BollywoodCinemaLatestMain PostSandalwood

ಸಂಜಯ್ ದತ್, ರವೀನಾ ಟಂಡನ್ ಜೊತೆ ಕ್ರಿಕೆಟ್ ವೀಕ್ಷಿಸಿದ ಹೊಂಬಾಳೆ ತಂಡ

ಕೆಜಿಎಫ್-2 ರಿಲೀಸ್ ಆಗಿ ವಿಶ್ವಾದ್ಯಂತ ಯಶಸ್ಸನ್ನು ಕಾಣುತ್ತಿದೆ. ಎಲ್ಲಾಕಡೆ ಕನ್ನಡ ಸಿನಿಮಾ ಬಗ್ಗೆ ಹೆಮ್ಮೆಯ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಕೆಜಿಎಫ್-2 ತಂಡ ಕೂಲ್ ಆಗಿ ಮುಂಬೈನಲ್ಲಿ RCB ಮ್ಯಾಚ್ ನೋಡುತ್ತಿದೆ. ಅದರಲ್ಲಿಯೂ ಬಾಲಿವುಡ್ ಸ್ಟಾರ್ ಸಂಜಯ್ ದತ್, ರವೀನಾ ಟಂಡನ್ ಜೊತೆ ಹೊಂಬಾಳೆ ತಂಡ ಮ್ಯಾಚ್ ವೀಕ್ಷಣೆ ನೋಡುತ್ತಿದೆ.

RCB ಮ್ಯಾಚ್ ವೀಕ್ಷಿಸಿಸಲು ನಿರ್ಮಾಪಕ ವಿಜಯ್ ಕಿರಗಂದೂರು ಕುಟುಂಬ ಮತ್ತು ಸ್ನೇಹಿತರು ಮುಂಬೈಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ಕೆಜಿಎಫ್-2 ಆಧೀರ ಮತ್ತು ರವೀನಾ ಸಹ ಸಾಥ್ ಕೊಟ್ಟಿದ್ದಾರೆ. ಇಂದು(ಮಂಗಳವಾರ) RCB vs ಲಕ್ನೋ ನಡುವಿನ ಪಂದ್ಯ ಮುಂಬೈನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಮ್ಯಾಚ್ ವೀಕ್ಷಿಸಲು ಕೆಜಿಎಫ್-2 ತಂಡ ಕ್ರಿಡಾಂಗಣಕ್ಕೆ ಬಂದಿದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

ಹೊಂಬಾಳೆ ತಂಡದಿಂದ ನಿರ್ಮಾಣವಾದ ಸಿನಿಮಾ ಕೆಜಿಎಫ್-2, ಈಗ ವಿಶ್ವಾದ್ಯಂತ ಹೊಸದೊಂದು ಅಲೆಯನ್ನೆ ಹೆಬ್ಬಿಸಿದೆ. ಸಿನಿಮಾ ನೋಡಿದ ಎಲ್ಲರೂ ರಾಕಿಭಾಯ್ ಗುಂಗಿನಲ್ಲೇ ಇದ್ದಾರೆ. ಕೆಜಿಎಫ್-2 ನಾಯಕ ಯಶ್‍ಗೆ ಬೇರೆ ಭಾಷೆಯ ಜನರು ಫ್ಯಾನ್ಸ್ ಆಗಿದ್ದಾರೆ. ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಎಲ್ಲಕಡೆ ಮಿಂಚುತ್ತಿದ್ದಾರೆ. ಕೆಜಿಎಫ್-2 ತಂಡದ ಜೊತೆಗೆ ಇರುತ್ತಿದ್ದ ಈ ನಟ ಈಗ ಫ್ಯಾಮಿಲಿಗೆ ಸಮಯ ಕೊಟ್ಟಿದ್ದಾರೆ. ಈ ಹಿನ್ನೆಲೆ ಫ್ಯಾಮಿಲಿ ಜೊತೆ ಎಂಜಾಯ್ ಮೂಡಿನಲ್ಲಿ ರಾಕಿಭಾಯ್ ಇದ್ದಾರೆ.

ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾವನ್ನು ಬೇರೆ ಸ್ಥಾನಕ್ಕೆ ಕರೆದುಕೊಂಡು ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ವಿಶ್ವವೇ ಈ ಸಿನಿಮಾಗೋಸ್ಕರ ಎದುರು ನೋಡುತ್ತಿತ್ತು. ಅಭಿಮಾನಿಗಳು ಮತ್ತು ಚಿತ್ರರಸಿಕರ ಮನ ನೋಯಿಸದಂತೆ ಕೆಜಿಎಫ್-2 ಸಿನಿಮಾ ಮೂಡಿಬಂದಿದ್ದು, ಇನ್ನೊಂದು ಭಾಗ ಬರುತ್ತೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

Leave a Reply

Your email address will not be published.

Back to top button