ಬಾಲಿವುಡ್‌ನ ಬಹುನಿರೀಕ್ಷಿತ ಥ್ರಿಲ್ಲರ್ ಸಿನಿಮಾ ‘ಹೈವಾನ್’ (haivaan) ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಟೀಸರ್ ಬಳಿಕ ಭಾರೀ ಕುತೂಹಲ ಮೂಡಿಸಿದ್ದ ಸಿನಿಮಾದ ಟ್ರೇಲರ್ ಇದೀಗ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ನಡುವಿನ ರೋಚಕ ಮುಖಾಮುಖಿ ಟ್ರೇಲರ್‌ನ ಪ್ರಮುಖ ಹೈಲೈಟ್ ಆಗಿದೆ.
ಡಾರ್ಕ್, ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ದೃಶ್ಯಗಳಿಂದ ಕೂಡಿರುವ ಟ್ರೇಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಿರ್ದೇಶಕ ಪ್ರಿಯದರ್ಶನ್ ಅವರ ನಿರೂಪಣೆ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ವಾತಾವರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
ಸಿನಿಮಾದಲ್ಲಿ ಅಕ್ಷಯ್ ಕುಮಾರ್ ವಿಭಿನ್ನ ಹಾಗೂ ಕ್ರೂರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎದುರಾಗಿ ಸೈಫ್ ಅಲಿ ಖಾನ್ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ನಡುವಿನ ಈ ಪೈಪೋಟಿ ಸಿನಿಮಾದಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ. ಇದನ್ನೂ ಓದಿ: ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ಆಯ್ಕೆ – ನಟಿ ಕೃತಿ ಸನೋನ್‌ಗೆ ರಾಹುಲ್ ಗಾಂಧಿ ಸಾಥ್
ಇನ್ನು ಬೊಮನ್ ಇರಾನಿ, ಸಯಾಮಿ ಖೇರ್, ಶ್ರಿಯಾ ಪಿಲ್ಗಾಂವ್ಕರ್ ಹಾಗೂ ಶಾರಿಬ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬರ ಪಾತ್ರವೂ ಕಥೆಗೆ ಹೊಸ ತಿರುವು ನೀಡುವಂತೆ ಕಾಣುತ್ತಿದೆ.
‘ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ನಡುವಿನ ಈ ಕದನದಲ್ಲಿ ಗೆಲ್ಲೋದು ಯಾರು?’ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವ ಮೂಲಕ ಟ್ರೇಲರ್ ಸಸ್ಪೆನ್ಸ್ ಉಳಿಸಿಕೊಂಡಿದೆ. ಇದನ್ನೂ ಓದಿ: ವಿರೋಧದ ಬೆನ್ನಲ್ಲೇ ಕೃತಿ ಸನೋನ್ ರಕ್ಷಾಬಂಧನ ಜಾಹೀರಾತು ಹಿಂಪಡೆದ ಜಿವಾ
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಥೆಸ್ಪಿಯನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಶೈಲಜಾ ದೇಸಾಯಿ ಫೆನ್ ಚಿತ್ರವನ್ನು ನಿರ್ಮಿಸಿದ್ದಾರೆ. ‘ಹೈವಾನ್’ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ರೋಚಕ ಥ್ರಿಲ್ಲರ್ ಅನುಭವ ನೀಡಲು ಸಜ್ಜಾಗಿದೆ.
