ಚಿಕ್ಕೋಡಿ: ಕಳೆದೊಂದು ವಾರದಿಂದ ನಿರಂತರ ಮಳೆ (Heavy Rain) ಹಿನ್ನೆಲೆ ಸೋರುತ್ತಿದ್ದ ಮನೆ ರಿಪೇರಿ ಮಾಡುತ್ತಿದ್ದ ವೇಳೆ ಮನೆ ಕುಸಿದು ಬಿದ್ದು (House Collapse) ಇಬ್ಬರು ಕಾರ್ಮಿಕರು (Workers) ಮೃತಪಟ್ಟಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ (Athani) ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ನಡೆದಿದೆ.
ಮಾದೇವ್ ಕೃಷ್ಣಪ್ಪ ಬಡಿಗೇರ್ (48), ಸೈಯದ್ ಕೆಂಪವಾಡಿ (32) ಮೃತ ಕಾರ್ಮಿಕರು. ಲಕ್ಷ್ಮೀಬಾಯಿ ನಂದಗೊಂಡ ಎಂಬವರ ಮನೆ ರಿಪೇರಿ ಮಾಡುವಾಗ ದುರಂತ ಸಂಭವಿಸಿದೆ. ಮನೆಯ ರಿಪೇರಿ ವೇಳೆ ಮನೆ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ʻಗ್ಯಾಲಕ್ಸಿʼ ಮೇಲೆ ದಾಳಿ – ಓರ್ವ ಭಾರತೀಯ ಮಿಸ್ಸಿಂಗ್, 10 ಜನರ ರಕ್ಷಣೆ

ತಕ್ಷಣವೇ ಸ್ಥಳೀಯರು ಕಾರ್ಮಿಕರನ್ನು ರಕ್ಷಿಸಿ ಪಕ್ಕದ ಮಹಾರಾಷ್ಟ್ರದ ಜತ್ತ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬೀಳಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ – 450 ಕೆಜಿ ಶ್ರೀಗಂಧದ ಕಟ್ಟಿಗೆ ಜಪ್ತಿ
