Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರೀ ಮಳೆಗೆ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ಧರೆಗುರುಳಿದ ಮರ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chamarajanagar | ಭಾರೀ ಮಳೆಗೆ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ಧರೆಗುರುಳಿದ ಮರ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌

Chamarajanagar

ಭಾರೀ ಮಳೆಗೆ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ಧರೆಗುರುಳಿದ ಮರ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌

Public TV
Last updated: April 20, 2026 10:15 pm
Public TV
Share
2 Min Read
Rain Chikkamagaluru
SHARE

– ಆಲೂರಲ್ಲಿ ಸಿಡಿಲಿಗೆ ವೃದ್ಧೆ ಬಲಿ
– ರಾಣೇಬೆನ್ನೂರಲ್ಲಿ ಕೆರೆಯಂತಾದ ರಸ್ತೆಗಳು
– ಸಿಎಂ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆ
– ಉಡುಪಿಯಲ್ಲಿ ಮಳೆಯಿಂದ ನಿಟ್ಟುಸಿರುಬಿಟ್ಟ ಜನ

ಚಿಕ್ಕಮಗಳೂರು: ಜಿಲ್ಲೆಯ (Chikkamagaluru) ಹಲವೆಡೆ ಭಾರೀ (Rain) ಮಳೆಯಾಗುತ್ತಿದೆ. ಪರಿಣಾಮ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಎನ್.ಆರ್.ಪುರ ತಾಲೂಕಿನ ಆಮ್ತಿ ಬಳಿ ಬೃಹತ್‌ ಮರವೊಂದು ಬಿದ್ದಿದ್ದು, ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇನ್ನೂ ಮರ ಬಿದ್ದಿದ್ದರಿಂದ ಬಾಳೆಹೊನ್ನೂರು, ಕೊಟ್ಟಿಗೆಹಾರ ಮಾರ್ಗದಲ್ಲಿ ಎರಡೂ ಬದಿಯಲ್ಲಿ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಸ್ಥಳಿಯರಿಂದ ಬೃಹತ್ ಮರ ತೆರವು ಕಾರ್ಯ ನಡೆಯುತ್ತಿದೆ.

ಮೂಡಿಗೆರೆ-ಕಳಸ ತಾಲೂಕಿನಲ್ಲೂ ಭಾರೀ ಗಾಳಿ ಮಳೆಯಾಗುತ್ತಿದೆ. ಕಳಸ ತಾಲೂಕಿನ ಕುದುರೆಮುಖ ಟಿಬಿ ಸರ್ಕಲ್‌ನಲ್ಲಿ ಮರ ಧರೆಗುರುಳಿದೆ. ಹಲವೆಡೆ ಭೂಮಿಯಿಂದ 100 ಅಡಿ ಎತ್ತರಕ್ಕೆ ಶೀಟ್‌ಗಳು ಹಾರಿವೆ. ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಆರು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಅಲಗೇಶ್ವರ ಗ್ರಾಮದಲ್ಲಿ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾಫಿನಾಡು, ಮಲೆನಾಡಲ್ಲಿ ತಡರಾತ್ರಿ ಭಾರೀ ಮಳೆ – ಧರೆಗುರುಳಿದ ವಿದ್ಯುತ್‌ ಕಂಬ, ಮರಗಳು

Rain 3

ಚಾಮರಾಜನಗರದಲ್ಲೂ ಭಾರೀ ಮಳೆ
ಜಿಲ್ಲೆಯ (Chamarajanagar) ಗುಂಡ್ಲುಪೇಟೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದಾನೆ. ಇದರಿಂದ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒದ್ದೆಯಾಗಿದೆ. ಗುಂಡ್ಲುಪೇಟೆ ಭಾಗದ 110 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭಾಗಿಯಾಗಿದ್ದರು.

Rain 2

ಹಾಸನದಲ್ಲೂ ಗುಡುಗು ಸಹಿತ ಮಳೆ
ಹಾಸನ (Hassan) ಜಿಲ್ಲೆಯ ವಿವಿಧೆಡೆ ಸಂಜೆ ವೇಳೆಗೆ ವರುಣ ಅಬ್ಬರಿಸಿದ್ದಾನೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಮನೆಗಳಿಗೆ ಹಾಕಿದ್ದ ಶೀಟ್‍ಗಳು ಹಾರಿ ಹೋಗಿವೆ. ಮಳೆಗೆ ಕಾಲೇಜು ಕಟ್ಟಡ, ಬಿಜಿಎಸ್ ಸಮುದಾಯಭವನ ಹಾಗೂ ವಾಣಿಜ್ಯ ಮಳಿಗೆಗಳಿಗೆ ಅಳವಡಿಸಿದ್ದ ಶೀಟ್‍ಗಳು ಹಾರಿ ಬಂದು ರಸ್ತೆಗೆ ಬಿದ್ದಿವೆ. ವಾಸದ ಮನೆಯ ಶೀಟ್‍ಗಳು ಸಹ ಹಾರಿ ಹೋಗಿದ್ದು, ಮನೆಯೊಳಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯುಂಟಾಗಿದೆ.

ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಎರಡು ಕಾರುಗಳು ಜಖಂಗೊಂಡಿವೆ. ಮರದ ಕೊಂಬೆ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ತಂತಿಗಳು ತುಂಡಾಗಿದ್ದು ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Rain

ಆಲೂರು ತಾಲೂಕಿನ ಕುಂದೂರು ಹೋಬಳಿಯ ಹುಲಕುಂದ ಎಸ್ಟೇಟ್‌ ಸಮೀಪ ದನ ಮೇಯಿಸಲು ತೆರಳಿದ್ದ ವೃದ್ಧೆ ಸಿಡಿಲಿಗೆ ಬಲಿಯಾಗಿದ್ದಾರೆ. ಮೃತರನ್ನು ಗ್ರಾಮದ ನೀಲಮ್ಮ (70) ಎಂದು ಗುರುತಿಸಲಾಗಿದೆ.

Rain 4

ಹಾವೇರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ
ಜಿಲ್ಲೆಯ (Haveri) ರಾಣೇಬೆನ್ನೂರು, ಬ್ಯಾಡಗಿ ಸೇರಿದಂತೆ ವಿವಿಧ ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಮಳೆಗೆ ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರಾಣೇಬೆನ್ನೂರು ನಗರದಲ್ಲಿ ಮಳೆಗೆ ರಸ್ತೆಗಳು ಕೆರೆಯಂತಾಗಿವೆ. ಕೆಲಕಾಲ ವಾಹನ ಸವಾರರು ಪರದಾಡಿದ್ದಾರೆ.

ಮಳೆಯಿಂದ ನಿಟ್ಟುಸಿರು ಬಿಟ್ಟ ಕರಾವಳಿ ಜನ
ಉಡುಪಿ (Udupi) ಜಿಲ್ಲೆಯ ಹಲವು ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹಗಲೆಲ್ಲ ವಿಪರೀತ ಬಿಸಿಲಿನಿಂದ ಕಂಗಾಲಾಗಿದ್ದ ನಾಗರಿಕರು ಮಳೆಯಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಅಥಣಿಯಲ್ಲಿ ಗಾಳಿ ಮಳೆ ಅಬ್ಬರ – ಧರೆಗುರುಳಿದ 40ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು

TAGGED:chamarajanagarChikkamagaluruhassanhaverirainudupiಉಡುಪಿಚಾಮರಾಜನಗರಚಿಕ್ಕಮಗಳೂರುಹಾವೇರಿಹಾಸನ
Share This Article
Facebook Whatsapp Whatsapp Telegram

Cinema news

TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories
Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories

You Might Also Like

Inspiration Success story Jayashree Koppala Zomato Roti business 2
Latest

ಇದು ಅವಳ ಕಥೆ – ಕಷ್ಟಗಳಿಗೆ ಗೋಲಿಮಾರೋ!

Public TV
By Public TV
2 minutes ago
Justice Swarana Kanta Sharma Arvind Kejriwal
Court

ರಾಜಕಾರಣಿಗಳ ಮಕ್ಕಳು ರಾಜಕಾರಣಿಯಾದರೆ, ಜಡ್ಜ್‌ ಮಕ್ಕಳು ವಕೀಲರಾಗುವುದರಲ್ಲಿ ತಪ್ಪೇನಿಲ್ಲ: ಕೇಜ್ರಿವಾಲ್‌ ವಿರುದ್ಧ ಜಡ್ಜ್‌ ಗರಂ

Public TV
By Public TV
43 minutes ago
Private Plane Flying 30 Feet Above Ground Crashes Into Tree In Chhattisgarh
Latest

ಮರಕ್ಕೆ ವಿಮಾನ ಡಿಕ್ಕಿಯಾಗಿ ಪತನ – ವರದಿಯನ್ನು ಅಲ್ಲಗಳೆದ ಛತ್ತೀಸ್‌ಗಢ ಸರ್ಕಾರ

Public TV
By Public TV
2 hours ago
Mushroom masala 3
Food

ಸಿಂಪಲ್ ಆಗಿ ಮಾಡಿ ಮಶ್ರೂಮ್ ಮಸಾಲಾ

Public TV
By Public TV
2 hours ago
Operation Octopus 2.0
Crime

ಸೈಬರ್ ವಂಚನೆ ವಿರುದ್ಧ ಆಪರೇಷನ್ ಆಕ್ಟೋಪಸ್ – 32 ಬ್ಯಾಂಕ್ ಉದ್ಯೋಗಿಗಳು ಸೇರಿ 52 ಮಂದಿ ಅರೆಸ್ಟ್‌

Public TV
By Public TV
2 hours ago
ಸಾಂದರ್ಭಿಕ ಚಿತ್ರ
Bengaluru City

CET 2026 – ಕೆಇಎಯಿಂದ ವಸ್ತ್ರಸಂಹಿತೆ ಜಾರಿ, ಉಲ್ಲಂಘಿಸಿದರೆ ಕಠಿಣ ಕ್ರಮ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?