– 21 ಮಕ್ಕಳ ಜೀವಹಾನಿ ಯಾಗಿದೆ, ಪಾಕ್ ವಿರುದ್ಧ ಯುದ್ಧ ಗೆದ್ದುಬಂದಂತೆ ಪ್ರಧಾನ್‌ಗೆ ಹಾರ ಹಾಕಿದ್ದೀರಿ ಅಂತ ಲೇವಡಿ
ನವದೆಹಲಿ: ನರೇಂದ್ರ ಮೋದಿ ಸರ್ಕಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮುಖ್ಯಸ್ಥರನ್ನ ಏಕೆ ರಕ್ಷಣೆ ಮಾಡುತ್ತಿದೆ? ಅವರು ಸಂಘದೊಂದಿಗೆ (RSS) ಸಂಪರ್ಕ ಹೊಂದಿದ್ದಾರೆಯೇ? ಎಂದು ಸಂಸದ ಗೌರವ್ ಗೊಗೊಯ್ (Gaurav Gogoi) ಲೋಕಸಭೆಯಲ್ಲಿ ಪ್ರಶ್ನೆ ಮಾಡಿದರು.
#WATCH | Speaking on the Public Examinations (Prevention of Unfair Means) Amendment Bill, 2026, Congress MP Gaurav Gogoi says, “… 21 children lost their lives; they committed suicide. The minister under whose watch 21 children lost their lives, when he resigned from his post… pic.twitter.com/dIzbAivRdm
— ANI (@ANI) July 28, 2026
ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಮಸೂದೆ ಕುರಿತು ಸಂಸತ್ ಮಳೆಗಾಲದ ಅಧಿವೇಶನದಲ್ಲಿ (Parliament Monsoon Session) ನಡೆಯುತ್ತಿರುವ ಚರ್ಚೆ ವೇಳೆ ತಮ್ಮ ಭಾಷಣ ಮಾಡಿದ ಗೊಗೊಯ್, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಸಂಬಂಧಿಸಿದಂತೆ 47 ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆ ಹಾಗೂ ಅಮಾನತು ಮಾಡಿರುವ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನ ತೀವ್ರವಾಗಿ ಪ್ರಶ್ನಿಸಿದರು.

ಎನ್‌ಟಿಎಯ ಅನುಮೋದಿತ ಸಿಬ್ಬಂದಿ ಇರೋದೇ 34 ಮಂದಿ, ಹೀಗಿದ್ದಾಗ 47 ಮಂದಿಯನ್ನ ಹೇಗೆ ವಜಾಗೊಳಿಸಿದ್ರು? ಅವರು ಯಾರು? ಈ ಸಂಖ್ಯೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯೂ ಸೇರಿದ್ದಾರೆಯೇ? ಎನ್‌ಟಿಎ ಮಹಾನಿರ್ದೇಶಕರನ್ನ (Director General) ಬದಲಾಯಿಸಿದರೂ, ಎನ್‌ಟಿಎ ಮುಖ್ಯಸ್ಥರನ್ನು ಮಾತ್ರ ಏಕೆ ಹುದ್ದೆಯಿಂದ ತೆಗೆದುಹಾಕಲಿಲ್ಲ ಎಂದು ಪ್ರಶ್ನಿಸಿದ್ರು.
ಪ್ರಸ್ತುತ ಎನ್‌ಟಿಎ ಮುಖ್ಯಸ್ಥರು ಈ ಹಿಂದೆ ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ (MPPSC) ಮುಖ್ಯಸ್ಥರಾಗಿದ್ದಾಗಲೂ ಅಕ್ರಮಗಳ ಆರೋಪಗಳು ಕೇಳಿಬಂದಿದ್ದವು. ಛತ್ತೀಸ್‌ಗಢದಲ್ಲಿಯೂ ಇದೇ ರೀತಿಯ ಆರೋಪಗಳು ವ್ಯಕ್ತವಾಗಿದ್ದವು. ಇಷ್ಟೆಲ್ಲ ಆರೋಪಗಳ ನಡುವೆಯೂ ಮೋದಿ ಸರ್ಕಾರ ಎನ್‌ಟಿಎ ಮುಖ್ಯಸ್ಥರನ್ನ ಏಕೆ ರಕ್ಷಿಸುತ್ತಿದೆ? ಅವರಿಗೆ ಸಂಘದೊಂದಿಗೆ (ಆರ್‌ಎಸ್‌ಎಸ್) ಸಂಬಂಧವಿದೆಯೇ? ಎಂದು ಕುಟುಕಿದರು.
#WATCH | Congress MP Gaurav Gogoi says, “I wish to draw attention to the floods in Assam and the deaths of approximately 70 people there. With a heavy and pained heart, I urge the Central Government to provide a special package for the people of Assam.”
Speaking on the Public… pic.twitter.com/vssad6Pxq3
— ANI (@ANI) July 28, 2026
ಮುಂದುವರಿದು.. ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ತಿದ್ದುಪಡಿ ಮಸೂದೆ-2026 ಕುರಿತು ಮಾತನಾಡಿದ ಗೌರವ್ ಗೊಗೊಯ್, 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಜೀವ ಹಾನಿ ಹೊಣೆ ಹೊತ್ತಿದ್ದ ಸಚಿವರು ರಾಜೀನಾಮೆ ನೀಡಿ ನಿನ್ನೆ ಸದನಕ್ಕೆ ಮರಳಿದಾಗ, ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದು ಬಂದವರಂತೆ ಅವರಿಗೆ ಹಾರ ಹಾಕಿ ಸನ್ಮಾನಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಗೊಗೊಯ್, ಪ್ರಧಾನಿಗಳು ಈಗ ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಸಚಿವ ಸಂಪುಟ ಸಭೆಯಲ್ಲಿ ಶಿಕ್ಷಣ ವ್ಯವಸ್ಥೆಯನ್ನ ಸುಧಾರಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಮಾಫಿಯಾ, ಪ್ರಶ್ನೆಪತ್ರಿಕೆ ಪರಿಹಾರ ಮಾಫಿಯಾ ಹಾಗೂ ಪರೀಕ್ಷಾ ಕೇಂದ್ರಗಳ ಮಾಫಿಯಾವನ್ನು ನಿರ್ಮೂಲನೆ ಮಾಡುವ ಕುರಿತು ಸಮಗ್ರ ಚರ್ಚೆ ನಡೆಸುವ ಬದಲು, ಇನ್‌ಸ್ಟಾಗ್ರಾಂ ಮೇಲೆ ಹೆಚ್ಚು ಗಮನ ಹರಿಸುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಟೀಕಿಸಿದರು.
