ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ತಮ್ಮ ಪಾದಾರ್ಪಣೆ ಪಂದ್ಯದ ವೇಳೆ ನಡೆದ ಘಟನೆಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ನೆಹ್ರಾ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದ ವೇಳೆ ಕಿತ್ತು ಹೋದ ಶೂ ಧರಿಸಿಯೇ ಆಡಿದ್ದಾಗಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಲು ನನ್ನ ಬಳಿ ಇದ್ದ ಒಂದು ಜೋಡಿ ಶೂಗಳನ್ನೇ ಬಳಿಸಿದ್ದೆ. ಅವುಗಳನ್ನು ನಾನು ರಣಜಿ ಪಂದ್ಯಗಳನ್ನಾಡುವ ವೇಳೆ ಹೆಚ್ಚು ಬಳಿಸಿದ್ದ ಕಾರಣ ಆಟದ ನಡುವೆ ಕಿತ್ತು ಬಂದಿತ್ತು. ನನ್ನ ಬಳಿ ಬೇರೆ ಶೂ ಇಲ್ಲದ ಕಾರಣ ಇನ್ನಿಂಗ್ಸ್ ವಿರಾಮದ ಸಮಯದಲ್ಲಿ ಕಿತ್ತು ಬಂದ ಶೂ ಹೊಲಿದುಕೊಂಡು ಪಂದ್ಯದಲ್ಲಿ ಆಡಿದ್ದೆ. ಇಂದಿಗೂ ಆ ಘಟನೆ ನನಗೆ ನೆನಪಿದೆ ಎಂದು ಹೇಳಿದ್ದಾರೆ.
Advertisement
Advertisement
1999ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ನೆಹ್ರಾ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದರು. ದೆಹಲಿಯ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ಮೈದಾನದಲ್ಲಿ ನೆಹ್ರಾ ಬೌಲಿಂಗ್ ಅಭ್ಯಾಸ ಮಾಡಿದ್ದಾಗಿ ತಿಳಿಸಿದ್ದಾರೆ. ಸ್ಟೆಷನ್ ಬಳಿಯ ಮೈದಾನಕ್ಕೆ ಹಲವರು ಬರುತ್ತಿದ್ದ ಕಾರಣ ಎಂದು ಒಬ್ಬನೇ ಇರುತ್ತಿರಲಿಲ್ಲ. ಕಲ್ಲುಗಳನ್ನು ಎಸೆದು ಬೌಲಿಂಗ್ ತರಬೇತಿ ಮಾಡಿದ್ದೆವು. ನನ್ನ ಕೋಚ್ ಬೌಲಿಂಗ್ ನಲ್ಲಿ ಹೊಸ ವೈವಿದ್ಯವನ್ನು ತೋರಿಸುವಂತೆ ಹೇಳುತ್ತಿದ್ದರು ಎಂದು ನೆಹ್ರಾ ತಮ್ಮ ಆರಂಭಿಕ ಜೀವನದ ಬಗ್ಗೆ ತಿಳಿಸಿದ್ದಾರೆ.
Advertisement
ಟೀಂ ಇಂಡಿಯಾ ಪರ 17 ಟೆಸ್ಟ್, 120 ಏಕದಿನ, 27 ಟಿ20 ಪಂದ್ಯಗಳನ್ನು ನೆಹ್ರಾ ಆಡಿದ್ದಾರೆ. ಇದೇ ವೇಳೆ ಧೋನಿ ಭವಿಷ್ಯದ ಕುರಿತ ಪ್ರಶ್ನೆಗೆ ಉತ್ತರಿಸುವ ನೆಹ್ರಾ, ಧೋನಿ ಫಿಟ್ನೆಸ್ ಕಾಯ್ದುಕೊಂಡು ಆಡುವ ಅವಕಾಶ ಇದ್ದರೆ ಈಗಲೂ ಅವರೇ ನನ್ನ ಮೊದಲ ಆಯ್ಕೆ. ಆದರೆ ಧೋನಿ ಯಾವಾಗ ಯಾವ ಶಾಕ್ ನೀಡುತ್ತಾರೆ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಅವರು ಸದ್ಯ ನಿವೃತ್ತಿ ಘೋಷಣೆ ಮಾಡದಿದ್ದರು ಅವರ ನಿವೃತ್ತಿ ನನಗೆ ನೋವುಂಟು ಮಾಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.