BollywoodCinemaLatestMain Post

ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

ಬಾಲಿವುಡ್ ಲವ್‍ಬಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೊನೆಗೂ ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿವರೆಗೂ ಈ ಜೋಡಿಯ ಸಂಭ್ರಮದ ಫೋಟೋ, ವೀಡಿಯೋಗಳನ್ನು ಅವರ ಆಪ್ತ ವರ್ಗ ಶೇರ್ ಮಾಡಿಕೊಳ್ಳುತ್ತಿದ್ದರು. ಎಲ್ಲ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದವು. ಆದರೆ ಈಗ ಆಲಿಯಾ ತಾಯಿ ಸೋನಿ ರಜ್ದಾನ್ ಅವರು ಮಗಳ ಭಾವನಾತ್ಮಕ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಪ್ರತಿಯೊಂದು ಮದುವೆಯಲ್ಲಿ ಸಂತೋಷದ ಜೊತೆಗೆ ದುಃಖ ಸನ್ನಿವೇಶಗಳು ಕಂಡುಬರುತ್ತವೆ. ಅದೇ ರೀತಿ ರಣವೀರ್ ಮತ್ತು ಆಲಿಯಾ ಮದುವೆಯಲ್ಲಿಯೂ ನಡೆದಿದೆ. 5 ವರ್ಷಗಳ ಡೇಟಿಂಗ್ ನಂತರ ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿ ತಮ್ಮ ಮಧುರವಾದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೋನಿ ರಜ್ದಾನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸಂತೋಷ ಮತ್ತು ದುಃಖದ ಕ್ಷಣವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ತಮ್ಮ ವೆಯ್ಟ್ ಲಾಸ್ ಜರ್ನಿ ಬಗ್ಗೆ ಹೇಳಿದ ಕಾಶ್ಮೀರಿ ಪಂಡಿತಾ

 

View this post on Instagram

 

A post shared by Soni Razdan (@sonirazdan)

ಈ ಫೋಟೋದಲ್ಲಿ ರಣಬೀರ್ ಆಲಿಯಾಳ ಹಿಂದೆ ನಿಂತಿದ್ದಾರೆ. ಈ ಫೋಟೋದಲ್ಲಿ ಆಲಿಯಾ ಮತ್ತು ಸೋನಿ ಭಾವನಾತ್ಮಕವಾಗಿರುವುದನ್ನು ಕಾಣಬಹುದು. ಸೋನಿ ತನ್ನ ಮಗಳನ್ನು ಪ್ರೀತಿಯಿಂದ ಭಾವನಾತ್ಮಕವಾಗಿ ನೋಡುತ್ತಿರುವುದು ತಿಳಿದುಬರುತ್ತದೆ. ಫೋಟೋ ಶೇರ್ ಮಾಡಿದ ಸೋನಿ, ‘ನನ್ನ ಹೃದಯ ಬಡಿತಗಳು’ ಎಂದು ಬರೆದು ಕೊಂಡಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರು ಸಖತ್ ಖುಷ್ ಆಗಿದ್ದು, ಮದುವೆ ಸಮಯದಲ್ಲಿ ಇದು ಸಾಮಾನ್ಯ. ಆದರೆ ಇದು ತುಂಬಾ ಸುಂದರವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಕುಟುಂಬದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಆ ಕಣ್ಣುಗಳು! ಭಾವನೆಗಳು ಮತ್ತು ಪ್ರೀತಿಯಿಂದ ತುಂಬಿದೆ. ದೇವರು ಯಾವಾಗಲೂ ನಿಮ್ಮ ಪ್ರೀತಿ ಪಾತ್ರರನ್ನು ಹತ್ತಿರ ಮತ್ತು ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಸತ್ತಿರುವ ವಿಚಾರಕ್ಕೆ ಹೋರಾಟ ಮಾಡಿದ್ದು ಸಣ್ಣ ವಿಚಾರನಾ?: ಸಿದ್ದರಾಮಯ್ಯ  

ಕಳೆದ ವಾರ ಮದುವೆಯಾದ ನಂತರ ಆಲಿಯಾ ಮತ್ತು ರಣಬೀರ್ ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ರಣಬೀರ್ ಲವ್ ರಂಜನ್-ನಿರ್ದೇಶನದ ಸೆಟ್‌ಗೆ ಹಿಂತಿರುಗಿದ್ದು, ಆಲಿಯಾ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ. ಆಲಿಯಾ ಅವರು ಖಾಸಗಿ ವಿಮಾನ ನಿಲ್ದಾಣದ ಮೂಲಕ ಮಂಗಳವಾರ ಬೆಳಗ್ಗೆ ಶೂಟಿಂಗ್‌ಗೆ ಹೋಗುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

Leave a Reply

Your email address will not be published.

Back to top button