– ಬಿಡದಿಯಲ್ಲಿ ಹೆಚ್‌ಡಿಕೆ, ಕುಟುಂಬದ ವಿರುದ್ಧ ಪೋಸ್ಟರ್; ಸಿಎಂ ವಿರುದ್ದ ವಾಗ್ದಾಳಿ
ಬೆಂಗಳೂರು: ರಾಜ್ಯದ ಸಿಎಂ ಆದಮೇಲಾದ್ರೂ ಬ್ಲೂಫಿಲ್ಮ್ ಮಾಡೋದು, ಪೋಸ್ಟರ್ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಹೋಗಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಲೇವಡಿ ಮಾಡಿದರು.
ಬಿಡದಿಯಲ್ಲಿ (Bidadi) ಕುಮಾರಸ್ವಾಮಿ ಮತ್ತು ಕುಟುಂಬದ ವಿರುದ್ದ ಪೋಸ್ಟರ್ ಅಂಟಿಸಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಇದನ್ನೂ ಓದಿ: ನಮಗೆ ತೊಂದರೆ ಕೊಡಲೆಂದೇ ಹೆಚ್‌ಡಿಕೆ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ: ಹೆಚ್.ಸಿ ಬಾಲಕೃಷ್ಣ

ರಾಜ್ಯದ ಸಿಎಂ ಆದಮೇಲಾದ್ರೂ ಬ್ಲೂಫಿಲ್ಮ್ ಮಾಡೋದು, ಪೋಸ್ಟರ್ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಡಿಕೆ ಶಿವಕುಮಾರ್‌ಗೆ ಹೋಗಿಲ್ಲ. ಪೋಸ್ಟರ್ ಅಂಟಿಸಿ ಪ್ರಚಾರ ಮಾಡೋದಾ? ನನ್ನದು ಬಿಡಿ, ನನ್ನ ಹೆಂಡತಿಯದ್ದೂ ಫೋಟೋ ಹಾಕಿದ್ದಾರೆ. 100 ಎಕರೆ ಅಂತ ಪೋಸ್ಟರ್ ಅಂತ ನಂದು ನಿಖಿಲ್ ಫೋಟೋ ಹಾಕಿದ್ದಾರೆ. 46 ಎಕರೆ 40 ವರ್ಷದ ಹಿಂದೆ ಕಷ್ಟ ಪಟ್ಟು ಖರೀದಿ ಮಾಡಿರೋ ಜಮೀನು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನು ಇದೆ. 100 ಎಕರೆ ಅಂತ ಪೋಸ್ಟರ್ ಹಾಕಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ತಗೊಂಡಿದ್ದಾರೆ. ಅದು ಖರೀದಿ ಮಾಡಿರೋದು. ಖರೀದಿ ಮಾಡಿರೋದನ್ನ ಯಾವನೋ ಹೆಸರಿನಲ್ಲಿ ಪೋಸ್ಟರ್ ಹಾಕಿ ಕೊಡಿ ಅಂದರೆ ಹೇಗೆ? ಅಂತ ಪ್ರಶ್ನಿಸಿದರು.
ಬೆನ್ನಗಾನಹಳ್ಳಿಯಲ್ಲಿ ಸತ್ತೋದವರ ಹೆಬ್ಬಟ್ಟು ತೋರಿಸಿ ಜಮೀನು ತಗೊಂಡ ವ್ಯಕ್ತಿ ಈಗ ಅವರ ಬೆಂಬಲಿಗರಿಗೆ ಹೇಳಿ ಪೋಸ್ಟರ್ ಹಾಕಿಸಿದ್ದಾರೆ. ಪೋಸ್ಟರ್ ಹಾಕಿದ್ರೆ ಜನ ನಂಬುತ್ತಾರಾ? ಸಿಎಂ ಆದಾಗಾದ್ರೂ ಒಂದು ಸ್ಟ್ಯಾಂಡರ್ಡ್ ಬೇಡವಾ? ಸ್ಟ್ಯಾಂಡರ್ಡ್ ಇಲ್ಲದೇ ಈ ರೀತಿಯ ನಡವಳಿಕೆ, ರಾಜ್ಯ ಯಾವ ರೀತಿ ಹೊಗುತ್ತೆ ಅನ್ನೋದನ್ನ ಯೋಚನೆ ಮಾಡಬೇಕು ಎಂದು ಕುಟುಕಿದರು. ಇದನ್ನೂ ಓದಿ: ಶಾಸಕರಿಗೆ ಆಮಿಷದ ಕರೆ, ಪ್ರತಿಯೊಬ್ಬರ ಚಲನವಲನ ಗಮನಿಸುತ್ತಿದ್ದೇವೆ – CLP ಸಭೆಯಲ್ಲಿ ಡಿಕೆಶಿ ಹೇಳಿದ್ದೇನು?

