ಮೈಸೂರು: ಕರ್ನಾಟಕಕ್ಕೆ (Karnataka) ಸಹಾಯ ಮಾಡಿ. ಕರ್ನಾಟಕವನ್ನು ರಕ್ಷಿಸಿ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಪ್ರಧಾನಿ ನರೇಂದ್ರ ಮೋದಿಯವರಲ್ಲಿ (Narendra Modi) ಮನವಿ ಮಾಡಿದ್ದಾರೆ.
ರಾಮಕೃಷ್ಣ ಆಶ್ರಮದ ವಿದ್ಯಾ ಶಾಲೆ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಡೀ ದೇಶ ಕರ್ನಾಟಕ ನೋಡುತ್ತಿದೆ. ಕರ್ನಾಟಕ ಇಡೀ ದೇಶದ ಪ್ರಮುಖ ರಾಜ್ಯ. ಕರ್ನಾಟಕದ ವಾತಾವರಣ, ಸಂಸ್ಕೃತಿ ನೋಡಿ. ಇದು ಸಂಕಲ್ಪ ಭೂಮಿ. ನಾವು ನೀವೂ ಜೊತೆಯಾಗಿ ಸೇರಿ ಈ ಕರ್ನಾಟಕ ಬೆಳೆಸೋಣ. ಭಾರತ ಕರ್ನಾಟಕದ ಜೊತೆ ಅಭಿವೃದ್ಧಿಯಾಗಲಿ. ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡೋಣ. ನಮಗೆ ನಿಮ್ಮ ಸಹಕಾರ ಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: CWG 2026: ಶಾಟ್‌ಪುಟ್‌ನಲ್ಲಿ ಭಾರತಕ್ಕೆ ಡಬಲ್ ಸಂಭ್ರಮ – ಸೋಮನ್‌ಗೆ ಚಿನ್ನ, ಶುಭಮ್‌ಗೆ ಬೆಳ್ಳಿ

ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ವಿವೇಕಾನಂದರ ಆಲೋಚನೆಯಂತೆ ಯುವ ನವಯುಗದಂತೆ ಸರ್ಕಾರ ನಡೆಸುತ್ತೇನೆ. ಯುವ ಶಕ್ತಿ ಬಳಸಲು ಕಾರ್ಯಕ್ರಮ ರೂಪಿಸಿದ್ದೇನೆ. ಮೈಸೂರು ಇತಿಹಾಸ ವಿಶ್ವದ ವಿಶ್ವಾಸ. ವಿವೇಕಾನಂದರು ಮೈಸೂರಿನಿಂದ ನೇರವಾಗಿ ಚಿಕಾಗೋಗೆ ಹೋಗಿ ಐತಿಹಾಸಿಕ ಭಾಷಣ ಮಾಡಿದರು. ನಮ್ಮ ಸರ್ಕಾರ ವಿವೇಕಾನಂದರ ಕನಸುಗಳನ್ನು ಹೊಂದಿದೆ. ಗ್ರಾಮ ಪಂಚಾಯಿತಿ, ನಗರದಲ್ಲಿ ಯುವಜನತೆ ಪಡೆಗಳ ಕಟ್ಟುವ ಸಂಕಲ್ಪ ಮಾಡಿದ್ದೇನೆ. ಈ ಆಶ್ರಮ ಕರ್ನಾಟಕದ ಆಸ್ತಿ ಅಲ್ಲ, ಇದು ದೇಶದ ಆಸ್ತಿಯಾಗಿದೆ. ಆ ಆಶ್ರಮದ ಪರವಾಗಿ ನಮ್ಮ ಸರ್ಕಾರ ನಿಂತಿದೆ ಎಂದರು. ಇದನ್ನೂ ಓದಿ: ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಮೋದಿ
ವಿವೇಕ ಸ್ಮಾರಕ ಇಡೀ ದೇಶದ ಆಸ್ತಿ. ಇಡೀ ಸರ್ಕಾರ ರಾಮಕೃಷ್ಣ ಆಶ್ರಮದ ಪರ ನಿಲುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ. ವಿವೇಕಾನಂದರ ತ್ಯಾಗ ನಮಗೆ ಸ್ಫೂರ್ತಿ. ಇದು ಮೈಸೂರಿನ ಐತಿಹಾಸಿಕ ಸಮಾರಂಭವಲ್ಲ, ದೇಶದ ಐತಿಹಾಸಿಕ ಸಮಾರಂಭ ಎಂದು ಬಣ್ಣಿಸಿದರು.
ಭಾಷಣದ ವೇಳೆ ಸಿಎಂ ಕನಕದಾಸರ ಪ್ರವಚನ ಪಠಿಸಿದ ಡಿಕೆಶಿ, ಕೊನೆಯಲ್ಲಿ ಜೈ ಹಿಂದ್, ಜೈ ಭಾರತ, ಜೈ ವಿವೇಕಾನಂದ ಎಂದು ಘೋಷಣೆ ಕೂಗಿದರು. ಇನ್ನು ಭಾಷಣ ಮುಗಿಸಿ ಬರುವಾಗ ಪ್ರಧಾನಿಗೆ ಡಿಕೆಶಿ ಕೈ ಮುಗಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಕುಳಿತುಕೊಂಡೇ ನಗು ನಗುತ್ತಾ ಸಿಎಂಗೆ ಕೈ ಮುಗಿದರು. ಇದನ್ನೂ ಓದಿ: ಬಿಡದಿ ಟೌನ್‌ಶಿಪ್‌ಗೆ ವಿರೋಧ – ಪಾದಯಾತ್ರೆಗೆ ಜೆಡಿಎಸ್‌ನಿಂದ ಹೊಸ ದಿನಾಂಕ ನಿಗದಿ
