Food

ಸಿಹಿಯಾದ ಜಿಲೇಬಿ ಮಾಡಿ ನಾಲಿಗೆ ಚಪ್ಪರಿಸಿ ಸವಿಯಿರಿ

Published

on

Share this

ಸಿಹಿ ತಿಂಡಿಯನ್ನು ಹಲವರು ತುಂಬಾ ಇಷ್ಟ ಪಡುತ್ತಾರೆ. ಅಂತಹವರಿಗಾಗಿ ನಾವು ಇಂದು ಜಿಲೇಬಿ ಮಾಡುವುದನ್ನು ತಿಳಿಸಿಕೊಡುತ್ತೇವೆ. ಬಗೆಗೆಯ ಸಿಹಿ ತಿನಿಸು ಹಬ್ಬದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಉತ್ತರ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಡುವ ಸಿಹಿ ತಿನಿಸು ಜಿಲೇಬಿಯಾಗಿದೆ. ನಾವು ಇಂದು ಈ ಸಿಹಿಯಾದ ಜಿಲೇಬಿ ಮಾಡಲು ಬೇಕಾಗಿರುವ ಪದಾರ್ಥಗಳ ಪಟ್ಟಿಗಳ ಜೊತೆಗೆ ಮಾಡುವ ಸರಳ ವಿಧಾನವನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಬೇಕಾಗುವ ಪದಾರ್ಥಗಳು
* ಸಕ್ಕರೆ- 2 ಕಪ್
* ಮೈದಾ ಹಿಟ್ಟು-2 ಕಪ್
* ಮೊಸರು-1 ಕಪ್
* ಬೇಕಿಂಗ್ ಸೋಡಾ- ಸ್ವಲ್ಪ
* ಕೇಸರಿ ದಳ- ಸ್ವಲ್ಪ
* ಹಾಲು- 1 ಕಪ್
* ನಿಂಬೆ ರಸ- ಸ್ವಲ್ಪ
* ಏಲಕ್ಕಿ ಪುಡಿ- ಸ್ವಲ್ಪ
* ಅಡುಗೆ ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ:

* ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ.
* ನಂತರ ಒಂದು ಪಾತ್ರೆಗೆ ಸಕ್ಕರೆ ಹಾಗೂ ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ.

* ನಂತರ ಈ ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ.
* ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ.

* ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಒಲೆಯ ಮೇಲೆ ಬಾಣಲೆಯಿಟ್ಟು ಅಡುಗೆ ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಖಾಲಿ ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.

* ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧವಾಗುತ್ತದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications