Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 2 ವರ್ಷದ ಬಳಿಕ ವಿಧಾನಸೌಧಕ್ಕೆ ಬಂದ ಹೆಚ್‌ಡಿಕೆ – ಮಂಡ್ಯದಲ್ಲಿ ARAI ಕೇಂದ್ರದ ಜೊತೆ ಕೈಗಾರಿಕಾ ಹಬ್‌ ಸ್ಥಾಪನೆಗೆ ಚಿಂತನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Automobile | 2 ವರ್ಷದ ಬಳಿಕ ವಿಧಾನಸೌಧಕ್ಕೆ ಬಂದ ಹೆಚ್‌ಡಿಕೆ – ಮಂಡ್ಯದಲ್ಲಿ ARAI ಕೇಂದ್ರದ ಜೊತೆ ಕೈಗಾರಿಕಾ ಹಬ್‌ ಸ್ಥಾಪನೆಗೆ ಚಿಂತನೆ

Automobile

2 ವರ್ಷದ ಬಳಿಕ ವಿಧಾನಸೌಧಕ್ಕೆ ಬಂದ ಹೆಚ್‌ಡಿಕೆ – ಮಂಡ್ಯದಲ್ಲಿ ARAI ಕೇಂದ್ರದ ಜೊತೆ ಕೈಗಾರಿಕಾ ಹಬ್‌ ಸ್ಥಾಪನೆಗೆ ಚಿಂತನೆ

Public TV
Last updated: April 13, 2026 7:55 pm
Public TV
Share
3 Min Read
hd kumaraswamy mb patil 1
SHARE

ಬೆಂಗಳೂರು: ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಇಂದು ವಿಧಾನಸೌಧದಲ್ಲಿ(Vidhana Soudha) ಮಹತ್ವದ ಸಭೆ ನಡೆಯಿತು. 2 ವರ್ಷಗಳ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswmya) ವಿಧಾನಸೌಧಕ್ಕೆ ಪ್ರವೇಶಿಸಿದ್ದು ವಿಶೇಷವಾಗಿತ್ತು. ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆ ಬಳಿಕ ಸಚಿವ ಎಂಬಿ ಪಾಟೀಲ್ ಮಾತನಾಡಿ ಮಂಡ್ಯದಲ್ಲಿ (Mandya) ಕೈಗಾರಿಕೆಗಾಗಿ 100 ಎಕರೆ ಜಾಗ ತೋರಿಸಿದ್ದೇವೆ. ಎಆರ್‌ಐಗೆ 100 ಎಕರೆ ರೆಡಿ ಇದೆ. ಸುತ್ತಮುತ್ತಲು ಕೈಗಾರಿಕಾ ಅಭಿವೃದ್ಧಿಗೆ 500 ಎಕರೆ ಕೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಆಟೊಮೋಟೋವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ(ARAI)ಕೇಂದ್ರ ಸ್ಥಾಪನೆಗೆ ಆಸಕ್ತಿ ತೋರಿದ್ದು ಅದಕ್ಕೆ ನಿಗದಿಪಡಿಸಿರುವ 100 ಎಕರೆಗಿಂತ ಪರ್ಯಾಯವಾಗಿ ಕನಿಷ್ಠ 500 ಎಕರೆಯಲ್ಲಿ ಪೂರಕ ಕೈಗಾರಿಕಾಭಿವೃದ್ಧಿ ಪಾರ್ಕ್ ಸ್ಥಾಪನೆ ಬಗ್ಗೆ   ಸೂಕ್ತ ಸ್ಥಳ ಹುಡುಕಲು ಅಧಿಕಾರಿಗಳಿಗೆ ಸೂಚಿಸಿದರು.

ಬರೇ 100 ಎಕರೆಯಲ್ಲಿ ಎ ಆರ್ ಎ ಐ ಕೇಂದ್ರ ಸ್ಥಾಪಿಸಿದರೆ ಅದು ಕೇವಲ ಒಂದು ಕೇಂದ್ರವಾಗಿ ಇರುತ್ತದೆ. ಅದರ ಬದಲು ಪೂರಕ ಆಟೊಮೊಬೈಲ್ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗುವ ಹಾಗೆ ಕನಿಷ್ಠ 500 ಎಕರೆಯಲ್ಲಿ ಆ ಕೇಂದ್ರವನ್ನೂ ಸೇರಿಸಿಕೊಂಡು ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವುದು ಸೂಕ್ತ. ಇದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಒಪ್ಪಿದ್ದಾರೆ. ಈ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಇರುವ ಸರಕಾರಿ/ಖಾಸಗಿ ಜಮೀನನ್ನು ಗುರುತಿಸುವಂತೆ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಪಾಟೀಲ್‌ ತಿಳಿಸಿದ್ದಾರೆ.

