ಲಕ್ನೋ: ಹತ್ರಾಸ್ ಸತ್ಸಂಗ (Satsang) ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ (Stampede) 116 ಮಂದಿ ಬಲಿಯಾಗಿದ್ದಾರೆ. ಈ ಸತ್ಸಂಗ ಕಾರ್ಯಕ್ರಮದ ಕೇಂದ್ರಬಿಂದು ಆಗಿರುವ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ (Bhole Baba aka Narayan Saakar Hari) ಅವರು ಈ ಹಿಂದೆ ಗುಪ್ತಚರ ಬ್ಯೂರೋದಲ್ಲಿ (Intelligence Bureau) ಕೆಲಸ ಮಾಡಿದ್ದರು.
ಸರ್ಕಾರಿ ಸೇವೆಯಲ್ಲಿದ್ದಾಗ ಆಧ್ಯಾತ್ಮದತ್ತ ಒಲವು ಹೊಂದಿದ್ದ ಅವರು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಲು ಹುದ್ದೆಗೆ ರಾಜೀನಾಮೆ ನೀಡಿದ್ದರು.
Advertisement
ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಹದ್ದೂರ್ ನಗರಿ ಗ್ರಾಮದ ರೈತ ನನ್ನೆ ಲಾಲ್ ಮತ್ತು ಕಟೋರಿ ದೇವಿಯವರ ಮಗನಾಗಿ ಜನಿಸಿದ್ದರು. ಗುರು ಭೋಲೆ ಬಾಬಾ ಅವರ ಮೂಲ ಹೆಸರು ಸೂರಾಜ್ ಪಾಲ್. ಇವರಿಗೆ ಇಬ್ಬರು ಸಹೋದರರಿದ್ದು ಒಬ್ಬರು ಮೃತಪಟ್ಟಿದ್ದಾರೆ.
Advertisement
Advertisement
Advertisement
ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಕಾಲೇಜ್ ಶಿಕ್ಷಣ ಓದಿ ಉತ್ತರ ಪ್ರದೇಶ ಪೊಲೀಸ್‌ನ ಸ್ಥಳೀಯ ಗುಪ್ತಚರ ಘಟಕದಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದರು. ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಇವರ ಮನಸ್ಸು ಆಧ್ಯಾತ್ಮಿಕತೆಯ ಕಡೆಗೆ ತಿರುಗಿತು. 1999 ರಲ್ಲಿ ಪೊಲೀಸ್ ಕೆಲಸವನ್ನು ತೊರೆದ ಬಳಿಕ ತನ್ನ ಹೆಸರನ್ನು ನಾರಾಯಣ್ ಸಾಕರ್ ಹರಿ ಎಂದು ಬದಲಾಯಿಸಿ ಧಾರ್ಮಿಕ ಉಪನ್ಯಾಸ ನೀಡಲು ಆರಂಭಿಸಿದರು. ಇದನ್ನೂ ಓದಿ: ಹತ್ರಾಸ್ ದುರಂತ- ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ನೆರವು
ಇವರು ಕೇಸರಿ ಬಟ್ಟೆಯನ್ನು ಧರಿಸುತ್ತಿರಲಿಲ್ಲ. ಬಿಳಿ ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸುತ್ತಿದ್ದರು. ತನಗೆ ಸಿಕ್ಕಿದ ದೇಣಿಗೆಯನ್ನು ನಾನು ಇಟ್ಟುಕೊಳ್ಳುವುದಿಲ್ಲ. ಅದನ್ನು ಭಕ್ತರಿಗೆ ನೀಡುತ್ತೇನೆಂದು ಭೋಲೆ ಬಾಬಾ ಉಪದೇಶದಲ್ಲಿ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಉಪನ್ಯಾಸ ನೀಡುವಾಗ ಹತ್ತಿರದಲ್ಲೇ ಪತ್ನಿ ಸಹ ಇರುತ್ತಾರೆ.
ನಾನು ಹರಿ(ವಿಷ್ಣು) ಭಕ್ತ ಎಂದು ಹೇಳಿಕೊಳ್ಳುವ ಇವರಿಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ. ಕಾಲ್ತುಳಿತವಾದ ನಂತರ ಭೋಲೆ ಬಾಬಾ ನಾಪತ್ತೆಯಾಗಿದ್ದು ಅವರ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.
ಮಂಗಳವಾರ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತಕ್ಕೆ 116 ಮಂದಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮ ನಡೆದ ಸ್ಥಳ ತುಂಬಾ ಚಿಕ್ಕದಾಗಿದ್ದು ಅಲ್ಲಿ ನೆರೆದಿದ್ದ ಜನಸಮೂಹಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ತನಿಖೆಗೆ ಸಮಿತಿಯನ್ನು ರಚಿಸಲಾಗಿದ್ದು, ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಹೇಗಾಯ್ತು?
ಅಯೋಜಕರು 80 ಸಾವಿರ ಮಂದಿ ನಡೆಸುವ ಕಾರ್ಯಕ್ರಮ ಎಂದು ಹೇಳಿದ್ದರು. ಆದರೆ 1 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ ನಿರ್ಗಮನ ಜಾಗ ಬಹಳ ಕಿರಿದಾಗಿತ್ತು. ಜನ ಮರಳುತ್ತಿದ್ದಾಗ ಸಣ್ಣ ಮೋರಿ ಬಳಿ ಕಾಲ್ತುಳಿತ ಸಂಭವಿಸಿದೆ.