– ದುರಂತಕ್ಕೆ ಜನಸಂದಣಿಯೇ ಮುಖ್ಯ ಕಾರಣ; ವರದಿಯಲ್ಲೇನಿದೆ?
ಲಕ್ನೋ: ಉತ್ತರ ಪ್ರದೇಶದಲ್ಲಿ ‘ಸತ್ಸಂಗ’ದಲ್ಲಿ ಕಾಲ್ತುಳಿತಕ್ಕೆ (Hathras Stampede) 121 ಜೀವಗಳು ಬಲಿಯಾಗಿದ್ದಕ್ಕೆ ಪ್ರಮುಖ ಕಾರಣಗಳ ವಿವರವನ್ನು ಉಲ್ಲೇಖಿಸಿದ ವರದಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಎಸ್‌ಐಟಿ ತನ್ನ ವರದಿ ಸಲ್ಲಿಸಿದೆ.
‘ಸತ್ಸಂಗ’ದಲ್ಲಿ ಕಾಲ್ತುಳಿತಕ್ಕೆ ಜನದಟ್ಟಣೆ ಮುಖ್ಯ ಕಾರಣ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಹತ್ರಾಸ್ ದುರಂತ- ಪರಿಹಾರದ ಮೊತ್ತ ಹೆಚ್ಚಿಸಲು ರಾಹುಲ್ ಗಾಂಧಿ ಒತ್ತಾಯ
‘ಸತ್ಸಂಗ’ ಆಯೋಜಿಸುವ ಸಮಿತಿಯು ಅನುಮತಿಸಿದ ಸಂಖ್ಯೆಗಿಂತ ಹೆಚ್ಚು ಜನರನ್ನು ಕರೆಸಿರುವುದು, ಸಮರ್ಪಕ ವ್ಯವಸ್ಥೆ ಮಾಡದಿರುವುದು ಹಾಗೂ ಸ್ಥಳ ಪರಿಶೀಲನೆ ನಡೆಸದಿರುವುದು ಘಟನೆಗೆ ಹೊಣೆಗಾರಿಕೆಯಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಗ್ರಾ) ಅನುಪಮ್ ಕುಲಶ್ರೇಷ್ಠ ಮತ್ತು ಅಲಿಗಢ ವಿಭಾಗೀಯ ಆಯುಕ್ತ ಚೈತ್ರಾ ವಿ ಅವರು ಸಿದ್ಧಪಡಿಸಿದ ವರದಿಯಲ್ಲಿ 128 ಸಾಕ್ಷಿಗಳ ಹೇಳಿಕೆಗಳಿವೆ. ಇದರಲ್ಲಿ ‘ಭೋಲೆ ಬಾಬಾ’ ಎಂದು ಕರೆಯಲ್ಪಡುವ ನಾರಾಯಣ ಸಕರ್ ಹರಿ ಅವರ ಸತ್ಸಂಗದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಸೇರಿದಂತೆ 128 ಸಾಕ್ಷಿಗಳಿವೆ. ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಕೆಯಾಗಿದ್ದು, ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಹತ್ರಾಸ್ ದುರಂತ- ಪರಿಹಾರದ ಮೊತ್ತ ಹೆಚ್ಚಿಸಿದ ಸಿಎಂ ಯೋಗಿ ಆದಿತ್ಯನಾಥ್
‘ಸತ್ಸಂಗ’ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲಿ, ಧಾರ್ಮಿಕ ಕಾರ್ಯಕ್ರಮಕ್ಕೆ ಸಂಘಟಕರು 80,000 ಜನರ ಸಭೆಗೆ ಅನುಮತಿ ಕೋರಿದ್ದರು. ಆದರೆ 2.5 ಲಕ್ಷ ಜನರು ಸೇರಿದ್ದರು ಎಂದು ಉಲ್ಲೇಖಿಸಲಾಗಿದೆ. ಪ್ರಕರಣ ಸಂಬಂಧ ಜುಲೈ 2ರ ಕಾರ್ಯಕ್ರಮದ ಪ್ರಮುಖ ಸಂಘಟಕ ದೇವಪ್ರಕಾಶ್ ಮಧುಕರ್ ಸೇರಿದಂತೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದೆ.
ಸ್ವಯಂಘೋಷಿತ ದೇವಮಾನವ ನಾರಾಯಣ ಸಕರ್ ಹರಿ ಅವರನ್ನು ಎಫ್‌ಐಆರ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ. ಆದರೆ ಕಾಲ್ತುಳಿತ ಸಂಭವಿಸಿದಾಗಿನಿಂದ ಪರಾರಿಯಾಗಿದ್ದಾರೆ. ತನಿಖಾಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಬೋಧಕ ಸಿದ್ಧ ಎಂದು ಅವರ ವಕೀಲ ಎಪಿ ಸಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತಕ್ಕೆ 116 ಮಂದಿ ಬಲಿ – ಅಂದು ಹೆಡ್ ಕಾನ್‌ಸ್ಟೇಬಲ್ ಈಗ ಸ್ವಯಂಘೋಷಿತ ಗುರು!