hd kumaraswamy mb patil 2

ಕುಮಾರಸ್ವಾಮಿಯವರು ವಾಹನಗಳ ಪರೀಕ್ಷೆ ನಡೆಸಿ, ಪ್ರಮಾಣಪತ್ರ ಕೊಡುವ ಎ.ಆರ್.ಎ.ಐ ಕೇಂದ್ರ ಸ್ಥಾಪನೆಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಕೇಳಿದ್ದರು. ನಾವು ಬಸರಾಳು ಬಳಿ 105 ಎಕರೆ ತೋರಿಸಿದ್ದೇವೆ. ಇದು ಬಹುಮಟ್ಟಿಗೆ ಅವರಿಗೆ ಒಪ್ಪಿಗೆಯಾಗಿದೆ. ಆದರೆ ಈಗ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಚಿಂತನೆ ಬಂದಿದ್ದು ಪರ್ಯಾಯ ಜಾಗಕ್ಕೆ ಸಲಹೆ ನೀಡಲಾಗಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಬೆಳ್ಳೂರಿನ ಬಳಿ 2021ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 425 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಜಾಗವನ್ನೂ ನೋಡುವಂತೆ ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು MLC ನಜೀರ್ ಅಹ್ಮದ್‌ಗೆ ಡೆಡ್‌ಲೈನ್‌

ಇದಲ್ಲದೆ ಮಂಡ್ಯ ಸಮೀಪದ ತೂಬಿನಕೆರೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪಾಂಡವಪುರ ಹಾಗೂ ಮಂಡ್ಯ ತಾಲ್ಲೂಕುಗಳ ಅಂಚಿನಲ್ಲಿಯೂ ಕೈಗಾರಿಕಾ ಹಬ್ ಸ್ಥಾಪಿಸಬಹುದು ಎಂದು ಸಭೆಯಲ್ಲಿ ಹಾಜರಿದ್ದ ಕೆಲವರು ಸಲಹೆ ನೀಡಿದರು.

ಅಧಿಕಾರಿಗಳ ವರದಿ ಬಳಿಕ ಮತ್ತೊಂದು ಸುತ್ತು ಸಭೆ ಸೇರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. .ಕೈಗಾರಿಕಾ ಹಬ್ ಬಂದರೆ ಬಂಡವಾಳ ಹೂಡಿಕೆ, ಆರ್ಥಿಕ ವಹಿವಾಟು ಮತ್ತು ಉದ್ಯೋಗ ಸೃಷ್ಟಿ ಎರಡೂ ಸಾಧ್ಯವಾಗುತ್ತದೆ ಎಂದು ಪಾಟೀಲ ವಿವರಿಸಿದ್ದಾರೆ.

hd kumaraswamy mb patil 3

ಇದಲ್ಲದೆ ಮಂಡ್ಯ ಜಿಲ್ಲೆಯಲ್ಲೇ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಆ್ಯಂಡ್ರ್ಯೂ ಲೂಯಿ ಕಂಪನಿ ಲಿಮಿಟೆಡ್ ಸಂಸ್ಥೆಗೆ (ಎ.ಎಲ್.ಸಿ.ಎಲ್) ಕೂಡ 25-50 ಎಕರೆ ಭೂಮಿ ಬೇಕು ಎಂದು ಗಮನಕ್ಕೆ ತಂದಿದ್ದಾರೆ. ಈ ಕಂಪನಿಯು ಕೈಗಾರಿಕೆಗಳಿಗೆ ಬೇಕಾದ ಎಲೆಕ್ಟ್ರಿಕ್ ಸಾಧನಗಳು, ಬೃಹತ್ ಫ್ಯಾನುಗಳು, ವಿದ್ಯುತ್ ಪರಿವರ್ತಕ ಮುಂತಾದವನ್ನು ತಯಾರಿಸುತ್ತದೆ. ಅದಕ್ಕೆ ಅಗತ್ಯ ಭೂಮಿಯನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಉದ್ಯಮಗಳು ಬರಬೇಕು. ಇದಕ್ಕೆ ಸೂಕ್ತ ನೀತಿ ಮತ್ತು ಕಾರ್ಯಪರಿಸರ ನಮ್ಮಲ್ಲಿದೆ. ಹೊಸ ಕೈಗಾರಿಕಾ ನೀತಿಯಲ್ಲಿ ಇವುಗಳಿಗೆ ಒತ್ತು ಕೊಡಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಭೆಯಲ್ಲಿ ಮಂಡ್ಯ ಶಾಸಕ ರವಿ ಗಣಿಗ, ಶಾಸಕ ಎಚ್.ಡಿ.ರೇವಣ್ಣ, ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು‌ ಮತ್ತು ಡಿ ಸಿ ತಮ್ಮಣ್ಣ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಕೆಐಎಡಿಬಿ ಸಿಇಒ ಡಾ.ಮಹೇಶ, ಎ.ಆರ್.ಎ.ಐ ಸಂಘಟನೆಯ ನಿರ್ದೇಶಕ ಡಾ.ರೆಜಿ ಮಥಾಯ್ ಮತ್ತು ಹಿರಿಯ ಉಪನಿರ್ದೇಶಕ ಡಾ. ಶಾಮಸುಂದರ ಮುಂತಾದವರು ಸಭೆಯಲ್ಲಿ ಇದ್ದರು.

