Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗಣಪತಿವಟ್ಟಂ ಸುಲ್ತಾನ್‌ ಬತ್ತೇರಿ ಎಂಬ ಹೆಸರು ಪಡೆದುಕೊಂಡಿದ್ದು ಹೇಗೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಗಣಪತಿವಟ್ಟಂ ಸುಲ್ತಾನ್‌ ಬತ್ತೇರಿ ಎಂಬ ಹೆಸರು ಪಡೆದುಕೊಂಡಿದ್ದು ಹೇಗೆ?

Latest

ಗಣಪತಿವಟ್ಟಂ ಸುಲ್ತಾನ್‌ ಬತ್ತೇರಿ ಎಂಬ ಹೆಸರು ಪಡೆದುಕೊಂಡಿದ್ದು ಹೇಗೆ?

Public TV
Last updated: April 24, 2024 12:52 pm
Public TV
Share
4 Min Read
Sulthan Batthery
SHARE

ಲೋಕಸಭಾ ಚುನಾವಣೆ (Lok Sabha Election) ಸನ್ನಿಹಿತವಾಗುತ್ತಿದ್ದಂತೆ ಕೇರಳದ ವಯನಾಡಿನಲ್ಲಿ (Wayanad) ಸುಲ್ತಾನ್‌ ಬತ್ತೇರಿ (Sulthan Bathery) ಹೆಸರು ಸಾಕಷ್ಟು ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಗೆದ್ದರೆ ವಯನಾಡು ಜಿಲ್ಲೆಯಲ್ಲಿರುವ ಸುಲ್ತಾನ್‌ ಬತ್ತೇರಿ ಎಂಬ ಹೆಸರನ್ನು ಗಣಪತಿವಟ್ಟಂ (Ganapathyvattam) ಎಂದು ಬದಲಾಯಿಸುತ್ತೇನೆ ಎಂದು ವಯನಾಡು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ ಭರವಸೆ ನೀಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಸುಲ್ತಾನ್‌ ಬತ್ತೇರಿಯ ಪೂರ್ವ ಹೆಸರು ಮತ್ತು ಇತಿಹಾಸವೇನು? ಗಣಪತಿವಟ್ಟಂ ಸುಲ್ತಾನ್‌ ಬತ್ತೇರಿಯಾಗಿ ಬದಲಾಗಿದ್ದು ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಸುಲ್ತಾನ್‌ ಬತ್ತೇರಿ ಹೆಸರು ಬಂದಿದ್ದು ಹೇಗೆ?
ಸುಲ್ತಾನ್‌ ಬತ್ತೇರಿ ಕೇರಳದ ಸ್ವಚ್ಛ ನಗರಿ ಎಂಬ ಹೆಸರನ್ನು ಪಡೆದಿದೆ. ಮಲಬಾರ್‌ನಲ್ಲಿ ಮೈಸೂರು ಅರಸರು ಆಡಳಿತ ನಡೆಸುತ್ತಿದ್ದ ಸಂದರ್ಭ ಈ ಜಾಗ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್‌  ಯಾರ್ಡ್‌ ಆಗಿತ್ತು ಎಂದು ಕೇರಳ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್‌ ಹೇಳುತ್ತದೆ. ಈ ಪಟ್ಟಣವನ್ನು ಮೂಲತಃ ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಸುಲ್ತಾನ್ ಬತ್ತೇರಿಯ ಪುರಸಭಾ ವೆಬ್‌ಸೈಟ್‌ನ ಪ್ರಕಾರ ಗಣಪತಿ ದೇವಸ್ಥಾನದ ಹೆಸರನ್ನು ಇಡಲಾಗಿತ್ತು. 