ಮುಂದುವರಿದು ಮಾತನಾಡಿ… ಇದು ಡಿಕೆಶಿ ವಿಕೃತ ಮನಸು. ಇವರು ಮೊದಲಿಂದ ಬಂದಿರೋದು ಇದರಿಂದಲೇ. ಈ ಖಯಾಲಿಯಲ್ಲಿ ಬಂದ ವ್ಯಕ್ತಿ ಸಿಎಂ ಆದ ಮೇಲೂ ಸಿಎಂ ಕುರ್ಚಿಗೆ ಗೌರವ ಬೇಡವಾ? ಪೋಸ್ಟರ್ ಹಾಕಿಕೊಂಡು ಅಪ ಪ್ರಚಾರ ಮಾಡ್ತಾ ಇದ್ದಾರೆ. ಅಶೋಕ್, ನಾರಾಯಣಸ್ವಾಮಿ, ವಿಜಯೇಂದ್ರ ವಿರುದ್ಧ ಪೋಸ್ಟರ್ ಹಾಕಿದ್ದಾರೆ. ತಪ್ಪು ಮಾಡಿದ್ರೆ ಸಿಎಂ ಆಗಿ ಆಕ್ಷನ್ ತಗೊಳೋಕೆ ಹೇಳಿ ಅಧಿಕಾರಿಗಳಿಗೆ. ಸುಮ್ಮನೆ ಯಾಕೆ ಪೋಸ್ಟರ್ ಹಾಕಿದ್ದೀರಾ? ಇಲ್ಲಿವರೆಗೂ ಕಾಂಗ್ರೆಸ್ ನ ಮಂತ್ರಿಗಳು ಶಾಸಕರದ್ದೇ ನಡೆದು ಹೋಯ್ತು. ವಿಧಾನಸಭೆ ಕಲಾಪದಲ್ಲಿ ನಡೆದು ಹೋಯ್ತು. ಮತ್ತೆ ಅವರನ್ನ ಬಾಯಿ ಮುಚ್ಚಿಸಿದ್ರು. ಸತ್ಯ ಹೇಳ್ತೀನಿ ಅಂತ ಅವರು ಬಾಯಿಯೇ ತೆಗೆಯಲಿಲ್ಲ. ಇನ್ನು ಮುಂದೆಯಾದ್ರು ನಿಲ್ಲುತ್ತೇನೋ ಅಂದುಕೊಂಡಿದ್ವಿ, ಆದ್ರೆ ಆ ಖಯಾಲಿ ಹೋಗಿಲ್ಲ ಎಂದು ಕಿಡಿ ಕಾರಿದರು.
ನನ್ನದು ತೆರದ ಪುಸ್ತಕ, ನನ್ನ ಎಲ್ಲಾ ವಿಷಯ ನನ್ನ ಕಾರ್ಯಕರ್ತರಿಗೆ, ಜನತೆಗೆ ಗೊತ್ತು. ಇಂತಹ ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ. ಈ ಪೋಸ್ಟರ್ ಗೆ ಹೆದರುವ ಪ್ರಶ್ನೆ ಇಲ್ಲ. ಜನರಿಗಾಗಿ, ರೈತರಿಗಾಗಿ ನಮ್ಮ ಪಕ್ಷದ ಹೋರಾಟ ಇದೆ. ನನ್ನ ಕಾಲದಲ್ಲಿ ಮಾಡೋಕೆ ಹೊರಟಿದ್ದು ನಿಜ. ನಾನು ಮಾಡಲೇಬೇಕು ಅಂತಿದ್ದರೆ 2ನೇ ಬಾರಿ ಸಿಎಂ ಆಗಿದ್ದಾಗ ಮಾಡ್ತಾ ಇದ್ದೆ. ಯಾಕೆ ನಾನು ಎರಡನೇ ಬಾರಿ ಸಿಎಂ ಆದಾಗ ಮಾಡಲಿಲ್ಲ? ನನ್ನ ಹೆಸರು ಹೇಳಿಕೊಂಡು ದುಡ್ಡು ಹೊಡೆಯೋಕೆ, ಭೂಮಿ ಲಪಟಾಯಿಸೋಕೆ ಹೊರಟಿದ್ದರು. ಉದ್ದೇಶ ಒಳ್ಳೆಯದ್ರಾದ್ರೆ ಬೆಂಬಲ ಕೊಡೋಣ. ಯಾವುದೇ ಕೆಲಸ ಮಾಡಬೇಕಾದ್ರು ದುಡ್ಡು ನೋಡ್ತಾರೆ. ಇಂತಹ ವ್ಯಕ್ತಿ ಬಗ್ಗೆ ನಾನು ಎಷ್ಟು ಸಾರಿ ಮಾತಾಡಲಿ? ಎಂದು ಕೆಂಡಾಮಂಡಲವಾದರು. ಇದನ್ನೂ ಓದಿ: ಸರ್ಕಾರಿ ನೌಕರರ ಕುಟುಂಬಕ್ಕೆ ‘ಗೃಹಲಕ್ಷ್ಮಿ’ ಕಟ್?
