CrimeInternationalLatestMain Post

ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ

ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ, ನಿಂದನೆಗಳು ಹೆಚ್ಚುತ್ತಿವೆ.

ಮೊನ್ನೆಯಷ್ಟೇ ನಾಲ್ವರು ಭಾರತೀಯ ಮಹಿಳೆಯರ ಮೇಲೆ ಮೆಕ್ಸಿಕನ್ ಮಹಿಳೆ ದಾಳಿ ನಡೆಸಿದ್ದರು. ಇದೀಗ ಕ್ಯಾಲಿಫೋರ್ನಿಯಾದಲ್ಲಿ ಪಂಜಾಬ್ ಮೂಲದ ಸಿಖ್ ವ್ಯಕ್ತಿಯೊಬ್ಬ ತಮಿಳುನಾಡು ಮೂಲದ ಕೃಷ್ಣನ್ ಜಯರಾಮನ್ ಎಂಬವರನ್ನು ಉದ್ದೇಶಿಸಿ ಜನಾಂಗೀಯ ನಿಂದನೆ ಮಾಡಿದ್ದಾನೆ. ಇದನ್ನೂ ಓದಿ: ನಾನು ಕ್ಷಮೆಯಾಚಿಸುತ್ತೇನೆ, ಕ್ಷೇತ್ರದ ಮಾಲೀಕರಿಗೆ ಕಾರ್ಮಿಕರನ್ನು ಬೈಯುವ ಹಕ್ಕಿದೆ – ಪ್ರತಾಪ್ ಸಿಂಹ

`ನೀನು ಹಿಂದೂ ಅಲ್ವಾ.. ಗೋಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ..? ನಿಮ್ಮಂಥರವರಿಂದ್ಲೇ ಭಾರತೀಯರನ್ನು ಕೆಟ್ಟದಾಗಿ ನೋಡಲಾಗ್ತಿದೆ. ನೀನು ಅಸಹ್ಯವಾಗಿ ಇದ್ದೀಯಾ.. ಇನ್ಮುಂದೆ ಈ ರೀತಿ ಹೊರಗೆಲ್ಲೂ ಬರ್ಬೇಡ’ ಎಂದೆಲ್ಲಾ ನಿಂದಿಸಿದ್ದಾನೆ. ಅಲ್ಲದೇ, ಎರಡು ಬಾರಿ ಕೃಷ್ಣನ್ ಜಯರಾಮನ್ ಮುಖಕ್ಕೆ ಉಗುಳಿ ಉದ್ಧಟತನ ಮೆರೆದಿದ್ದಾನೆ.

ಪೊಲೀಸರು ಜನಾಂಗೀಯ ನಿಂದನೆ ಪ್ರಕರಣ ದಾಖಲಿಸಿ ತಜಿಂದರ್ ಸಿಂಗ್ ವಿರುದ್ಧ ತನಿಖೆ ನಡೆಸಿದ್ದಾರೆ. ಇದು ಕಳೆದ ಒಂದೇ ವಾರದಲ್ಲಿ ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದ 2ನೇ ಘಟನೆಯಾಗಿದೆ. ಇದನ್ನೂ ಓದಿ: ಹೊಲಿಗೆಯನ್ನೇ ಸ್ವ-ಉದ್ಯೋಗ ಮಾಡಿಕೊಳ್ಳುವ ಮಹಿಳೆಯರಿಗೆ ಮುದ್ರಾ ಲೋನ್: ಜೋಶಿ

ಇತ್ತೀಚೆಗೆ ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯೊಬ್ಬಳು ಹಲ್ಲೆ ಮಾಡಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೀಡಿಯೋದಲ್ಲಿ, ಅಮೆರಿಕನ್ ಮಹಿಳೆ, ಭಾರತೀಯ ಮಹಿಳೆಯೊಬ್ಬರ ಮುಖಕ್ಕೆ ಹೊಡೆಯುತ್ತಿದ್ದರು. ಇನ್ನಿಬ್ಬರು ಭಾರತೀಯ ಮಹಿಳೆಯರ ಫೋನ್‌ಗಳನ್ನು ಕಸಿದುಕೊಂಡು, ಶೂಟ್ ಮಾಡುವುದಾಗಿ ಬೆದರಿಕೆಯೊಡ್ಡಿಕೆಯೊಡ್ಡಿದ್ದಳು. `ಕಪ್ಪು ಜನರಾದ ನೀವು ನಮ್ಮ ದೇಶವನ್ನು ಹಾಳು ಮಾಡಿತ್ತಿದ್ದೀರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಳು, ಎದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು.

Live Tv

Leave a Reply

Your email address will not be published.

Back to top button