Sulthan Bathery

ವಯನಾಡಿನ ಮೂರು ಮುನ್ಸಿಪಲ್ ಪಟ್ಟಣಗಳಲ್ಲಿ ಒಂದಾದ ಸುಲ್ತಾನ್ ಬತ್ತೇರಿ (ಇನ್ನೆರಡು ಮಾನಂತವಾಡಿ ಮತ್ತು ಕಲ್ಪೆಟ್ಟಾ), ಒಂದು ಕಾಲದಲ್ಲಿ ಗಣಪತಿವಟ್ಟಂ ಎಂದು ಕರೆಯಲ್ಪಡುವ ಕಲ್ಲಿನ ದೇವಾಲಯವನ್ನು ಹೊಂದಿತ್ತು. ವಿಜಯನಗರ ರಾಜವಂಶದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು 13ನೇ ಶತಮಾನದಲ್ಲಿ ಇಂದಿನ ತಮಿಳುನಾಡು ಮತ್ತು ಕರ್ನಾಟಕದ ಪ್ರದೇಶಗಳಿಂದ ವಯನಾಡಿಗೆ ವಲಸೆ ಬಂದ ಜೈನರು ನಿರ್ಮಿಸಿದ್ದರು.

18ನೇ ಶತಮಾನದ ದ್ವಿತೀಯಾರ್ಧದಲ್ಲಿ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನನ (Tipu Sultan) ಆಕ್ರಮಣದ ಸಮಯದಲ್ಲಿ ದೇವಾಲಯವು ಭಾಗಶಃ ನಾಶವಾಯಿತು. 1750 ಮತ್ತು 1790ರ ನಡುವೆ, ಇಂದಿನ ಉತ್ತರ ಕೇರಳವನ್ನು ಮೈಸೂರು, ಹೈದರಾಲಿ ಮತ್ತು ಅವನ ಮಗ ಟಿಪ್ಪು ಹಲವಾರು ಬಾರಿ ಆಕ್ರಮಣ ಮಾಡಿ ದೇವಾಲಯವನ್ನು ಕೆಡವಿದ್ದರು. ಬಳಿಕ ಅದನ್ನು ಸುಮಾರು 150ವರ್ಷಗಳ ಕಾಲ ಹಾಗೆಯೇ ಬಿಡಲಾಗಿತ್ತು. ನಂತರ ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸ್ವಾಧೀನಪಡಿಸಿಕೊಂಡು ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಿತು.

Tipu

ಟಿಪ್ಪುವಿನ ಸೇನೆಯು ಗಣಪತಿವಟ್ಟಂ ಪಟ್ಟಣವನ್ನು ತನ್ನ ಬ್ಯಾಟರಿಯನ್ನು (ಕ್ಯಾನನ್‌ಗಳ ಸಮೂಹ) ಶೇಖರಿಸುವ ಸ್ಥಳವಾಗಿ ಬಳಸಿಕೊಂಡಿತು. ಬ್ರಿಟಿಷರ ಈ ಜಾಗವನ್ನು ವಶಪಡಿಸಿದ ಬಳಿಕ ಈ ಪಟ್ಟಣವನ್ನು ‘ಸುಲ್ತಾನರ ಬ್ಯಾಟರಿ’ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಈ ಹೆಸರು ʼಸುಲ್ತಾನ್ ಬತ್ತೇರಿʼಯಾಗಿ ಬದಲಾಯಿತು.

ಸಮುದ್ರ ಮಟ್ಟದಿಂದ 1000ಮೀ ಎತ್ತರದಲ್ಲಿರುವ ಸುಲ್ತಾನ್ ಬತ್ತೇರಿಯು ವರ್ಷವಿಡೀ ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಕಣಿವೆಗಳು, ಬಯಲು ಪ್ರದೇಶಗಳು ಮತ್ತು ಪರ್ವತಮಯ ಭೂಪ್ರದೇಶಗಳೊಂದಿಗೆ ಹೆಣೆದುಕೊಂಡಿರುವ ಸ್ಥಳಾಕೃತಿಯು ಇಲ್ಲಿಗೆ ಭೇಟಿ ನೀಡುವವರನ್ನು ಮೋಡಿ ಮಾಡುತ್ತದೆ.

