ಬಿರಿಯಾನಿ, ಕಬಾಬ್, ಪ್ರೈ ಪ್ರತಿ ವಾರ ಮಾಡಿ ತಿಂತಾನೇ ಇರ್ತಿರಾ. ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು. ನೀವು ಮಾಡುವ ಮಟನ್ ಖೀಮಾ ಚಳಿಗಾಲಕ್ಕೆ ಹಾಗೂ ನಿಮ್ಮ ಭಾನುವಾರದ ಬಾಡೂಟಕ್ಕೆ ಬೆಸ್ಟ್ ರೆಸಿಪಿ ಆಗಿರಲಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಮಟನ್ ಖೀಮಾ- ಅರ್ಧ ಕೆಜಿ
* ಲಿವರ್- ಕಾಲು ಕೆಜಿ
* ಈರುಳ್ಳಿ- 3
* ಬೆಳ್ಳುಳ್ಳಿ-1
* ಶುಂಠಿ – ಸ್ವಲ್ಪ
* ಹಸಿಮೆಣಸಿನ ಕಾಯಿ-1
* ಜೀರಿಗೆ- 1 ಚಮಚ
* ಕರಿಮೆಣಸಿನಕಾಳು- 1 ಚಮಚ
* ಚಕ್ಕೆ, ಲವಂಗ
* ಕೆಂಪು ಮೆಣಸಿನ ಪುಡಿ -1 ಚಮಚ
* ದನಿಯಾ- 1 ಚಮಚ
* ಟೊಮೆಟೋ- 1
* ಮೊಸರು- 2 ಚಮಚ
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಅಡುಗೆಎಣ್ಣೆ 2 ಚಮಚ
* ಪಲಾವ್ ಎಲೆ -1
* ರುಚಿಗೆ ತಕ್ಕ ಉಪ್ಪು
Advertisement
Advertisement
ಮಾಡುವ ವಿಧಾನ:
* ಮೊಸರು, ಅರಿಶಿಣಪುಡಿ, ಖಾರದ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ನೆನೆಯಲು ಬಿಡಿ.
Advertisement
* ಬಳಿಕ ಮಟನ್ ಖೀಮಾ, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು. ಇದನ್ನೂ ಓದಿ: ಹಂದಿ ಮಾಂಸದ ಗ್ರೇವಿ ಮಾಡುವ ಸರಳ ವಿಧಾನ ನಿಮಗಾಗಿ
* ನಂತರ ಈರುಳ್ಳಿ , ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಫ್ರೈ ಮಾಡಿ. ಈ ಫ್ರೈಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ. ಬಳಿಕ ಇದನ್ನೂ ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.
* ಮತ್ತೊಂದು ಪಾತ್ರೆಯಲ್ಲಿ ಅಡುಗೆ ಎಣ್ಣೆ, ಪಲಾವ್ ಎಲೆ, ಈರುಳ್ಳಿ, ಖೀಮಾ ಮತ್ತು ಲಿವರ್, ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
* ಟೊಮೆಟೊ, ಕೊತ್ತಂಬರಿ ಸೊಪ್ಪು , ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ ಬೇಯಿಸಬೇಕು. ನಂತರ 2 ಚಮಚ ಮೊಸರು, ಈಗಾಗಲೇ ತಯಾರಿಸಿದ ಮಸಾಲೆಯನ್ನು ಹಾಕಿ ಬೇಯಿಸಿದರೆ ರುಚಿಯಾದ ಖೀಮಾ ಸವಿಯಲು ಸಿದ್ಧವಾಗುತ್ತದೆ.