ಬೆಂಗಳೂರು: ಜಿಬಿಎ (GBA) ವ್ಯಾಪ್ತಿಯಲ್ಲಿ ಹಳೆಯ ಹಾಗೂ ಬೇಡದಿರುವ ವಸ್ತುಗಳ ವಿಲೇವಾರಿಗಾಗಿ ಡಿಕ್ಲಟರ್ (Dclutter) ತಂತ್ರಾಂಶ ಅನಾವರಣ ಮಾಡಲಾಗಿದೆ ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಣಾಧಿಕಾರಿಯಾದ ಕರೀಗೌಡರವರು (Karee Gowda) ತಿಳಿಸಿದರು.
ಬಿಎಸ್‌ಡಬ್ಲ್ಯೂಎಂಎಲ್ (BSWML) ವತಿಯಿಂದ ಬೆಂಗಳೂರು ನಗರಾದ್ಯಂತ ಮನೆಮನೆಗೆ ತೆರಳಿ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹಣ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಆದರೆ ಹಳೆಯ ಪೀಠೋಪಕರಣಗಳು, ಸೋಫಾಗಳು, ಹಾಸಿಗೆಗಳು ಕಪಾಟುಗಳು, ತ್ಯಜಿಸಲಾದ ಬಟ್ಟೆಗಳು, ಒಡೆದ ಸ್ಯಾನಿಟರಿ ಸಿಂಕ್ ಸಾಮಗ್ರಿಗಳು, ಹಳೆಯ ಕಾಮೋಡ್‌ಗಳು, ಚಪ್ಪಲಿ ಹಾಗೂ ಇತರೆ ದೊಡ್ಡ ಗಾತ್ರದ ಗೃಹ ಬಳಕೆಯ ತ್ಯಾಜ್ಯಗಳನ್ನು ನಿಯಮಿತ ತ್ಯಾಜ್ಯ ಸಂಗ್ರಹ ವ್ಯವಸ್ಥೆಯ ಮೂಲಕ ಸಂಗ್ರಹಿಸಲಾಗುತ್ತಿರಲಿಲ್ಲ. ಇದನ್ನೂ ಓದಿ: PUBLiC TV Explained | ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬಿಕ್ಕಟ್ಟು – ಭಾರತದಿಂದ ರಫ್ತು ಬಂದ್, ದಿಢೀರ್ ಸಮಸ್ಯೆ ಶುರುವಾಗಿದ್ದೇಕೆ?
ಇದರ ಪರಿಣಾಮ ಇಂತಹ ತ್ಯಾಜ್ಯವನ್ನು ಸಾರ್ವಜಿನಕರು ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತ್ಯಜಿಸಲಾಗುತ್ತಿದ್ದು, ಇದು ಪರಿಸರ ಸಮಸ್ಯೆಗಳನ್ನು ಉಂಟುಮಾಡುವುದರ ಜೊತೆಗೆ ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆಯುಂಟು ಮಾಡುತ್ತಿತ್ತು. ಇದನ್ನೂ ಓದಿ: ಮಕ್ಕಳಾಗಲಿಲ್ಲ ಅಂತ ಮನನೊಂದು ಮಹಿಳೆ ಆತ್ಮಹತ್ಯೆ ಶಂಕೆ
ಈ ಸವಾಲನ್ನು ಎದುರಿಸಲು, ಬಿಎಸ್‌ಡಬ್ಲ್ಯೂಎಂಎಲ್ ವತಿಯಿಂದ ಪ್ರಾಯೋಗಿಕವಾಗಿ ಟ್ರ‍್ಯಾಕ್ಟರ್‌ಗಳನ್ನು ನಿಯೋಜಿಸಿ ರಸ್ತೆ ಬದಿಯಲ್ಲಿ ತ್ಯಜಿಸಲಾದ ಬೃಹತ್ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿತ್ತು. ಈ ಕಾರ್ಯಾಚರಣೆಯ ವೇಳೆ ಬೆಂಗಳೂರು ನಗರದ್ಯಾಂತ ವಿವಿಧ ಪ್ರದೇಶಗಳಿಂದ ಸುಮಾರು 6,000 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ತ್ಯಾಜ್ಯವನ್ನು ಗುರುತಿಸಿ ಸಂಗ್ರಹಿಸಲಾಗಿರುತ್ತದೆ. ಇದನ್ನೂ ಓದಿ: ಮೇಕೆ, ಕುರಿಗಳನ್ನ ಕೊಂದು ಹಾಕಿದ್ದ ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಸ್ಥಿರ ಮತ್ತು ನಾಗರಿಕ ಸ್ನೇಹಿ ಪರಿಹಾರ ಒದಗಿಸುವ ಮಹತ್ವದ ಹೆಜ್ಜೆಯಾಗಿ, ಬಿಎಸ್‌ಡಬ್ಲ್ಯೂಎಂಎಲ್ ಇದೀಗ ‘ಡಿಕ್ಲಟರ್’ ಮೊಬೈಲ್ ತಂತ್ರಾಂಶವನ್ನು