Wayanad

ಒಂದು ಕಾಲದಲ್ಲಿ ಮಲಬಾರ್ ಪ್ರದೇಶದಲ್ಲಿ ಆಯಕಟ್ಟಿನ ಸ್ಥಳವೆಂದು ಹೆಸರಾಗಿದ್ದ ಸುಲ್ತಾನ್ ಬತ್ತೇರಿಯು ಈಗ ವಯನಾಡು ಜಿಲ್ಲೆಯ ಅತಿ ದೊಡ್ಡ ಪಟ್ಟಣವಾಗಿದೆ ಮತ್ತು ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.ಪೂರ್ವ-ಐತಿಹಾಸಿಕ ಗುಹೆಗಳು, ಕಾಡಿನ ಹಾದಿಗಳು, ಹೊಳೆಯುವ ತೊರೆಗಳು ಮತ್ತು ನದಿಗಳು ಮತ್ತು ಬೆಟ್ಟಗಳ ಹಚ್ಚ ಹಸಿರಿನ ಪ್ರದೇಶವು ಪ್ರತಿವರ್ಷ ಈ ಪ್ರದೇಶಕ್ಕೆ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ.

ಈ ಸ್ಥಳವು NH 212 ಕೋಝಿಕ್ಕೋಡ್ – ಮೈಸೂರು ರಾಷ್ಟ್ರೀಯ ಹೆದ್ದಾರಿಯೊಂದಿಗೆ ವಿವಿಧ ಸ್ಥಳಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. 

ಸುಲ್ತಾನ್‌ ಬತ್ತೇರಿ ಎಲ್ಲಿದೆ?
ಕಲ್ಪೆಟ್ಟದಿಂದ 26 ಕಿ.ಮೀ ದೂರದಲ್ಲಿ, ಕೋಜಿಕೋಡ್‌ನಿಂದ 99 ಕಿ.ಮೀ, ಊಟಿಯಿಂದ 95 ಕಿ.ಮೀ ಮತ್ತು ಮೈಸೂರಿನಿಂದ 116 ಕಿ.ಮೀ ದೂರದಲ್ಲಿದೆ. ಹಿಂದೆ ಸುಲ್ತಾನ್‌ ಬತ್ತೇರಿ ಎಂದು ಕರೆಯಲಾಗುತ್ತಿದ್ದ ಸುಲ್ತಾನ್ ಬತ್ತೇರಿ, ಕೇರಳದ ವಯನಾಡ್ ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ. ಸಮುದ್ರ ಮಟ್ಟದಿಂದ 930 ಮೀಟರ್ ಎತ್ತರದಲ್ಲಿದೆ ಇದು ಕೇರಳದ ಒಂದು ಗಿರಿಧಾಮ ಮತ್ತು ಕೇರಳದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.

Wayanad 1

ಸುಲ್ತಾನ್ ಬತ್ತೇರಿ ಭವ್ಯವಾದ ಸೌಂದರ್ಯ ಮತ್ತು ಮಸಾಲೆ ತೋಟಗಳಿಗೆ ಹೆಸರುವಾಸಿಯಾಗಿದೆ. ಹಚ್ಚ ಹಸಿರಿನ ಬೆಟ್ಟಗಳು ಮತ್ತು ತಂಪಾದ ಹವಾಮಾನವನ್ನು ಇಲ್ಲಿ ಆಹ್ಲಾದಿಸಬಹುದು. 13 ನೇ ಶತಮಾನದಲ್ಲಿ ನಿರ್ಮಿಸಲಾದ  ಜೈನ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಗಣಪತಿ ದೇವಸ್ಥಾನ ಮತ್ತು ಮರಿಯಮ್ಮನ್ ದೇವಾಲಯವು ಪಟ್ಟಣದ ಇತರ ಆಕರ್ಷಣೆಗಳು. ಗಣಪತಿ ದೇವಾಲಯವು ಎಂಟು ಶತಮಾನಗಳಷ್ಟು ಹಳೆಯದಾದ ದೇವಾಲಯವಾಗಿದ್ದು, ಗಣೇಶನಿಗೆ ಅರ್ಪಿತವಾಗಿದೆ, ಇದು ಬುಡಕಟ್ಟು ಜನರಿಗೆ ಪೂಜಾ ಸ್ಥಳವಾಗಿದೆ.

