FoodLatestMain PostVeg

ಹಬ್ಬಕ್ಕೆ ಮಾಡಲು ಮರೆಯದಿರಿ ಸಿಹಿಯಾದ ಬಾಸುಂದಿ

ದೇಶಾದ್ಯಂತ ನವರಾತ್ರಿ ಹಬ್ಬ ಆರಂಭವಾಗಿದೆ. ಹಬ್ಬದ ದಿನ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಸಿಹಿಯಾದ ಅಡುಗೆ ಮಾಡಿ ಸವಿಯುವುದು ಸರ್ವೇ ಸಾಮಾನ್ಯ. ಆದರೆ ನವರಾತ್ರಿ ಹಬ್ಬದ ವೇಳೆ 9 ದಿನ ಯಾವ ರೀತಿಯ ಸಿಹಿತಿಂಡಿಯನ್ನು ಮಾಡಬೇಕೆಂದು ಯೋಚಿಸುತ್ತಿರುವ ನಿಮಗೆ ನಾವು ಸಿಹಿಯಾದ ಬಾಸುಂದಿ ಮಾಡುವ ವಿಧಾನ ಹಾಗೂ ಬೇಕಾಗಿರುವ ಸಾಮಗ್ರಿಗಳು ಏನು ಎಂದು ಹೇಳುತ್ತೇವೆ. ಹಬ್ಬದ ದಿನದಂದು ಬಾಸುಂದಿ ಸವಿಯುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಿ.

Basundi

ಬೇಕಾಗು ಸಾಮಗ್ರಿಗಳು:
* ಹಾಲು- 2ಕಪ್
* ಕೆನೆ/ಹೆವಿ ಕ್ರೀಮ್- 2 ಚಮಚ
* ಕೋವಾ- 1ಚಮಚ
* ಏಲಕ್ಕಿ- 1
* ಸಕ್ಕರೆ- ಅರ್ಧ ಕಪ್
* ಕೇಸರಿ- ಸ್ವಲ್ಪ
* ಬಾದಾಮಿ- ಸ್ವಲ
* ಪಿಸ್ತಾ- ಸ್ವಲ್ಪ

Basundi

ಮಾಡುವು ವಿಧಾನ:
* ಸ್ವಲ್ಪ ಕೇಸರಿ ಎಳೆಗಳನ್ನು ಬಿಸಿಯಾದ ನೀರಿನಲ್ಲಿ ನೆನೆಸಿಡಿ
* ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ಹಾಲನ್ನು ಸೇರಿಸಿ, ಕುದಿಯಲು ಬಿಡಿ. ಒಮ್ಮೆ ಹಾಲು ಕುದಿ ಬಂದ ತಕ್ಷಣ ಕೇಸರಿ, ಕೋವಾವನ್ನು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಇದನ್ನೂ ಓದಿ: ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ

Basundi

* ನಂತರ, ಹೆವಿ ಕ್ರೀಮ್, ಏಲಕ್ಕಿ ಪುಡಿ, ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಸೇರಿಸಿ 3-4 ನಿಮಿಷಗಳ ಕಾಲ ಕುದಿಸಬೇಕು.
* ಹಾಲು ಮೊದಲಿನ ಪ್ರಮಾಣಕ್ಕಿಂತ ಕಡಿಮೆಯಾಗಿ, ದಪ್ಪವಾದ ಸ್ಥಿರತೆಯನ್ನು ಪಡೆದುಕೊಳ್ಳುತ್ತಿದ್ದಾಗ ಸಕ್ಕರೆಯನ್ನು ಸೇರಿಸಿ. ಸಕ್ಕರೆಯು ಚೆನ್ನಾಗಿ ಕುದಿಸಿದರೆ ಬಾಸುಂದಿ ರೆಸಿಪಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಉಪವಾಸ- ಈ ಆಹಾರಗಳನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

Leave a Reply

Your email address will not be published. Required fields are marked *

Back to top button