ರಾಯಚೂರು: ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತದೆ.

ರಾಯರ ಮೂಲ ಬೃಂದಾವನಕ್ಕೆ ಶ್ರೀಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಅಲಂಕಾರ, ಬಂಗಾರದ ಕವಚ ಅಳವಡಿಕೆ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಇದನ್ನೂ ಓದಿ: ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು – ಜೆಡಿಎಸ್ ಆಗ್ರಹ

ಆಷಾಢ ಶುದ್ದ ಪೂರ್ಣಿಮೆ ಹಿನ್ನೆಲೆ ರಾಯರು ತಪಸ್ಸು ಮಾಡಿದ್ದ ತುಳಸಿ ವನದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಿ, ಚಿನ್ನದ ಪಲ್ಲಕ್ಕಿಯಲ್ಲಿ ಮೃತ್ತಿಕೆ ಮೆರವಣಿಗೆ ಮಾಡಲಾಯಿತು. ಬಳಿಕ ಪೂಜೆ ನೆರವೇರಿಸಿ ಮೃತ್ತಿಕೆಯನ್ನ ರಾಯರ ಮೂಲ ಬೃಂದಾವನದ ಮೇಲೆ ಇರಿಸಲಾಯಿತು. ಒಂದು ವರ್ಷದವರೆಗೆ ಮೃತ್ತಿಕೆಗೆ ನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಂತರ ಯಾವುದಾದರೂ ಸ್ಥಳದಲ್ಲಿ ಬೃಂದಾವನ ಸ್ಥಾಪಿಸಲು ಇಲ್ಲಿನ ಮಣ್ಣನ್ನೇ ಬಳಸಲಾಗುತ್ತದೆ.
