– ಥಳಿಸಲು ಬಂದ ವಿದ್ಯಾರ್ಥಿನಿಯರ ಎದುರು ತಲೆ ಚಚ್ಚಿಕೊಂಡು ಹೈಡ್ರಾಮಾ
ಮಂಡ್ಯ: ವಿದ್ಯಾರ್ಥಿನಿಯರಿಗೆ ಮೊಬೈಲ್ ಮೂಲಕ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಧರ್ಮದೇಟು ನೀಡಿ, ತಕ್ಕ ಪಾಠ ಕಲಿಸಿರುವ ಘಟನೆ ನಾಗಮಂಗಲ-ಮಂಡ್ಯ (mandya) ರಸ್ತೆಯ ಪದವಿ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನ ಉಪನ್ಯಾಸಕ ಗಂಗೂ ಎಂಬಾತ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಆರೋಪಿ ಉಪನ್ಯಾಸಕ ಗಂಗೂ, ಕಾಲೇಜಿನ ವಿದ್ಯಾರ್ಥಿನಿಯರ ಮೊಬೈಲ್ ನಂಬರ್ಗಳನ್ನು ಪಡೆದುಕೊಂಡು ಅವರಿಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ಚಾಟಿಂಗ್ನಲ್ಲಿ ʼಐ ಲವ್ ಯೂ, ಐ ಲೈಕ್ ಯೂʼ ಎಂದೆಲ್ಲಾ ಬರೆಯುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಉಪನ್ಯಾಸಕನ ಕಾಟ ತಾಳಲಾರದೆ ಬೇಸತ್ತ ವಿದ್ಯಾರ್ಥಿನಿಯರು, ಕೊನೆಗೆ ತಾವೇ ಖುದ್ದು ಪಾಠ ಕಲಿಸಿದ್ದಾರೆ. ಉಪನ್ಯಾಸಕನ ಅಸಭ್ಯ ವರ್ತನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ನೇರವಾಗಿ ಕಾಲೇಜಿನ ಸ್ಟಾಫ್ ರೂಂಗೆ ನುಗ್ಗಿ ಉಪನ್ಯಾಸಕನ ಗ್ರಹಚಾರ ಬಿಡಿಸಿದ್ದಾರೆ. ಈ ವೇಳೆ ಆಕ್ರೋಶಿತ ವಿದ್ಯಾರ್ಥಿನಿಯರು ಆತನಿಗೆ ಧರ್ಮದೇಟು ನೀಡಿದ್ದು, ತನ್ನ ತಪ್ಪಿಗೆ ಸಿಕ್ಕಿಬಿದ್ದ ಉಪನ್ಯಾಸಕ ಕೈ ಮುಗಿದು ಕ್ಷಮೆ ಯಾಚಿಸಿದ್ದಾನೆ.ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ 3ನೇ ಬಾರಿಗೆ ಅಧಿಕಾರಕ್ಕೆ ಬಂದ್ರೆ UCC ಜಾರಿ: ಅಮಿತ್ ಶಾ ಘೋಷಣೆ
ಕೊನೆಗೆ ತಪ್ಪಿಸಿಕೊಳ್ಳಲು ಪರದಾಡಿದ ಆತ, ಬೀರು ಸಂದಿಯಲ್ಲಿ ಅವಿತುಕೊಂಡಿದ್ದಾನೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ವಿದ್ಯಾರ್ಥಿನಿಯರ ಈ ಧೈರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇಂತಹ ಕಾಮುಕ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.ಇದನ್ನೂ ಓದಿ: ಜೋಶಿಮಠ ಬಳಿ ಹೆಲಿಕಾಪ್ಟರ್ ಪತನ – ಅವಘಡದಲ್ಲಿ ತುಮಕೂರಿನ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ದುರ್ಮರಣ