TAGGED:hd kumaraswamymandyaMB Patilಎಂಬಿ ಪಾಟೀಲ್ಮಂಡ್ಯಹೆಚ್‍ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Sara Govindu
ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌
Bengaluru City Crime Districts Karnataka Latest Sandalwood Top Stories
Rishab Shetty
ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ – `ಕಾಂತಾರ’ ಮತ್ತೊಂದು ಅಧ್ಯಾಯದ ಬಗ್ಗೆ ಚರ್ಚಿಸಿದ್ರಾ ಶೆಟ್ರು?
Cinema Latest Main Post National Sandalwood
chetan 13 2
ಡಾ.ರಾಜ್ ಸಮಾಧಿಯ ಪೋಸ್ಟ್ ಪ್ರಶ್ನಿಸಿ ಮನೆಗೆ ಮುತ್ತಿಗೆ ಹಾಕಿದ್ದವರ ವಿರುದ್ಧ ಚೇತನ್ ದೂರು
Bengaluru City Cinema Districts Karnataka Latest Sandalwood Top Stories
Udupi Kapu Marigudi Temple Actor Shashi Kumar
ಕಾಪು ದೇವಸ್ಥಾನಕ್ಕೆ ನಟ ಶಶಿಕುಮಾರ್ ಭೇಟಿ
Cinema Districts Karnataka Latest Top Stories Udupi

You Might Also Like

csk
Cricket

ಚೆನ್ನೈಗೆ 8 ವಿಕೆಟ್‌ಗಳ ಭರ್ಜರಿ ಜಯ – ಮುಂಬೈಗೆ ಪ್ಲೇ ಆಫ್‌ ಹಾದಿ ಬಹುತೇಕ ಬಂದ್‌!

Public TV
By Public TV
8 hours ago
Bengaluru Cauvery Water Bandh
Districts

ಮಂಡ್ಯದ 289 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ – ಮುಂಜಾಗ್ರತೆ ವಹಿಸಲು ಚಲುವರಾಯಸ್ವಾಮಿ ಸೂಚನೆ

Public TV
By Public TV
9 hours ago
EVM
Latest

ಬಂಗಾಳದಲ್ಲಿ ಬಿಜೆಪಿ ಚಿಹ್ನೆಗೆ ಟೇಪ್‌ – ಫಾಲ್ಟಾ ಕ್ಷೇತ್ರದ 285 ಬೂತ್‌ಗಳಲ್ಲಿ ಮೇ 21 ರಂದು ಮರು ಮತದಾನ

Public TV
By Public TV
9 hours ago
ಸಾಂದರ್ಭಿಕ ಚಿತ್ರ
Latest

ಜುಲೈವರೆಗಿನ ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಸಂಖ್ಯೆ ಕಡಿತಗೊಳಿಸಿದ ಏರ್ ಇಂಡಿಯಾ

Public TV
By Public TV
10 hours ago
Bengaluru Kempegowda International Airport 3
Bengaluru City

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 18.62 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

Public TV
By Public TV
10 hours ago
Gabion wall
Districts

ಕಾವೇರಿ ನದಿಯ ಅಂಚಿನಲ್ಲಿ ವಿದೇಶಿ ತಂತ್ರಜ್ಞಾನದ ಗೇಬಿಯನ್ ವಾಲ್ ನಿರ್ಮಾಣ

Public TV
By Public TV
11 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?