InternationalLatestMain Post

ಪರಾವಲಂಬಿ, ಆಕ್ರಮಣಕಾರಿ, ಮನೆಗೆ ವಾಪಸ್ ಹೋಗು – ಪೋಲೆಂಡ್‍ನಲ್ಲಿ ಭಾರತೀಯನಿಗೆ ಜನಾಂಗೀಯ ನಿಂದನೆ

ವಾಷಿಂಗ್ಟನ್: ಅಮೆರಿಕ ವ್ಯಕ್ತಿಯೋರ್ವ ಭಾರತ ಮೂಲಕ ವ್ಯಕ್ತಿಯ ಮೇಲೆ ಜನಾಂಗೀಯ ನಿಂದನೆ ಮಾಡಿರುವ ಘಟನೆ ಪೋಲೆಂಡ್‍ನ ರಾಜಧಾನಿ ವಾರ್ಸಾದಲ್ಲಿ ನಡೆದಿದೆ.

ಭಾರತೀಯ ವ್ಯಕ್ತಿಗೆ ನಿಂದಿಸುತ್ತಿರುವ ವೀಡಿಯೋವನ್ನು ಸೆರೆ ಹಿಡಿದು ಅಮೆರಿಕ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ಭಾರತೀಯನಿಗೆ ಪ್ರಶ್ನೆಗಳನ್ನು ಕೇಳಿ ಕಿರುಕುಳ ನೀಡಿರುವುದನ್ನು ಕಾಣಬಹುದಾಗಿದೆ.

ನನ್ನ ಅನುಮತಿ ಇಲ್ಲದೇ ಏಕೆ ವೀಡಿಯೋ ಮಾಡುತ್ತಿದ್ದೀರಾ, ವೀಡಿಯೋ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರೂ ಭಾರತೀಯ ವ್ಯಕ್ತಿಯ ಬೆಂಬಿಡದೇ ವೀಡಿಯೋವನ್ನು ಸೆರೆ ಹಿಡಿಯುತ್ತಾ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಇದನ್ನೂ ಓದಿ: ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ

ಅಮೆರಿಕದಲ್ಲಿ ನಿಮ್ಮಂತಹ ತುಂಬಾ ಜನ ಇದ್ದಾರೆ. ನೀವು ಪೋಲೆಂಡ್‍ನಲ್ಲಿ ಏಕೆ ಇದ್ದೀರಾ? ನೀವು ಪೋಲೆಂಡ್ ಅನ್ನು ಪಡೆದುಕೊಳ್ಳಬಹುದು ಎಂದು ಅಂದುಕೊಂಡಿದ್ದೀರಾ? ನಿಮಗೆ ನಿಮ್ಮದೇ ಆದ ದೇಶವಿದೆ. ನೀವು ಏಕೆ ಹಿಂತಿರುಗಬಾರದು? ಬಿಳಿಯರ ನಾಡಿಗೆ ಭಾರತೀಯರು ಏಕೆ ಬಂದಿದ್ದೀರಾ? ನಮ್ಮ ಪರಿಶ್ರಮದಿಂದ ನೀವು ಬದುಕುತ್ತಿದ್ದೀರಾ. ನೀವೇಕೆ ಪರಾವಲಂಬಿಯಾಗಿದ್ದೀರಿ? ನೀವು ಆಕ್ರಮಣಕಾರರು. ಮನೆಗೆ ಹೋಗು ಆಕ್ರಮಣಕಾರ. ನೀವು ಯೂರೋಪ್‍ನಲ್ಲಿ ಇರುವುದು ನಮಗೆ ಬೇಡ ಎಂದು ಅಮೆರಿಕದ ಪ್ರವಾಸಿ ಕಿಡಿಕಾರಿದ್ದಾನೆ.

4 ನಿಮಿಷವಿರುವ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಭಾರತೀಯ ವ್ಯಕ್ತಿಯ ಮೇಲೆ ಜನಾಂಗೀಯ ನಿಂದನೆ ಮತ್ತು ಅಶ್ಲೀಲ ಪದಗಳನ್ನು ಬಳಸಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವೀಡಿಯೋದಲ್ಲಿರುವ ಅಮೆರಿಕದ ವ್ಯಕ್ತಿಯನ್ನು ಜಾನ್ ಮಿನಾಡಿಯೊ ಜೂನಿಯರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

ಕಳೆದ ವಾರ ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿ ಮೇಲೆ ಜನಾಂಗೀಯ ನಿಂದನೆ ನಡೆದ ಮತ್ತೊಂದು ಪ್ರಕರಣ ವರದಿಯಾಗಿತ್ತು. ಆದರೆ ಇದು ‘ದೇಶಬಾಂಧವ’ನಿಂದಲೇ ನಡೆದಿತ್ತು. ಸಿಖ್ ಧರ್ಮೀಯನೊಬ್ಬ ‘ಕೊಳಕು ಹಿಂದೂ’ ಮತ್ತು ‘ಅಸಹ್ಯಕರ ನಾಯಿ’ ಎಂದು ಭಾರತೀಯ – ಅಮೆರಿಕನ್‍ನನ್ನು ನಿಂದಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ವರದಿಯಾಗಿತ್ತು. ಈ ಮುನ್ನ ಟೆಕ್ಸಾಸ್‍ನಲ್ಲಿ ಭಾರತ ಮೂಲದ ನಾಲ್ವರು ಮಹಿಳೆಯರ ಮೇಲೆ ಮೆಕ್ಸಿಕನ್- ಅಮೆರಿಕನ್ ಮಹಿಳೆಯೊಬ್ಬರು ಹಲ್ಲೆ ನಡೆಸಿದ್ದ ಸುದ್ದಿ ಭಾರಿ ಸದ್ದು ಮಾಡಿತ್ತು. ಇದೀಗ ಮತ್ತೆ ಅಮೆರಿಕದಲ್ಲಿ ಈ ಘಟನೆ ಜರುಗಿದೆ.

Live Tv

Leave a Reply

Your email address will not be published.

Back to top button