Womens IPL: ದಾಖಲೆಯ 4,669 ಕೋಟಿ ರೂ.ಗೆ ಮಹಿಳಾ ಐಪಿಎಲ್‍ನ 5 ತಂಡಗಳು ಹರಾಜು
- 1,289 ಕೋಟಿ ರೂ. ನೀಡಿ ಅಹಮದಾಬಾದ್ ಖರೀದಿಸಿದ ಅದಾನಿ ಗ್ರೂಪ್

ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‍ನ (Women’s Premier League) 5 ತಂಡಗಳು 4,699.99 ಕೋಟಿ ರೂ.ಗೆ ಹರಾಜಾಗಿ ದಾಖಲೆ ಬರೆದಿದೆ.
ಐದು ಫ್ರಾಂಚೈಸಿಗಳು ತಮಗೆ ಬೇಕಾದ ತಂಡಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ (IPL) ಟೂರ್ನಿಯಲ್ಲಿ ಬೆಂಗಳೂರು, ಅಹಮದಾಬಾದ್, ಮುಂಬೈ, ಡೆಲ್ಲಿ ಹಾಗೂ ಲಕ್ನೋ ತಂಡಗಳು ಕಣಕ್ಕಿಳಿಯಲಿವೆ. ಇದನ್ನೂ ಓದಿ: 951 ಕೋಟಿ ರೂ. ನೀಡಿ ಮಹಿಳಾ ಐಪಿಎಲ್ ಪ್ರಸಾರ ಹಕ್ಕು ಪಡೆದ Viacom18 – ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.
ಅದಾನಿ ಗ್ರೂಪ್ (Adani Sportsline Pvt Ltd) ದಾಖಲೆಯ ಮೊತ್ತ ನೀಡಿ ಅಹಮದಾಬಾದ್ (Ahmedabad) ಮಹಿಳಾ ಐಪಿಎಲ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಅದಾನಿ ಗ್ರೂಪ್ 1,289 ಕೋಟಿ ರೂ. ನೀಡಿ ಅಹಮದಾಬಾದ್ ಫ್ರಾಂಚೈಸ್‍ನ್ನು ಖರೀದಿಸಿದೆ.
ಉಳಿದ ಫ್ರಾಂಚೈಸಿಯು 1000 ಕೋಟಿಗಿಂತ ಅಧಿಕ ಬಿಡ್ ಮಾಡಲಿಲ್ಲ. ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 912.99 ಕೋಟಿ ರೂ. ನೀಡಿ ಮುಂಬೈ (Mumbai) ಫ್ರಾಂಚೈಸಿಯನ್ನು ಖರೀದಿ ಮಾಡಿದೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 901 ಕೋಟಿ ರೂ. ನೀಡಿ ಬೆಂಗಳೂರು (Bengaluru) ಫ್ರಾಂಚೈಸಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಜೆಎಸ್‍ಡಬ್ಲ್ಯೂ ಜಿಎಂಆರ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 810 ಕೋಟಿ ರೂ. ನೀಡಿ ಡೆಲ್ಲಿ (Delhi) ಫ್ರಾಂಚೈಸಿಯನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿ ಅಬ್ಬರ – 1,101 ದಿನಗಳ ಬಳಿಕ ಶತಕ ಸಿಡಿಸಿದ ಹಿಟ್‌ಮ್ಯಾನ್
https://twitter.com/BCCI/status/1618181540323946502
ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ 757 ಕೋಟಿ ರೂ. ನೀಡಿ ಲಕ್ನೋ (Lucknow) ಫ್ರಾಂಚೈಸಿಯನ್ನು ಖರೀದಿಸಲು ಯಶಸ್ವಿಯಾಗಿದೆ. ಈ ಮೂಲಕ ಒಟ್ಟು 4,669.99 ಕೋಟಿ ರೂ.ಗೆ 5 ಫ್ರಾಂಚೈಸ್‍ಗಳು ಹರಾಜಾಗಿವೆ.
ಈ ಮೂಲಕ 2008ರಲ್ಲಿ ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‍ಗಿಂತಲೂ ಹೆಚ್ಚು ಮೊತ್ತಕ್ಕೆ ಮಹಿಳಾ ಐಪಿಎಲ್ ತಂಡಗಳು ಹರಾಜಾಗಿ ದಾಖಲೆ ಬರೆದುಕೊಂಡಿದೆ. ಪುರುಷರ ಐಪಿಎಲ್ (IPL) ಆರಂಭಿಕ ಸೀಸನ್‌ನಲ್ಲಿ 8 ಫ್ರಾಂಚೈಸ್‌ಗಳು 2,894 ರೂ. ನೀಡಿ 8 ತಂಡಗಳನ್ನು ಖರೀದಿತ್ತು. ಈ ಮೊದಲು ಮಹಿಳಾ ಐಪಿಎಲ್‌ನ 2023 ರಿಂದ 2027ರ ವರೆಗಿನ ಪ್ರಸಾರ ಹಕ್ಕನ್ನು (Media Rights) ಬರೋಬ್ಬರಿ 951 ಕೋಟಿ ರೂ. ನೀಡಿ ವಯಾಕಾಮ್18 (Viacom18) ಖರೀದಿಸಿತ್ತು.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k