ತಿರುವನಂತಪುರಂ: ವರ (Groom) ನಿಗೆ ವಧು (Bride) ವಿನ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿಜಿನ್ (22) ಎಂದು ಗುರುತಿಸಲಾಗಿದೆ. ಕಡುಕ್ಕಮೂಡುವಿನ ವೆಲ್ಲನಾಡು ನಿವಾಸಿಯಾಗಿರುವ ಈತ ಇದೀಗ ಕೇರಳ ಪೊಲೀಸ (Kerala Police) ರ ಬಂಧನದಲ್ಲಿದ್ದಾನೆ.
- Advertisement 2
- Advertisement 3
ವಿಜಿನ್ ಹಾಗೂ ವಧು ಸುಮಾರು 4 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತ ಹುಡುಗಿಯ ಕುಟುಂಬಸ್ಥರು ಆಕೆಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಪ್ರಿಯತಮ ವಿಜಿನ್, ಆಕೆಯ ಜೊತೆಗಿದ್ದ ಅಶ್ಲೀಲ ಫೋಟೋಗಳನ್ನು ವಾಟ್ಸಾಪ್ ಮೂಲಕ ವರನಿಗೆ ಕಳುಹಿಸಿದ್ದಾನೆ.
- Advertisement 4
ಇಷ್ಟು ಮಾತ್ರವಲ್ಲದೆ ವರನ ಮನೆಗೆ ತೆರಳಿ ಆತನ ಪೋಷಕರಿಗೆ ಕೂಡ ತೋರಿಸಿದ್ದಾನೆ. ವಧುವಿನ ಫೋಟೋ (Bride Photos) ಗಳನ್ನು ನೋಡಿದ ವರನ ಕಡೆಯವರು ಅಂದೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್ – ಗ್ಯಾಂಗ್ ಸ್ಟಾರ್ ಅತಿಕ್ ಪುತ್ರ ಎನ್ಕೌಂಟರ್ಗೆ ಬಲಿ
ಇತ್ತ ಪ್ರಕರಣ ಸಂಬಂಧ ವಿಜಿನ್ ನನ್ನು ಬಂಧಿಸಿ, ಆತನ ಮೇಲೆ ಕೆಸ್ ದಾಖಲಿಸಲಾಗಿದೆ. ಮದುವೆ ತಪ್ಪಿಸಲೆಂದೇ ಈ ಕೃತ್ಯ ಎಸಗಿರುವುದಾಗಿ ವಿಜಿನ್ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.