ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ನಡೆದ ಕೌಟುಂಬಿಕ ಜಗಳದಲ್ಲಿ ಪತಿಯೇ (Husband) ತನ್ನ ಪತ್ನಿ (Wife) ಹಾಗೂ ಆರು ತಿಂಗಳ ಕಂದಮ್ಮ ಸೇರಿದಂತೆ ಐವರ ಮೇಲೆ ಆ್ಯಸಿಡ್ ದಾಳಿ ಮಾಡಿರುವ ಭೀಕರ ಘಟನೆ ನಗರದ (Hubballi) ತಾರಿಹಾಳದ ವಾಜಪೇಯಿ ನಗರದಲ್ಲಿ ನಡೆದಿದೆ.
ತಾಮ್ರ ಮತ್ತು ಹಿತ್ತಾಳೆ ಕೆಲಸ ಮಾಡುತ್ತಿದ್ದ ಸುರೇಶ್ ಬೈಲ್ ಪತ್ತಾರ ಈ ಕೃತ್ಯವೆಸಗಿದ ಆರೋಪಿ. ಘಟನೆಯಲ್ಲಿ ಒಂದೇ ಕುಟುಂಬದ ಐವರು ಗಾಯಗೊಂಡಿದ್ದಾರೆ. ಆರು ತಿಂಗಳ ಕಂದಮ್ಮನ ಮುಖ ಹಾಗೂ ಬಾಯಿಗೆ ಆ್ಯಸಿಡ್ ಬಿದ್ದಿದೆ. ದಾಳಿಗೊಳಗಾದ 24 ವರ್ಷದ ಪತ್ನಿ ರಾಜೇಶ್ವರಿ ಬೈಲ್ ಪತ್ತಾರ ಸ್ಥಿತಿ ಚಿಂತಾಜನಕವಾಗಿದೆ. ಶೃತಿ ಮತ್ತು ರೇಷ್ಮಾ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ದಾಳಿ ಮಾಡಿದ ಸುರೇಶ್ ಮೇಲೆಯೂ ಆ್ಯಸಿಡ್ ಬಿದ್ದಿದೆ. ಇದನ್ನೂ ಓದಿ: ಮರು ಮೌಲ್ಯಮಾಪನ ಮಾಡಿದ್ರೆ ಮುಖಕ್ಕೆ ಆ್ಯಸಿಡ್ ಹಾಕ್ತೀವಿ – ಗುಲಬರ್ಗಾ ವಿವಿ ಕುಲಪತಿಗೆ ಬೆದರಿಕೆ
ಆರೋಪಿ ಸುರೇಶ್ ತನ್ನ ನಾದಿನಿಯರ ಫೋಟೋ ತೆಗೆಯುತ್ತಿದ್ದ ವಿಚಾರವಾಗಿ ಪತ್ನಿ ರಾಜೇಶ್ವರಿ ತಾಕೀತು ಮಾಡಿದ್ದಳು. ಇದರ ಹೊರತಾಗಿಯೂ ನಾದಿನಿಯರ ಫೋಟೋ ತೆಗೆದು ಸುರೇಶ್ ಕಿರಿಕ್ ಮಾಡ್ತಿದ್ದ. ಇದೇ ವಿಷಯವಾಗಿ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಸುರೇಶ್, ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ತೊಳೆಯಲು ಬಳಸುತ್ತಿದ್ದ ಕೆಮಿಕಲ್ ಅನ್ನು ಪತ್ನಿ ಮೇಲೆ ಎರಚಿದ್ದಾನೆ. ಕುಟುಂಬದವರ ಮೇಲೆಯೂ ಆ್ಯಸಿಡ್ ದಾಳಿ ಮಾಡಿದ್ದಾನೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ರೈಲಿನಲ್ಲಿ ಮಲಗಿದ್ದ 6 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ- ಪರಾರಿಯಾಗಿದ್ದ ಆರೋಪಿ ಅರೆಸ್ಟ್

