ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮವಾಗಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಗಂಗಾವತಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಮಗನ ಮದುವೆಗೆ ಆಗಮಿಸಿದ ರೆಡ್ಡಿ, ನಾಳೆ ಕೊಪ್ಪಳಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಬಗ್ಗೆ ಭವಿಷ್ಯವನ್ನು ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಬಳ್ಳಾರಿಗೆ ರಾಹುಲ್ ಗಾಂಧಿ ಎಂಟ್ರಿ- ಸಂಕಷ್ಟದಲ್ಲಿ ಕೈ ಹಿಡಿದ ಸ್ಥಳದಲ್ಲಿ ಚುನಾವಣಾ ಪ್ರಚಾರಕ್ಕೆ ಕಹಳೆ
Advertisement
Advertisement
Advertisement
ದೇಶದಲ್ಲಿ ಅಲ್ಪ ಸ್ವಲ್ಪ ಕಾಂಗ್ರೆಸ್ ಇದೆ. ಇದೀಗ ರಾಹುಲ್ ಪಾದಾರ್ಪಣೆಯಿಂದ ಅದು ಕೂಡ ಸುಟ್ಟು ಭಸ್ಮವಾಗಲಿದೆ. ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿ ದೇವಸ್ಥಾನಕ್ಕೆ ಹೆಚ್ಚು ಹೋಗ್ತಿದ್ದಾರೆ ಇದಕ್ಕೆ ಕಾರಣ ನಾವು ಅಂದ್ರೆ ಬಿಜೆಪಿಯವರು ಈ ಹಿಂದೆ ಎಂದು ರಾಹುಲ್ ಗಾಂಧಿ ದೇವಸ್ಥಾನಕ್ಕೆ ಕಾಲಿಟ್ಟಿರಲಿಲ್ಲಾ. ಆದ್ರೆ ಇದೀಗ ಅವರು ದೇವಸ್ಥಾನಕ್ಕೆ ಹೋಗ್ತಿದ್ದಾರೆ. ನಮ್ಮಿಂದ ಆದ್ರೂ ಒಂದು ಒಳ್ಳೆ ಸಂಸ್ಕೃತಿ ಕಲಿತಿದ್ದಾರಲ್ವಾ ಅಷ್ಟೇ ಸಾಕು ಎಂದರು.
Advertisement
ಇತ್ತೀಚೆಗಷ್ಟೇ ರಾಮನ ಭಕ್ತರು ಕೊಲೆಗಡುಕರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, ನಾನು ಈವಾಗೇನೂ ಮಾತಾಡಲ್ಲ. ನಾಳೆ ಚುನಾವಣಾ ಸಂದರ್ಭದ ಸಮಾವೇಶದಲ್ಲಿ ಅವರಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರೋ ಬೆನ್ನಲ್ಲೇ ಶಾಸಕ ಆನಂದ್ ಸಿಂಗ್ ಹೊಸ ಶಪಥ
ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯನ್ನು ಸಿಎಂ ಅವರೇ ಇದಕ್ಕೆ ಉತ್ತರ ನೀಡಬೇಕು. ಸಿದ್ದರಾಮಯ್ಯ ಅವರು ಆನಂದ್ ಸಿಂಗ್ ಜೈಲು ಆಸಾಮಿ ಜೈಲಿಗೆ ಹೋಗಿ ಬಂದವರು ಅಂತಾ ಸಮಾವೇಶದಲ್ಲಿ ಹೇಳಿಕೊಂಡು ತಿರುಗಾಡಿದ್ದಾರೆ. ಈಗ ಅವರೇ ಆನಂದ್ ಸಿಂಗ್ ಅವರನ್ನು ಪಕ್ಷದಲ್ಲಿ ಸೇರಿಸಿಕೊಂಡಿದ್ದಾರೆ ಇದಕ್ಕೆ ತಕ್ಕ ಉತ್ತರ ಬಳ್ಳಾರಿ ಜನತೆ ನೀಡುತ್ತಾರೆ. ಈ ಸಾರಿ ಬಳ್ಳಾರಿಯಲ್ಲಿ 9 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಮತ್ತು ನೂರಕ್ಕೆ ನೂರರಷ್ಟು ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಯಾರಿಂದಲೂ ತಡೆಯಲು ಸಾಧ್ಯವಿಲ್ಲಾ ಎಂದು ತಮಗೆ ಪಕ್ಷದ ಮೇಲಿರುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.