– ಬಾಕ್ಸಿಂಗ್‌ನಲ್ಲಿ ಪ್ರೀತಿ ಪವಾರ್, ಜೈಸ್ಮಿನ್‌ಗೆ ಚಿನ್ನದ ಪದಕ
ಗ್ಲಾಸ್ಕೋ: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ಒಂದೇ ದಿನ ಭಾರತಕ್ಕೆ 2 ಚಿನ್ನದ ಪದಕಗಳು ಲಭಿಸಿವೆ. ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಲಂಬೋರಿಯಾ ಇಬ್ಬರೂ ಚಿನ್ನ ಗೆದ್ದು ಮಿಂಚಿದ್ದಾರೆ. ಆ ಮೂಲಕ 2026 ರ ಸಿಡಬ್ಲ್ಯೂಜಿಯಲ್ಲಿ ಭಾರತದ ಚಿನ್ನದ ಸಂಖ್ಯೆ ಏಳಕ್ಕೆ ಏರಿದೆ.
ಏತನ್ಮಧ್ಯೆ, ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕ ಗೆದ್ದರು. ಫೈನಲ್‌ನಲ್ಲಿ ಇನ್ನೂ ಎಂಟು ಬಾಕ್ಸರ್‌ಗಳು ಸ್ಪರ್ಧೆಯಲ್ಲಿದ್ದಾರೆ.
