ನಮಿತ್ ಮಲ್ಹೋತ್ರಾ ಅವರ ರಾಮಾಯಣದ (Ramayana) ಬಾಕ್ಸಾಫೀಸ್ ಸಾಧನೆ ಹಾಗೂ ಬಜೆಟ್ ಬಗ್ಗೆ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ (Ram Gopal Varma) ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಾಮಾಯಣ ಭಾಗ-1 ರ ಬಜೆಟ್ 800 ಕೋಟಿ ರೂ.ಗಿಂತ ಕಡಿಮೆ ಎಂದು ತಿಳಿಸಿದ್ದಾರೆ.
ಚಿತ್ರದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಶ್ಲಾಘಿಸಿದ ನಿರ್ದೇಶಕ ವರ್ಮಾ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಮೊದಲ ಭಾಗದ ಸಂಪೂರ್ಣ ವೆಚ್ಚವನ್ನು ಅಥವಾ ಬಹುಶಃ ಎರಡೂ ಕಂತುಗಳನ್ನು ಮೊದಲ ಚಿತ್ರದ ಥಿಯೇಟ್ರಿಕಲ್ ಪ್ರದರ್ಶನದ ಮೂಲಕವೇ ಮರುಪಡೆಯಬಹುದು ಎಂದು ಹೇಳಿದ್ದಾರೆ. ನನ್ನ ತಾಯಿ ಕೂಡ ತಾವು ವಾಸಿಸುವ ಕಟ್ಟಡ ಸಂಕೀರ್ಣದಲ್ಲಿರುವ ಮನೆಕೆಲಸಗಾರರು ಮತ್ತು ವಾಚ್ಮನ್ಗಳಿಗೆ ರಾಮಾಯಣ ಸಿನಿಮಾ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ ಎಂದು ಎಂಬ ವಿಚಾರವನ್ನೂ ವರ್ಮಾ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ ಯಶ್ ʻರಾಮಾಯಣʼ – ಕಾಂತಾರ ಚಾಪ್ಟರ್-1, ಜವಾನ್, ಕಲ್ಕಿ ದಾಖಲೆಗಳು ಉಡೀಸ್
ಎರಡು ಭಾಗಗಳ ಮಹಾಕಾವ್ಯದ ವ್ಯಾಪಕವಾಗಿ ಚರ್ಚಿಸಲಾದ ಬಜೆಟ್ ಅನ್ನು ಸಹ ಚಲನಚಿತ್ರ ನಿರ್ಮಾಪಕರು ಪ್ರಶ್ನಿಸಿದ್ದಾರೆ. ಅವರ ಪ್ರಕಾರ, ಮೊದಲ ಕಂತಿನ ನಿಜವಾದ ವೆಚ್ಚವು ಈಗಾಗಲೇ ವರದಿಯಾದ ಅಂಕಿಅಂಶಗಳಿಗಿಂತ ಕಡಿಮೆಯಿರಬಹುದು ಎಂದಿದ್ದಾರೆ.
ಭಾಗ 1ರ ನಿಜವಾದ ವೆಚ್ಚ 800 ಕೋಟಿಗಿಂತ ಸ್ವಲ್ಪ ಕಡಿಮೆ ಎಂದು ನನಗೆ ತಿಳಿದುಬಂತು. ಅದು ಲಾಭದಾಯಕ ವ್ಯವಹಾರಗಳು, ಜಾಗತಿಕ ತೆರಿಗೆ ಪ್ರಯೋಜನಗಳು, ಸಬ್ಸಿಡಿ ಅಂಶಗಳು ಇತ್ಯಾದಿಗಳನ್ನು ಒಳಗೊಂಡಿದೆ. ಇವೆಲ್ಲವೂ ಅಂತಿಮವಾಗಿ ವೆಚ್ಚವನ್ನು ಅದಕ್ಕಿಂತ ಕಡಿಮೆ ಮಾಡುತ್ತದೆ. ನಾನು ಮಾತ್ರವಲ್ಲ, ಯಾವುದೇ ಅನುಭವಿ ಚಲನಚಿತ್ರ ನಿರ್ಮಾಪಕರು, ಚಿತ್ರವನ್ನು ನೋಡುವ ಮೂಲಕ ವೆಚ್ಚವು ಅದಕ್ಕಿಂತ ಹೆಚ್ಚಿರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ʻರಾಮಾಯಣʼ ಅಬ್ಬರ: 1,000 ಕೋಟಿ ಕ್ಲಬ್ ಸೇರಿದ ಯಶ್ ಸಿನಿಮಾ