ತಲುಪುವುದು ಹೇಗೆ?
ಸುಲ್ತಾನ್ ಬತ್ತೇರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೋಜಿಕೋಡ್‌ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು 111 ಕಿ.ಮೀ ದೂರದಲ್ಲಿದೆ. ಕೋಜಿಕೋಡ್ ಹತ್ತಿರದ ರೈಲುಮಾರ್ಗವಾಗಿದ್ದು, ಇದು 100 ಕಿ.ಮೀ ದೂರದಲ್ಲಿದೆ. ಸುಲ್ತಾನ್ ಬತ್ತೇರಿ ಮೈಸೂರು, ಬೆಂಗಳೂರು, ಕೋಜಿಕೋಡ್, ಊಟಿ, ಕೊಯಮತ್ತೂರು, ಮಂಗಳೂರು, ಕಣ್ಣೂರು, ತಲಚೇರಿ ಮತ್ತು ಕಾಸರಗೋಡುಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.

ಸುಲ್ತಾನ್ ಬತ್ತೇರಿ ವಯನಾಡ್ ಜಿಲ್ಲೆಯ ಅತಿದೊಡ್ಡ ಸಾರಿಗೆ ಕೇಂದ್ರವಾಗಿದೆ. ಇದು ಕರ್ನಾಟಕ ರಾಜ್ಯದ ಗಡಿಯ ಸಮೀಪದಲ್ಲಿದೆ. ಸುಲ್ತಾನ್ ಬತ್ತೇರಿಯಲ್ಲಿ ಕೇರಳದ ಪ್ರಮುಖ ಸಾರಿಗೆ ಡಿಪೋ ಇದೆ. ಕೋಜಿಕೋಡ್, ಊಟಿ ಮತ್ತು ಬೆಂಗಳೂರಿಗೆ ಬಸ್ಸುಗಳು ಈ ಡಿಪೋದಿಂದ ಪ್ರಾರಂಭವಾಗುತ್ತವೆ. ಪಟ್ಟಣದಲ್ಲಿ ಸ್ಥಳೀಯ ಪ್ರಯಾಣಿಕರಿಗಾಗಿ ಎರಡು ಸಣ್ಣ ಬಸ್ ನಿಲ್ದಾಣಗಳಿವೆ. ಪೆರಿಯಾ ಘಾಟ್ ರಸ್ತೆ ಮನಂತವಾಡಿಯನ್ನು ಕಣ್ಣೂರು ಮತ್ತು ತಲಚೇರಿಗೆ ಸಂಪರ್ಕಿಸುತ್ತದೆ.

TAGGED:GanapathyvattamkeralaSulthan BatheryTipu SultanWayanadಕೇರಳಗಣಪತಿವಟ್ಟಂಟಿಪ್ಪು ಸುಲ್ತಾನ್ವಯನಾಡ್ಸುಲ್ತಾನ್‌ ಬತ್ತೇರಿ
Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Patahi Airport
Latest

ಬಿಹಾರದಲ್ಲಿ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣ – ಶೀಘ್ರದಲ್ಲೇ ವಿಮಾನ ಸೇವೆ ಆರಂಭ

Public TV
By Public TV
3 minutes ago
a man from Belthangady who was going to sabarimala temple fell from the train and died in kerala
Dakshina Kannada

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ದುರ್ಮರಣ

Public TV
By Public TV
10 minutes ago
Donald Trump Asim Munir Shehbaz Sharif
Latest

ಅಮೆರಿಕದ ವಿರುದ್ಧ ಮುನೀರ್‌ ಡಬಲ್‌ಗೇಮ್‌ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ

Public TV
By Public TV
27 minutes ago
Davanagere Kavya Murder Case
Crime

ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ?

Public TV
By Public TV
39 minutes ago
Pahalgam QR Code IdentificationS
Latest

ಪಹಲ್ಗಾಮ್‌ ನರಮೇಧಕ್ಕೆ 1 ವರ್ಷ – ಪ್ರವಾಸಿಗರ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು?

Public TV
By Public TV
1 hour ago
pm modi meeting
Latest

ದೇಶವನ್ನು ಉದ್ದೇಶಿಸಿ ಭಾಷಣ – ಮೋದಿ ವಿರುದ್ಧ ಕಾಂಗ್ರೆಸ್‌, ಸಿಪಿಎಂನಿಂದ ದೂರು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?