ಹುಬ್ಬಳ್ಳಿ: ಒಂದೆಡೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ. ಮತ್ತೊಂದೆಡೆ ಸರ್ಕಾರಿ ಬಸ್‌ಗಳ ನಿರ್ವಹಣೆಯೇ ಪ್ರಶ್ನಾರ್ಥಕವಾಗಿದೆ. ಮಾರ್ಗಮಧ್ಯೆ ಸರ್ಕಾರಿ ಬಸ್‌ನ (Govt Bus) ಹೆಡ್‌ಲೈಟ್ ಕೈಕೊಟ್ಟಿದ್ದು, ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಸಂಚರಿಸಿದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ (Hubballi) ಅತ್ತಿಗೇರಿಗೆ (Attigeri) ತೆರಳುತ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟಿದ್ದ ಬಸ್, ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣ ತಲುಪಿದ ವೇಳೆ ಹೆಡ್‌ಲೈಟ್ ಕೆಟ್ಟಿದೆ ಎನ್ನಲಾಗಿದೆ.ಇದನ್ನೂ ಓದಿ: ಬಹಳ ಜನ ನನಗೆ ರಾಜೀನಾಮೆ ಕೊಡಬೇಡಿ ಅಂದ್ರು, ಮಾತು ಕೊಟ್ಟಿದ್ದೇನೆ ಅಂತ ಕೊಟ್ಟೆ: ಸಿದ್ದರಾಮಯ್ಯ
ಹೆಡ್‌ಲೈಟ್ ದುರಸ್ತಿಯಾಗದ ಹಿನ್ನೆಲೆ ಬಸ್‌ನೊಳಗಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳ ಟಾರ್ಚ್ ಆನ್ ಮಾಡಿ ಬೆಳಕು ನೀಡಿದ್ದು, ಅದೇ ಬೆಳಕಿನ ಸಹಾಯದಿಂದ ಚಾಲಕ ಬಸ್ ಚಲಾಯಿಸಿದ್ದಾರೆ. ಸಂಶಿಯಿಂದ ಗುಡಗೇರಿ ಮೂಲಕ ಅತ್ತಿಗೇರಿವರೆಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಸಂಚರಿಸಿದೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ರಾತ್ರಿ ವೇಳೆ ಹೆಡ್‌ಲೈಟ್ ಇಲ್ಲದೆ ಬಸ್ ಸಂಚರಿಸಿರುವುದು ಪ್ರಯಾಣಿಕರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ಜಾರಿಯಲ್ಲಿದೆ. ಆದರೆ ಪ್ರಯಾಣಿಕರ ಸುರಕ್ಷತೆಗೆ ಅಗತ್ಯವಿರುವ ಬಸ್‌ಗಳ ನಿರ್ವಹಣೆ ಮಾತ್ರ ಏಕೆ ಇಷ್ಟೊಂದು ನಿರ್ಲಕ್ಷ್ಯ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಂದ ಕೇಳಿಬಂದಿದೆ.ಇದನ್ನೂ ಓದಿ: ಶೆಡ್‌ನಲ್ಲಿ ಮಕ್ಕಳ ವಾಸ್ತವ್ಯಕ್ಕೆ ಸಚಿವ ಶಿವಲಿಂಗೇಗೌಡ ಗರಂ – ನಿನ್ನ ಮಕ್ಕಳಾಗಿದ್ರೆ ಅಲ್ಲೇ ಮಲಗಿಸ್ತಿದ್ಯಾ? ಅಂತ ಅಧಿಕಾರಿಗೆ ತರಾಟೆ
