ಹಾಸನ: ಎನ್‌ಸಿಆರ್ ಪ್ರಕರಣ ಇತ್ಯರ್ಥಪಡಿಸಲು ಒಂದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 20,000 ರೂ. ಹಣ ಪಡೆಯುತ್ತಿದ್ದ ಹಳೆಬೀಡು (Halebidu) ಪಿಎಸ್‌ಐನ್ನು (PSI) ಲೋಕಾಯುಕ್ತ (Lokayukta) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಹಳೇಬೀಡು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ. ಎನ್‌ಸಿಆರ್ ಇತ್ಯರ್ಥ ಪಡಿಸಲು ನವೀನ ಎಂಬವರಿಂದ ಪಿಎಸ್‌ಐ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಹೋಟೆಲ್‌ನಲ್ಲಿ ಮುಂಗಡವಾಗಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಹಣದ ಸಮೇತ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ʻಲೋಕಾʼ ಬಲೆಗೆ ಬಿದ್ದ ಬೆಸ್ಕಾಂ ಅಧಿಕಾರಿಗಳು – 1.50 ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡಾಗಿ ಲಾಕ್
ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿಲ್ಪಾ, ಗವಿರಾಜು ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಲಂಚ ಸ್ವೀಕಾರ ಆರೋಪ; ಕಾರ್ಕಳ ಡಿವೈಎಸ್‌ಪಿ ಸೇರಿ ಮೂವರು ಪೊಲೀಸರು, ಓರ್ವ ಸಿಬ್ಬಂದಿ ಸಸ್ಪೆಂಡ್
