ಬಾಲಿವುಡ್‌ನ ಖ್ಯಾತ ನಟ ಗೋವಿಂದ (Govinda) ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ, ನಟಿ ರಾಖಿ ಸಾವಂತ್(Rakhi Sawant) ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ನಟ ಗೋವಿಂದ ಹಾಗೂ ನಟಿ ಕೋಮಲ್ ರಾಣಿ (Komal Rani) ನಡುವೆ ಅಫೇರ್ ಇದೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರು ತಮ್ಮ ಪುತ್ರ ಮತ್ತು ವಕೀಲರೊಂದಿಗೆ ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ (Family Court) ಭೇಟಿ ನೀಡಿರುವುದು ಈ ಅನುಮಾನಗಳಿಗೆ ಮತ್ತಷ್ಟು ತುಪ್ಪ ಸುರಿದಿತ್ತು.
ಈ ಬೆಳವಣಿಗೆಗಳ ನಡುವೆ, ಗೋವಿಂದ ಪತ್ನಿ ಸುನೀತಾಗೆ(Sunita Ahuja) ಕರೆ ಮಾಡಿ ಸಾಂತ್ವನ ಹೇಳಿರುವ ವಿಡಿಯೋ ತುಣುಕನ್ನು ರಾಖಿ ಸಾವಂತ್ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಖಿ, ಸುನೀತಾ ಜೀ, ಹೇಗಿದ್ದೀರಿ? ನಾನು ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆ. ನೀವು ತಕ್ಷಣವೇ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಿಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಸುನೀತಾ ಅವರು ಪ್ರತಿಕ್ರಿಯಿಸಿರುವುದು ಕೂಡ ಆಡಿಯೋದಲ್ಲಿ ದಾಖಲಾಗಿದೆ.
View this post on Instagram
ನಟಿ ಕೋಮಲ್ ರಾಣಿ ಅವರೊಂದಿಗೆ ಗೋವಿಂದ ಒಟ್ಟಿಗೆ ಪ್ರಯಾಣಿಸುತ್ತಿದ್ದ ವಿಮಾನ ನಿಲ್ದಾಣದ ವಿಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆ ನಡೆಯುವ ಮುನ್ನಾದಿನವೇ ಸುನೀತಾ ಅವರು ವಕೀಲರೊಂದಿಗೆ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದು ಸಂಸಾರದಲ್ಲಿನ ಮನಸ್ತಾಪವನ್ನು ಬಹಿರಂಗಪಡಿಸಿದೆ. ಇದನ್ನೂ ಓದಿ: ದೇವಿ ಮಹಾತ್ಮೆ ಚಿತ್ರಕ್ಕಾಗಿ ಹಾಡಿದ ಕಾಂತಾರ ಗಾಯಕ ಅಬ್ಬಿ
