ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಸಂಸದೆ ಪ್ರಮಿಳಾ ಜಯಪಾಲ್ ಅವರಿಗೆ ವ್ಯಕ್ತಿಯೊಬ್ಬ ʼಭಾರತಕ್ಕೆ ವಾಪಸ್ ಹೋಗಿʼ ಎಂದು ಬೆದರಿಕೆ ಒಡ್ಡಿದ್ದಾನೆ. ಚೆನ್ನೈ ಮೂಲದ ಜಯಪಾಲ್ ಅವರನ್ನು ನಿಂದಿಸಿ ಆ ವ್ಯಕ್ತಿ ಐದು ಆಡಿಯೋ ಸಂದೇಶಗಳ ಕಳುಹಿಸಿದ್ದಾನೆ.
Typically, political figures don't show their vulnerability. I chose to do so here because we cannot accept violence as our new norm.
We also cannot accept the racism and sexism that underlies and propels so much of this violence. pic.twitter.com/DAuwwtWt7B
— Rep. Pramila Jayapal (@RepJayapal) September 8, 2022
ಸಂದೇಶಗಳಲ್ಲಿ ಅಶ್ಲೀಲ ಪದಗಳನ್ನು ಸಹ ಬಳಸಲಾಗಿದೆ. ಸಂಸದೆ ಪ್ರಮಿಳಾಗೆ ಬೆದರಿಕೆ ಒಡ್ಡಲಾಗಿದೆ. ಅಲ್ಲದೇ ತವರು ದೇಶ ಭಾರತಕ್ಕೆ ವಾಪಸ್ ಹೋಗುವಂತೆ ಸಂದೇಶದಲ್ಲಿ ಒತ್ತಾಯಿಸಿದ್ದಾನೆ. ಆ ಆಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪರಾವಲಂಬಿ, ಆಕ್ರಮಣಕಾರಿ, ಮನೆಗೆ ವಾಪಸ್ ಹೋಗು – ಪೋಲೆಂಡ್ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ
ಜಯಪಾಲ್ (55) US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಸಿಯಾಟಲ್ ಅನ್ನು ಪ್ರತಿನಿಧಿಸುವ ಮೊದಲ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಮಹಿಳೆಯಾಗಿದ್ದಾರೆ.
ತಮಗೆ ಎದುರಾಗಿರುವ ನಿಂದನೆ ಹಾಗೂ ಬೆದರಿಕೆ ಕುರಿತು ಪ್ರತಿಕ್ರಿಯಿಸಿರುವ ಜಯಪಾಲ್, ಸಾಮಾನ್ಯವಾಗಿ ರಾಜಕೀಯ ವ್ಯಕ್ತಿಗಳು ತಮ್ಮ ದುರ್ಬಲತೆಯನ್ನು ತೋರಿಸಿಕೊಳ್ಳುವುದಿಲ್ಲ. ಹಿಂಸಾಚಾರವನ್ನು ನಮ್ಮ ಹೊಸ ರೂಢಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲದ ಕಾರಣ ನಾನು ಇಲ್ಲಿ ಹಾಗೆ ಮಾಡಲು ನಿರ್ಧರಿಸಿದೆ. ಈ ಹಿಂಸಾಚಾರಕ್ಕೆ ಆಧಾರವಾಗಿರುವ ಮತ್ತು ಪ್ರೇರೇಪಿಸುವ ವರ್ಣಭೇದ ನೀತಿ ಮತ್ತು ಲಿಂಗಭೇದವನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಜಯಪಾಲ್ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರ ತವರು ನೆಲ ಪಾಕಿಸ್ತಾನಕ್ಕೆ ಅಮೆರಿಕದಿಂದ 3,500 ಕೋಟಿ ಸೇನಾ ನೆರವು
ಬೇಸಿಗೆಯ ಆರಂಭದಲ್ಲಿ ಸಿಯಾಟಲ್ನಲ್ಲಿರುವ ಕಾಂಗ್ರೆಸ್ ಮಹಿಳೆಯ ಮನೆಯ ಹೊರಗೆ ಪಿಸ್ತೂಲ್ನೊಂದಿಗೆ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದ. ಬ್ರೆಟ್ ಫೋರ್ಸೆಲ್ (49) ಎಂದು ವ್ಯಕ್ತಿಯನ್ನು ಗುರುತಿಸಿದ ಪೊಲೀಸರು ಆತನನ್ನು ಬಂಧಿಸಿದ್ದರು.
ಸೆಪ್ಟೆಂಬರ್ 1 ರಂದು ಕ್ಯಾಲಿಫೋರ್ನಿಯಾದಲ್ಲಿ ಒಬ್ಬ ಭಾರತೀಯ-ಅಮೆರಿಕನ್ ವ್ಯಕ್ತಿಗೆ ಜನಾಂಗೀಯ ನಿಂದನೆ ಮಾಡಲಾಗಿತ್ತು.