ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲ ಅಂತ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ.
24 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಚಿಕ್ಕಬಳ್ಳಾಪುರ ತಾಲೂಕಿನ ದರಬೂರು ಗ್ರಾಮದ ರುಚಿತಾಗೆ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ವೀರಾಪುರ ಗ್ರಾಮದ ಕೇಶವ ಜೊತೆ 4 ವರ್ಷಗಳ ಹಿಂದೆ ಮದುವೆಯಾಗಿದ್ದರು.

ಗಂಡ-ಹೆಂಡತಿ ನಡುವೆ ಬೇರೆ ಮನೆ ಮಾಡುವ ವಿಚಾರದಲ್ಲಿ ವೈಮನಸ್ಸು ಮಾಡಿದ್ದು, ಮಂಚನಬಲೆಯ ಸಂಬಂಧಿಕರ ಮನೆಗೆ ಬಂದಿದ್ದಳು. ಈ ವೇಳೆ ಮನನೊಂದು ರುಚಿತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

