ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ವಿಧಾನ ಸೌಧದಲ್ಲಿ ಫ್ರೀಡಂ ಹಬ್ಬ (Freedom Habba) ಆಚರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದು, ಕ್ಯೂಆರ್ ಕೋಡ್ (QR Code) ಮೂಲಕ ಪ್ರೀ ರಿಜಿಸ್ಟ್ರೇಷನ್ (Pre Registration) ಮಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ.
ಈ ಕುರಿತು ಜಿಬಿಎ (GBA) ಕೇಂದ್ರ ಕಛೇರಿಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದೇ ಮೊದಲ ಬಾರಿಗೆ ಫ್ರೀಡಂ ಹಬ್ಬ ನಡೆಯುತ್ತಿದೆ. ಜಿಬಿಎ ಮತ್ತು ಪೊಲೀಸ್ ಇಲಾಖೆ ಫ್ರೀಡಂ ಹಬ್ಬದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿವೆ. ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಸ್ವಾತಂತ್ರ‍್ಯ ಕಾರ್ಯಕ್ರಮ ಮುಗಿದ ಬಳಿಕ ಆ.15ರಂದು 12 ಗಂಟೆಯಿಂದ ವಿಧಾನಸೌಧ ಬಳಿ ಫ್ರೀಡಂ ಹಬ್ಬ ಶುರುವಾಗಲಿದೆ. ಜನರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಫ್ರೀಡಂ ಹಬ್ಬವನ್ನ ಆಚರಣೆ ಮಾಡಬಹದು. ಫ್ರೀಡಂ ಹಬ್ಬದಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಪ್ರಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಕಡ್ಡಾಯ. ಪ್ರಿ ರಿಜಿಸ್ಟ್ರೇಷನ್ ಇಲ್ಲದೇ ನೇರವಾಗಿ ಜನರಿಗೆ ಫ್ರೀಡಂ ಹಬ್ಬಕ್ಕೆ ಪ್ರವೇಶವಿಲ್ಲ. ಫ್ರೀಡಂ ಹಬ್ಬಕ್ಕೆ ಮಕ್ಕಳ ಜೊತೆ ಪೋಷಕರು ಬರಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: NALSAR 2026ರ ಪದವೀಧರರಿಗೆ ವಕೀಲರಾಗಿ ನೋಂದಣಿಗೆ ನಿರ್ಬಂಧ – ಸಿಜೆಐ ಆಹ್ವಾನ ವಿವಾದದ ಬೆನ್ನಲ್ಲೇ BCI ಆದೇಶ
ಪ್ರೀಡಂ ಹಬ್ಬದಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನ, ಗಾಂಧಿ ಪ್ರತಿಮೆ ಬಳಿ ಸ್ವಾತಂತ್ರ‍್ಯಕ್ಕಾಗಿ ನಡೆದ ಹೋರಾಟದ ಪ್ರದರ್ಶನ ಇರುತ್ತದೆ ಮತ್ತೆ ಫ್ರೀಡಂ ವಾಲ್ ಎಗ್ಸಿಬಿಷನ್ ಇರಲಿದೆ. ಬೆಳ್ಳಗೆ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೂ ವಿವಿಧ ಕಾರ್ಯಕ್ರಮಗಳು ಇರಲಿದೆ. ನಂತರ ಸಂಜೆ ಆರು ಗಂಟೆಗೆ ರಸ ಸಂಜೆ ಸಂಗೀತ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ಶಾಲಾ-ಕಾಲೇಜುಗಳ ಆವರಣದಲ್ಲಿ ಸಮಾರಂಭಗಳಿಗೆ ಬ್ರೇಕ್ – ಮತ್ತೆ ಹೊಸ ಕಾಯ್ದೆಗೆ ಮುಂದಾದ ಸರ್ಕಾರ
ಈಗಾಗಲೇ 18 ಸಾವಿರಕ್ಕೂ ಹೆಚ್ಚು ಜನ ಆನ್‌ಲೈನ್ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದಾರೆ. ಶುಕ್ರವಾರ ಸಂಜೆವರೆಗೂ ನೋಂದಣಿಗೆ ಅವಕಾಶ ಇದೆ. ವಿಧಾನಸೌಧ ಟೂರ್ ಕೂಡ ಮಾಡಬಹುದು. 25 ಜನರ ತಂಡವಾಗಿ ಜನರಿಗೆ ವಿಧಾನಸೌಧ ಟೂರ್ ಮಾಡಿಸಲಿದ್ದಾರೆ. ಇದಕ್ಕೆ ಆಧಾರ್ ಕಾರ್ಡ್ ಕಡ್ಡಾಯ. 3 ಸಾವಿರ ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಲಾಗುತ್ತದೆ. ಆಗಸ್ಟ್ 15ರ ಬೆಳ್ಳಗೆ 11 ಗಂಟೆಗೆ ಕೆ.ಆರ್ ಸರ್ಕಲ್‌ನಿಂದ ವಿಧಾನಸೌಧದ ತಿಮ್ಮಯ್ಯ ರಸ್ತೆ ಬಂದ್ ಇರಲಿದೆ. ವಿಧಾನಸೌಧ ಮುಂಭಾಗದ ಎಗ್ಸಿಟ್ ಗೇಟ್ ಕೂಡ ಕ್ಲೋಸ್ ಇರಲಿದೆ. ವಾಹನ ಸವಾರರು ಬದಲಿ ಮಾರ್ಗ ಅನುಸರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೇಸ್ ಇತ್ಯರ್ಥಕ್ಕೆ ಲಂಚಕ್ಕೆ ಕೈಯೊಡ್ಡಿದ ಪಿಎಸ್‌ಐ ʻಲೋಕಾʼ ಬಲೆಗೆ

