– ಹತ್ತೇ ದಿನಗಳಲ್ಲಿ 1,228 ಕೋಟಿ ಬಾಚಿಕೊಂಡ ಸಿನಿಮಾ
ಕನ್ನಡಿಗ ಯಶ್, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ Part -1’ (Ramayana Part 1) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 10 ದಿನಗಳನ್ನ ಪೂರೈಸಿರುವ ಈ ಸಿನಿಮಾ, ಭಾರತೀಯ ಬಾಕ್ಸ್ ಆಫೀಸ್ನಲ್ಲಿ 600 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ಈ ವರ್ಷದ ಬ್ಲಾಕ್ಬಸ್ಟರ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ (Yash) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಕೇವಲ 10 ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್ನಲ್ಲಿ ‘ಜವಾನ್’, ‘ಕಲ್ಕಿ 2898 ಎಡಿ’ ಹಾಗೂ ‘ಕಾಂತಾರ: ಎ ಲೆಜೆಂಡ್ ಚಾಪ್ಟರ್ 1’ ಚಿತ್ರಗಳ ಜೀವಿತಾವಧಿಯ ಗಳಿಕೆಯನ್ನ ಹಿಂದಿಕ್ಕಿದೆ.
ನವೆಂಬರ್ 5ರಂದು ತೆರೆಕಂಡಿದ್ದ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯ ಮೊದಲ ದಿನದಿಂದಲೇ ಉತ್ತಮ ಪ್ರದರ್ಶನ ನೀಡುತ್ತಿದೆ. ವರದಿಯ ಪ್ರಕಾರ, ಮೊದಲ 10 ದಿನಗಳಲ್ಲಿ ಭಾರತದಲ್ಲಿ 685.60 ಕೋಟಿ ನಿವ್ವಳ (Net) ಗಳಿಕೆ ಮಾಡಿದೆ. ಇನ್ನು ಚಿತ್ರದ ವಿಶ್ವಾದ್ಯಂತ ಒಟ್ಟು ಗಳಿಕೆ 1,228 ಕೋಟಿ ತಲುಪಿದೆ.
10ನೇ ದಿನ ‘ರಾಮಾಯಣ’ ಗಳಿಸಿದ್ದೆಷ್ಟು?
ಬಿಡುಗಡೆಯ ಮೊದಲ ದಿನವೇ ‘ರಾಮಾಯಣ’ ಸಿನಿಮಾ 64.85 ಕೋಟಿ ಗಳಿಸುವ ಮೂಲಕ ಭರ್ಜರಿ ಆರಂಭ ಕಂಡಿತ್ತು. ಚಿತ್ರಕ್ಕೆ ಇದುವರೆಗಿನ ಅತಿಹೆಚ್ಚು ಏಕದಿನ ಗಳಿಕೆ 5ನೇ ದಿನ ದಾಖಲಾಗಿದ್ದು, ಅಂದು 107.50 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 2ನೇ ಶುಕ್ರವಾರದಂದು ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದರೂ, ವಾರಾಂತ್ಯದಲ್ಲಿ ಸಿನಿಮಾ ಮತ್ತೆ ಉತ್ತಮ ವೇಗ ಪಡೆದುಕೊಂಡಿದೆ. ನವೆಂಬರ್ 13ರಂದು 9ನೇ ದಿನ 48.10 ಕೋಟಿ ಗಳಿಸಿದ್ದ ಸಿನಿಮಾ, ನವೆಂಬರ್ 14ರ ಶನಿವಾರ 10ನೇ ದಿನ 72.90 ಕೋಟಿ ಕಲೆಕ್ಷನ್ ಮಾಡಿತ್ತು. ಇದರೊಂದಿಗೆ ಚಿತ್ರದ ಒಟ್ಟು ಭಾರತ ನಿವ್ವಳ ಗಳಿಕೆ 685.60 ಕೋಟಿಗೆ ತಲುಪಿದೆ. ಹೊಸ ಅಂಕಿಅಂಶಗಳ ಪ್ರಕಾರ, ಚಿತ್ರದ ಭಾರತದಲ್ಲಿನ ಒಟ್ಟು ಗ್ರಾಸ್ ಕಲೆಕ್ಷನ್ 819.50 ಕೋಟಿ ಆಗಿದೆ.
‘ಜವಾನ್’ ಬಾಕ್ಸ್ ಆಫೀಸ್ ದಾಖಲೆ ಉಡೀಸ್
ಇನ್ನೂ ಕನ್ನಡಿಗ ಯಶ್ ಅಭಿನಯಿಸಿರುವ ರಾಮಾಯಾಣ ಸಿನಿಮಾ ಈಗಾಗಲೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಮೂರು ಬೃಹತ್ ಸಿನಿಮಾಗಳ ಜೀವಿತಾವಧಿಯ ನಿವ್ವಳ ಗಳಿಕೆಯನ್ನ ಹಿಂದಿಕ್ಕಿದೆ.
* ಜವಾನ್: 2023ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಖಾನ್ ಅಭಿನಯದ ಈ ಸಿನಿಮಾ ಭಾರತದಲ್ಲಿ 640.25 ಕೋಟಿ ರೂ. ನಿವ್ವಳ ಗಳಿಕೆ ಮಾಡಿತ್ತು.
* ಕಲ್ಕಿ 2898 ಎಡಿ: 2024ರಲ್ಲಿ ತೆರೆಕಂಡಿದ್ದ ಈ ಸಿನಿಮಾ 646.31 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
* ಕಾಂತಾರ: ಎ ಲೆಜೆಂಡ್ ಚಾಪ್ಟರ್ 1: 2025ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ 622.48 ಕೋಟಿ ರೂ. ಗಳಿಸಿತ್ತು.
ಆದರೆ, ಬಿಡುಗಡೆಯಾಗಿ ಕೇವಲ 10 ದಿನಗಳಲ್ಲೇ 685.60 ಕೋಟಿ ರೂ. ಗಳಿಸಿರುವ ‘ರಾಮಾಯಣ’ ಈ ಮೂರೂ ಚಿತ್ರಗಳ ದೇಶೀಯ ಬಾಕ್ಸ್ ಆಫೀಸ್ ದಾಖಲೆಗಳನ್ನ ಹಿಂದಿಕ್ಕಿದೆ.


