗಿದ್ದೇನೆ ಎಂದಿದ್ದಾರೆ.

ನಮ್ಮವರೇ ಸಿಎಂ ಆಗಿರುವಾಗ ಸಿಎಂ ಆಗುವ ಆಸೆ ಇರುವುದಿಲ್ಲ. ಸಿಎಂ ಆಗುವ ಅವಕಾಶ ಬಂದರೆ ನನ್ನ ನಸೀಬು ತೆರದಂತೆ. ಆದರೆ ಬೆನ್ನು ಹತ್ತಿ ಹೋಗಲ್ಲ, ಕರ್ನಾಟಕದ ಮುಖ್ಯಮಂತ್ರಿ ಆಗಬೇಕು. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ. ಆದರೆ ನೋಡೋಣ ಎಂದು ತಮ್ಮ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಪೊಲಿಟಿಕಲ್ ಬಿಗ್ ಟರ್ನ್- ಕಾಂಗ್ರೆಸ್ ತೊರೆಯುತ್ತಾರಾ ಕೆ.ಎಚ್. ಮುನಿಯಪ್ಪ..?

ಇದೇ ವೇಳೆ ರಾಜ್ಯ ಸರ್ಕಾರದ 40% ಕಮೀಷನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಸಂಘಗಳು ಬಹಳ ಇವೆ. ಕೆಂಪಯ್ಯ ಯಾರು ಎಂಬುದು ಗೊತ್ತಿಲ್ಲ. ಕೆಂಪಯ್ಯ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. 40% ಭ್ರಷ್ಟಾಚಾರ ನಡೆದಿದ್ದರೆ ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ ಅವರನ್ನು ಬಿಡುತ್ತಿದ್ದರೆ ಎಂದು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರ ನಡೆದಿದ್ದರೆ ಕೆಂಪಯ್ಯ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡಲಿ. ಲೋಕಾಯುಕ್ತ, ಸಿಬಿಐ, ಇಡಿ ಎಲ್ಲಿ ಕೊಡುತ್ತಾರೋ ಕೊಡಿ. ಕುಮಾರಸ್ವಾಮಿ ಆಗಲಿ ಯಾರೇ ಆರೋಪ ಮಾಡಿದರೂ ಕಂಪ್ಲೆಂಟ್ ಕೊಡಲಿ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಕುಮಾರಣ್ಣನ ಜೊತೆ ನನ್ನನ್ನು ಜನ ಒಂದುಗೂಡಿಸಿದ್ದಾರೆ: ಜೆಡಿಎಸ್‌ನಲ್ಲೇ ಉಳಿಯುತ್ತಾರಾ ಜಿಟಿಡಿ?

ಈದ್ಗಾ ಮೈದಾನ ವಿಚಾರವಾಗಿ ಮಾತನಾಡಿ, ಈದ್ಗಾ ಮೈದಾನ ಸರ್ಕಾರದ ಆಸ್ತಿ. ಅದು ಬೆಂಗಳೂರು ಈದ್ಗಾ ಮೈದಾನ ಆಗಿರಬಹುದು ಅಥವಾ ಹುಬ್ಬಳ್ಳಿ ಈದ್ಗಾ ಮೈದಾನ ಆಗಿರಬಹುದು. ಇವು ಸರ್ಕಾರದ ಆಸ್ತಿ. ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ನಮಾಜ್ ಮಾಡಲಿ, ಹಿಂದೂಗಳು ಗಣೇಶೋತ್ಸವ, ದೀಪಾವಳಿ ಹೀಗೆ ತಮ್ಮ ಹಬ್ಬಗಳನ್ನು ಆಚರಿಸಿಕೊಳ್ಳಲಿ. ನಾನೊಬ್ಬ ಹಿಂದೂ ಆಗಿದ್ದು, ಮುಸ್ಲಿಮರನ್ನು ಜೊತೆಗೆ ಕರೆದುಕೊಂಡು ಹೋಗುವ ಆಸೆ ನನ್ನದು ಎಂದಿದ್ದಾರೆ.

ಈ ಸಂದರ್ಭದಲ್ಲಿ ಎಂ.ಎಲ್.ಸಿ, ಎಸ್.ವಿ. ಸಂಕನೂರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಪ್ರವೀಣ್ ಬನ್ಸಾಲಿ, ನಗರಸಭೆ ಅಧ್ಯಕ್ಷೆ ಉಷಾ, ನಗರಾಭಿವೃದ್ದಿ ಅಧ್ಯಕ್ಷ ಸಿದ್ದು ಪಲ್ಲೆದ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

Live Tv

Leave a Reply

Your email address will not be published.

Back to top button