ಬೆಂಗಳೂರು: ಅಡ್ಡ ಮತದಾನ( Cross Voting) ಮಾಡಿರುವವರ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ(BJP) ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.
ಅಡ್ಡ ಮತದಾನ ವಿಚಾರವಾಗಿ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಆಣೆ-ಪ್ರಮಾಣ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಡ್ಡ ಮತದಾನದ ಕುರಿತು ಕಾಂಗ್ರೆಸ್‌ನವರೇ ಅಪಪ್ರಚಾರ ಮಾಡುತ್ತಿದ್ದಾರೆ. ನಾನೇ ಕ್ರಾಸ್ ವೋಟ್ ಮಾಡಿದ್ದೀನಿ ಅಂತ ಹೇಳ್ತಿದ್ರು. ನಾನು ಅಡ್ಡ ಮತದಾನ ಮಾಡಿಲ್ಲ. ಅವರ ಆರೋಪಕ್ಕೆ ನಾನೇನು ತಲೆಕೆಡಿಸಿಕೊಂಡಿಲ್ಲ. ಪ್ರಾಮಾಣಿಕವಾಗಿ ಇರುವವರಿಗೆ ಯಾವುದೇ ಆಣೆ-ಪ್ರಮಾಣ ಬೇಕಿಲ್ಲ ಎಂದರು.ಇದನ್ನೂ ಓದಿ: ಹಾವೇರಿಯ ನರೇಗಲ್ ಘಟನೆ ಕೋಮು ಸೌಹಾರ್ದತೆ ಕದಡುವ ಹೇಯ ಕೃತ್ಯ: ಬೊಮ್ಮಾಯಿ
ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಪಕ್ಷಕ್ಕೆ ಗೊತ್ತಿದೆ. ಮೋದಿ, ಅಮಿತ್ ಶಾ ಬಳಿ ಎಲ್ಲ ಮಾಹಿತಿ ಇದೆ. ಕೇಂದ್ರದ ಬಳಿ ಸಿಬಿಐ, ಐಬಿ ಎಲ್ಲವೂ ಇದೆ. ಕೇಂದ್ರದ ನಾಯಕರಿಗೆ ಎಲ್ಲಾ ಮಾಹಿತಿ ಇರುತ್ತದೆ. ಪಕ್ಷಕ್ಕೆ ದ್ರೋಹ ಮಾಡಿದ ಯಾರನ್ನೂ ಪಕ್ಷ ಬಿಡಲ್ಲ. ತಕ್ಕ ಶಾಸ್ತಿ ಮಾಡುತ್ತಾರೆ. ಅಡ್ಡ ಮತದಾನ ಯಾರೇ ಮಾಡಿದರೂ ಅವರಿಗೆ ಬುದ್ಧಿ ಕಲಿಸುತ್ತಾರೆ. ಪಕ್ಷಕ್ಕೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ. ಅಡ್ಡ ಮತದಾನ ಮಾಡಿರುವವರ ಮೇಲೆ ಹೈಕಮಾಂಡ್ ಕ್ರಮ ತೆಗೆದುಕೊಂಡೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.ಇದನ್ನೂ ಓದಿ: ಒಂದೇ ದಿನದ ಮಳೆಗೆ ಉಕ್ಕಿ ಹರಿದ ಭದ್ರೆ – ನಿನ್ನೆ ಯುವಕರು ಆಟ ಆಡಿದ್ದ ಜಾಗದಲ್ಲಿಂದು ನದಿಯ ರೌದ್ರ ನರ್ತನ
