– ಸತತ 9 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ
ಪಂಜಾಬ್: ಪಂಜಾಬ್‌ನ (Punjab) ಚಕ್ ಸಮಾನಾ (Chak Samana) ಗ್ರಾಮದಲ್ಲಿ 20 ಅಡಿ ಆಳದ ಕೊಳವೆಬಾವಿಗೆ (Borewell) ಬಿದ್ದ 4 ವರ್ಷದ ಬಾಲಕನನ್ನು 9 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಗಿದೆ.
ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಗುರ್ಕರನ್ ಸಿಂಗ್ ಎಂಬ ಬಾಲಕ ತನ್ನ ಮನೆಯ ಸಮೀಪ ಆಟವಾಡುತ್ತಿದ್ದ ವೇಳೆ ಹೊಸದಾಗಿ ಕೊರೆದಿದ್ದ ಕೊಳವೆಬಾವಿಗೆ ಬಿದ್ದಿದ್ದ. ಇದನ್ನೂ ಓದಿ: Operation RAGEPILL | 182 ಕೋಟಿ ಮೌಲ್ಯದ ʻಜಿಹಾದಿ ಡ್ರಗ್ʼ ಜಪ್ತಿ – ಅಮಿತ್ ಶಾ
ಬಾಲಕ ಸುಮಾರು 20ರಿಂದ 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಪಂಜಾಬ್ ಪೊಲೀಸ್, ಅಗ್ನಿಶಾಮಕ ದಳ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸ್ವಯಂಸೇವಕರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್; ಪುಣೆ ಶಿಕ್ಷಕಿ ಅರೆಸ್ಟ್
ಮಣ್ಣು ಸಡಿಲವಾಗಿ ನಿರಂತರ ಕುಸಿಯುತ್ತಿದ್ದ ಕಾರಣ ಕಾರ್ಯಾಚರಣೆ ಬಹಳ ಕಷ್ಟವಾಗಿತ್ತು. ಕೊನೆಗೂ 9 ಗಂಟೆಗಳ ಬಳಿಕ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಬಾಲಕ ಆರೋಗ್ಯವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂಧನ ಮಿತವ್ಯಯಕ್ಕೆ ಮೋದಿ ಕರೆ – ಕಾರು ಬಿಟ್ಟು ಸೈಕಲ್ ಏರಿದ ಚಿನ್ನದಂಗಡಿ ಮಾಲೀಕ
ಬಾಲಕ ಸುರಕ್ಷಿತವಾಗಿ ಹೊರಬಂದ ತಕ್ಷಣ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಭಾವುಕರಾಗಿ ರಕ್ಷಣಾ ಸಿಬ್ಬಂದಿಯನ್ನು ಅಪ್ಪಿಕೊಂಡು ಧನ್ಯವಾದ ಸಲ್ಲಿಸಿದರು. ಈ ರಕ್ಷಣಾ ಕಾರ್ಯಾಚರಣೆಗೆ ಸೋಷಿಯಲ್ ಮೀಡಿಯಾದಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಹಳೆಯ, ಅನಗತ್ಯ ವಸ್ತುಗಳ ವಿಲೇವಾರಿಗೆ ‘ಡಿಕ್ಲಟರ್’ ಅನಾವರಣ – ತಂತ್ರಾಂಶದ ಕಾರ್ಯವಿಧಾನ ಹೇಗೆ?

