ಬೆಂಗಳೂರು: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಹಣವನ್ನು ಹಾಕಲು ಯಜಮಾನತಿ ಇಲ್ಲದಿದ್ದರೆ ಕುಟುಂಬದ ಎರಡನೇ ಹಿರಿಯ ಮಹಿಳೆಗೆ ಹಣ ಹಾಕಲು ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಫಲಾಭವಿಗಳಿಗೆ ಹಣ ಹಾಕುವ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫಲಾನುಭವಿಗಳಿಗೆ ಹಣ ಹಾಕಲು ಕುಟುಂಬದಲ್ಲಿ ಯಜಮಾನತಿ ಇಲ್ಲದಿದ್ದರೆ ಕುಟುಂಬದಲ್ಲಿ ನಂತರದ ಹಿರಿಯ ಮಹಿಳೆಯ ಖಾತೆಗೆ ಹಣ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ- CBIಗೆ ವಹಿಸಿದ್ದ ಕೇಸ್ ಹಿಂಪಡೆಯಲು ಸಂಪುಟ ಸಮ್ಮತಿ
ಡಿ.ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಯ ಹಿಂದಿನ ಸರ್ಕಾರದ ಆದೇಶ ಹಿಂಪಡೆಯುವ ನಿರ್ಧಾರದ ವಿಚಾರವಾಗಿ, ನಾವು ಅವರನ್ನು ರಕ್ಷಿಸುವ ಕೆಲಸ ಮಾಡಿಲ್ಲ. ಹಿಂದಿನ ಸರ್ಕಾರ ಕಾನೂನು ವಿರುದ್ಧ ನಡೆದುಕೊಂಡಿದೆ. ಮೌಖಿಕ ಆದೇಶಕ್ಕೆ ಸಿಬಿಐ ಶಿಫಾರಸು ಮಾಡಿದ್ದು ಸರಿಯಲ್ಲ. ಕಾನೂನು ಪಾಲನೆ ಅಂದಿನ ಸರ್ಕಾರ ಮಾಡಿಲ್ಲ. ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ಮುಂದುವರಿದಿದ್ದೇವೆ ಎಂದಿದ್ದಾರೆ.
ಆರು ತಿಂಗಳವರೆಗೂ ಕಾದು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ನಾವು ಡಿಕೆಶಿ ಅವರನ್ನು ರಕ್ಷಣೆ ಮಾಡಲು ತೀರ್ಮಾನ ಮಾಡಿಲ್ಲ. ಯಾರ ರಕ್ಷಣೆ ಮಾಡುವ ಕೆಲಸವನ್ನೂ ಮಾಡಿಲ್ಲ. ಅಂದು ಮಾಡಿದ ತಪ್ಪು ಸರಿ ಮಾಡುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಡಿ.6ರವರೆಗೂ ಮಾತನಾಡದಂತೆ ಸೂಚಿಸಿದೆ: ಸೋಮಣ್ಣ