ಪರಿಚಯಿಸಿದೆ. ಈ ತಂತ್ರಾಂಶವು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿದ್ದು, ನಾಗರಿಕರು ತಮ್ಮ ಮನೆಗಳಲ್ಲಿರುವ ಬೃಹತ್ ತ್ಯಾಜ್ಯ ವಿಲೇವಾರಿಗೆ ಸುಲಭವಾಗಿ ಸಲ್ಲಿಸಬಹುದಾಗಿದೆ. ಸದರಿ ಆಪ್‌ನಲ್ಲಿ ಬರುವ ಕೋರಿಕೆಯಂತೆ ಹಾಗೂ ತ್ಯಾಜ್ಯದ ಪ್ರಮಾಣ ಹಾಗೂ ಸ್ವರೂಪವನ್ನು ಅವಲಂಬಿಸಿ ವಾರಕ್ಕೆ ಒಮ್ಮೆ ಬೃಹತ್ ತ್ಯಾಜ್ಯ ಸಂಗ್ರಹಣೆ ನಡೆಸಲಾಗುತ್ತದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು
ಸಂಗ್ರಹಿಸಲಾದ ತ್ಯಾಜ್ಯದಲ್ಲಿ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಅಧಿಕೃತ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುವುದು. ಮರುಬಳಕೆ ಅಸಾಧ್ಯವಾದ ಉಳಿದ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಲು ವೇಸ್ಟ್-ಟು-ಎನರ್ಜಿ ಘಟಕಗಳಿಗೆ ರವಾನಿಸಲಾಗುತ್ತದೆ. ಇದನ್ನೂ ಓದಿ: ಸರ್ಕಾರಕ್ಕೆ ಸಾರಿಗೆ ನೌಕರರ ಶಾಕ್; ಮೇ 19ಕ್ಕೆ ಬಸ್‌ಗಳ ಮುಷ್ಕರ, 20ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ
‘ಡಿಕ್ಲಟರ್’ ಆಪ್‌ನ ಉದ್ದೇಶವು ಬೃಹತ್ ತ್ಯಾಜ್ಯ ನಿರ್ವಹಣೆಯಲ್ಲಿ ಇರುವ ಕೊರತೆಯನ್ನು ನಿವಾರಿಸಿ, ಬೆಂಗಳೂರು ನಾಗರಿಕರಿಗೆ ವಿಶ್ವಾಸಾರ್ಹ ಹಾಗೂ ಪರಿಸರ ಸ್ನೇಹಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಒದಗಿಸುವುದಾಗಿದೆ. ಬೆಂಗಳೂರು ನಗರವನ್ನು ಸ್ವಚ್ಛ, ಸುಸ್ಥಿರ ಹಾಗೂ ರಸ್ತೆ ಬದಿ ತ್ಯಾಜ್ಯ ಮುಕ್ತ ನಗರವನ್ನಾಗಿ ರೂಪಿಸಲು ಬಿಎಸ್‌ಡಬ್ಲ್ಯೂಎಂಎಲ್ ಬದ್ಧವಾಗಿದೆ. ಇದನ್ನೂ ಓದಿ: ಟ್ರ‍್ಯಾಕ್ಟರ್-ಲಾರಿ ಅಪಘಾತದಲ್ಲಿ ಏಳು ಮಂದಿ ದುರ್ಮರಣ – ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಡಿಕ್ಲಟರ್ ಕಾರ್ಯನಿರ್ವಹಿಸುವ ವಿಧಾನ:
* ಗೂಗಲ್ ಸ್ಟೋರ್ ಅಥವಾ ಆಪಲ್ ಸ್ಟೋರ್‌ನಿಂದ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ.
* ಪ್ರಾಥಮಿಕ ವಿವರಗಳೊಂದಿಗೆ ನೋಂದಾಯಿಸಿ.
* ವಿಲೇವಾರಿ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿ.
* ಪಿಕ್ ಅಪ್ ಸಮಯವನ್ನು ನಿಗದಿಪಡಿಸಿ.
* ಬಿಎಸ್‌ಡಬ್ಲ್ಯೂಎಂಎಲ್ ತಂಡ ನಿಮ್ಮ ಮನೆ ಬಾಗಿಲಿಗೆ ಬಂದು ಸಂಗ್ರಹಿಸಲಿದೆ.
ಗೂಗಲ್ ಪ್ಲೇ ಸ್ಟೋರ್ ಲಿಂಕ್:
https://play.google.com/store/apps/details?id=com.dclutter.app&pli=1
ಆಪಲ್ ಆಪ್ ಸ್ಟೋರ್ ಲಿಂಕ್:
https://apps.apple.com/us/app/dclutter/id6755908090

