ಚಂಡೀಗಢ: ಪಾರ್ಕಿಂಗ್ ವಿವಾದದ ಹಿನ್ನೆಲೆಯಲ್ಲಿ ಫರೀದಾಬಾದ್ನಲ್ಲಿ (Faridabad) ನೆರೆಮನೆಯ ವ್ಯಕ್ತಿಯಿಂದ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಫ್ಯಾಮಿಲಿಯ ಮದುವೆಗಾಗಿ ಸಿಂಗಾಪುರದಿಂದ ಬಂದಿದ್ದ ಟೆಕ್ ಮಹೀಂದ್ರಾ ಏಷ್ಯಾ ಹೆಡ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಟೆಕ್ ಮಹೀಂದ್ರಾದ ಏಷ್ಯಾ-ಪೆಸಿಫಿಕ್ ವಲಯದ ಮಾಜಿ ಪ್ರಾದೇಶಿಕ ವ್ಯವಹಾರ ಮುಖ್ಯಸ್ಥರಾಗಿದ್ದ ಪರಮ್ಜೀತ್ ಧನಕರ್ ಅವರನ್ನು ಗುಂಡಿಕ್ಕಿ ಕೊಂದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬಲ್ಲಬ್ಗಢದ ಡಿಎಲ್ಎಫ್ ಚೌಕ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಿಯಾಬಾದ್ನಲ್ಲಿ ಮನೆಯ ಸ್ಲ್ಯಾಬ್ ಕುಸಿತ – ಓರ್ವ ಸಾವು, ಹಲವರು ಸಿಲುಕಿರುವ ಶಂಕೆ
ಮೋಹನ್ ಅಲಿಯಾಸ್ ಮೋನು ಶರ್ಮಾ ಎಂದು ಗುರುತಿಸಲಾದ ಆರೋಪಿಯು, ಸೆಕ್ಟರ್ 21ಸಿ (Sector 21C) ಯಲ್ಲಿ ಧನಕರ್ ಮೇಲೆ ಗುಂಡು ಹಾರಿಸಿದ್ದ. ಆರೋಪಿಯು ಸುಮಾರು 14-15 ಸುತ್ತು ಗುಂಡುಗಳನ್ನು ಹಾರಿಸಿದ್ದ. ಅದರಲ್ಲಿ ಮೂರರಿಂದ ನಾಲ್ಕು ಗುಂಡುಗಳು ಧನಕರ್ಗೆ ತಗುಲಿದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟರು.
ಧನಕರ್ 641ನೇ ಸಂಖ್ಯೆಯ ಮನೆಯ ಮೊದಲ ಮಹಡಿಯಲ್ಲಿ ತಮ್ಮ ಪತ್ನಿ, ಮಗ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ವಾಸಿಸುತ್ತಿದ್ದ. ಇದನ್ನೂ ಓದಿ: ನಿರ್ಮಾಣ ಹಂತದ ಎಕ್ಸ್ಪ್ರೆಸ್ ಹೈವೇಯಲ್ಲಿ ಭೀಕರ ಅಪಘಾತ – ನಾಲ್ವರು ಯುವಕರು ದುರ್ಮರಣ
ಘಟನೆ ನಡೆದ ದಿನ ಧನಕರ್ ರಾತ್ರಿ 8 ಗಂಟೆ ಸುಮಾರಿಗೆ ಜಿಮ್ನಿಂದ ಮನೆಗೆ ವಾಪಸ್ ಆಗಿದ್ದರು. ಈ ವೇಳೆ, ಪಾರ್ಕಿಂಗ್ ವಿಚಾರಕ್ಕೆ ಆರೋಪಿ ಜೊತೆ ಜಗಳ ತೆಗೆದಿದ್ದರು. ಜಗಳ ತೀವ್ರಗೊಂಡು, ಆರೋಪಿ ಮೋಹನ್ ತನ್ನ ಪರವಾನಗಿ ಪಡೆದ ಪಿಸ್ತೂಲ್ ಹೊರತೆಗೆದು ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ಧನಕರ್ ಸಾವಿಗೀಡಾಗಿದ್ದಾರೆ.
